ನಾಳೆಯಿಂದ ೨ನೇ ಹಂತದ ಟಿಕೆಟ್ ಮಾರಾಟ

ನವದೆಹಲಿ,ಸೆ.೭-ಭಾರತದಲ್ಲಿ ಮುಂದಿನ ತಿಂಗಳು ೫ರಂದು ಆರಂಭವಾಗಲಿರುವ ಏಕದಿನ ವಿಶ್ವಕಪ್‌ಗೆ ಭಾರಿ ಬೇಡಿಕೆ ಬಂದಿದೆ. ಮೊದಲ ಆವೃತ್ತಿಯ ವಿಶ್ವಕಪ್‌ಗಾಗಿ ಐಸಿಸಿ ಮತ್ತು ಬಿಸಿಸಿಐ ಮಾರಾಟ ಮಾಡಿದ್ದ ಟಿಕೆಟ್‌ಗಳು ಕ್ಷಣಾರ್ಧದಲ್ಲಿ ಬಿಸಿ ದೋಸೆಯಂತೆ ಮಾರಾಟವಾದವು. ಭಾರಿ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು ಬಿಸಿಸಿಐ ಇನ್ನೂ ೪ ಲಕ್ಷ ಟಿಕೆಟ್‌ಗಳನ್ನು ಲಭ್ಯಗೊಳಿಸುವುದಾಗಿ ಘೋಷಿಸಿದೆ.
ಇವುಗಳನ್ನು ನಾಳೆಯಿಂದ (ಶುಕ್ರವಾರ) ಎರಡನೇ ಹಂತದಲ್ಲಿ ಮಾರಾಟಕ್ಕೆ ನಡೆಯಲಿದೆ. ಮೊದಲ ಹಂತದಲ್ಲಿ ದುಬಾರಿ ಟಿಕೆಟ್ ಗಳನ್ನು ಮಾರಾಟ ಮಾಡಲಾಗಿತ್ತು.ಎರಡನೇ ಹಂತದಲ್ಲಿ ಸಾಮಾನ್ಯ ದರದ ಟಿಕೆಟ್ ಗಳು ಲಭ್ಯವಾಗುವಂತೆ ವ್ಯವಸ್ಥೆ ಮಾಡಲಾಗಿದೆ.
ಆದರೆ, ಭಾರತ ಆಡುವ ಪಂದ್ಯಗಳಿಗೆ ಎಷ್ಟು ಟಿಕೆಟ್‌ಗಳಿವೆ ಎಂಬುದನ್ನು ಬಿಸಿಸಿಐ ಸ್ಪಷ್ಟಪಡಿಸಿಲ್ಲ. ಸಾಧ್ಯವಾದಷ್ಟು ಜನರಿಗೆ ಟಿಕೆಟ್ ಸಿಗುವಂತೆ ಮಾಡುವುದು ತನ್ನ ಗುರಿ ಎಂದು ಅವರು ಬಹಿರಂಗಪಡಿಸಿದ್ದಾರೆ. ಇದೇ ತಿಂಗಳ ೮ರಂದು ರಾತ್ರಿ ೮ ಗಂಟೆಯಿಂದ ಸಾಮಾನ್ಯ ಟಿಕೆಟ್‌ಗಳನ್ನು ಮಾರಾಟ ಮಾಡಲಾಗುವುದು. ಅಭಿಮಾನಿಗಳು ಅಧಿಕೃತ ವೆಬ್‌ಸೈಟ್ hಣಣಠಿs://ಣiಛಿಞeಣs.ಛಿಡಿiಛಿಞeಣತಿoಡಿಟಜಛಿuಠಿ.ಛಿom, ಬುಕ್ ಮೈ ಶೋ ವೆಬ್‌ಸೈಟ್ ಮತ್ತು ಅಪ್ಲಿಕೇಶನ್ ಮೂಲಕ ಟಿಕೆಟ್‌ಗಳನ್ನು ಖರೀದಿಸಬಹುದು. ಮುಂದಿನ ಹಂತದ ಟಿಕೆಟ್ ಯಾವಾಗ ಲಭ್ಯವಾಗಲಿದೆ ಎಂಬುದನ್ನು ನಂತರ ಬಹಿರಂಗಪಡಿಸಲಾಗುವುದು ಎಂದು ಬಿಸಿಸಿಐ ಹೇಳಿದೆ.