ನಾಳೆಯಿಂದ ಹುಣಸಿಹಡಗಿಲ್‍ನಲ್ಲಿ ಜಾತ್ರಾಮಹೋತ್ಸವ

ಕಲಬುರಗಿ ಆ 6: ತಾಲೂಕಿನ ಹುಣಸಿಹಡಗಿಲ್ ಗ್ರಾಮದಲ್ಲಿ ಪರಮಪೂಜ್ಯ ಬಸವಲಿಂಗಪ್ಪ ಅಪ್ಪಾಜಿ ಅವರ 18 ನೆಯ ಜಾತ್ರಾ ಮಹೋತ್ಸವ ನಾಳೆ ( ಆ 7) ಯಿಂದ ಮೂರು ದಿನಗಳವರೆಗೆ ನಡೆಯಲಿದೆ.
ಆ.7 ರಂದು ಬೆಳಿಗೆ 6 ಗಂಟೆಗೆ ರುದ್ರಾಭಿಷೇಕ,ಸಹಸ್ರ ಬಿಲ್ವಾರ್ಚನೆ, ರಾತ್ರಿ 8 ಗಂಟೆಗೆ ಉಚ್ಛಾಯಿ ಕಾರ್ಯಕ್ರಮ ನಂತರ ವಿವಿಧ ಭಜನಾಮಂಡಳಿಗಳಿಂದ ಭಜನಾ ಕಾರ್ಯಕ್ರಮ ನಡೆಯಲಿದೆ.8 ರಂದು ಸಂಜೆ 6 ಗಂಟೆಗೆ ರಥೋತ್ಸವ,ನಂತರ ಮದ್ದುಸುಡುವ ಕಾರ್ಯಕ್ರಮ, ಧರ್ಮಸಭೆ ಜರುಗಲಿವೆ.9 ರಂದು ಮಧ್ಯಾಹ್ನ 2 ಗಂಟೆಗೆ ಜಂಗಿ ಪೈಲ್ವಾನರಿಂದ ಕುಸ್ತಿ ನಡೆಯಲಿದೆ ಎಂದು ಹಣಮಂತರಾವ ಬಿ ಮಂಗಾಣಿ ಅವರು ತಿಳಿಸಿದ್ದಾರೆ.