ನಾಳೆಯಿಂದ ಸಂವಿಧಾನ ಜಾಗೃತಿ ಜಾಥಾ

(ಸಂಜೆವಾಣಿ ವಾರ್ತೆ)
ನವಲಗುಂದ,ಫೆ15: ಮಕ್ಕಳಲ್ಲಿ ಮತ್ತು ಜನಸಾಮಾನ್ಯರಲ್ಲಿ ಸಂವಿಧಾನದ ಬಗ್ಗೆ ತಿಳುವಳಿಕೆ ಮೂಡಿಸುವುದು ಭಾರತ ಸಂವಿಧಾನದ 75ನೇ ವರ್ಷದ ಅಂಗವಾಗಿ ಸವಿಧಾನ ಜಾಗೃತಿ ಜಾಥಾ ಕಾರ್ಯಕ್ರಮಗಳನ್ನು ರಾಷ್ಟ್ರಮಟ್ಟದಲ್ಲಿ ರಾಜ್ಯಮಟ್ಟದಲ್ಲಿ ಅದೇ ರೀತಿ ಜಿಲ್ಲಾ ಮಟ್ಟ ಮತ್ತು ತಾಲೂಕು ಮಟ್ಟ ಹಮ್ಮಿಕೊಳ್ಳಲಾಗಿದೆ ಎಂದು ತಾಲೂಕು ಸಮಾಜ ಕಲ್ಯಾಣ ಅಧಿಕಾರಿ ಕಪಿಲಾ ಎಲುವಿಗೆ ಹೇಳಿದರು.

ಅವರು ಪಟ್ಟಣದ ಸಮಾಜ ಕಲ್ಯಾಣ ಇಲಾಖೆಯ ಕಚೇರಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ಸಂವಿಧಾನ ದಿನಾಚರಣೆ ಪ್ರಯುಕ್ತ ಜಾಥಾವು ಅಣ್ಣಿಗೇರಿ ತಾಲೂಕಿನ ಫೆ.16 ಬದ್ರಾಪುರ ನಲವಡಿ ಊರುಗಳಿಂದ ಪ್ರಾರಂಭವಾಗಿ ದಿನಾಂಕ 21. ನವಲಗುಂದ ತಾಲ್ಲೂಕಿನ ಕಾಲವಾಡ. ಬೆಳಹಾರ ಗ್ರಾಮಗಳಿಗೆ ಮುಕ್ತಾಯವಾಗಲಿದೆ.

ಮುಖ್ಯ ಸಂಪನ್ಮೂಲ ವ್ಯಕ್ತಿಗಳಾಗಿ ಡಾ. ಧನವಂತ್ ಹಾಜವ ಗೋಳ. ಮಲ್ಲಿಕಾರ್ಜುನ ಗುಮ್ಮಗೋಳ. ಧಾರವಾಡ ಜಿಲ್ಲಾ ನ್ಯಾಯಾಧೀಶರು. ಪೆÇ್ರಫೆಸರ್ ನಾಗರಾಜ್ ಶಿರೂರು. ವಿಷ್ಣು ಬಿ ಗುರನ್ನವರ್. ಡಾಕ್ಟರ್ ಎಸ್ ಬಿ ಸುಗಂಧಿ. ಹನುಮಂತಗೌಡ ದೇಸಾಯಿ. ಬಸವ ಲಿಂಗಪ್ಪ ಅರವಳದ ಭಾಗವಹಿಸುವರು

ಸತತ ಏಳು ದಿನಗಳ ಕಾರ್ಯಕ್ರಮ ಜರುಗಲಿದ್ದು ಸಂಸ್ಕೃತಿಕ ಕಾರ್ಯಕ್ರಮಗಳು ಕಲಾವಿದರ ತಂಡಗಳು ಮಹಿಳೆಯರ ಡೊಳ್ಳು ಕುಣಿತ ಅನೇಕ ಗಣ್ಯ ವ್ಯಕ್ತಿಗಳು ಹಾಗೂ ಆ ಗ್ರಾಮದ ಶಾಲಾ ಮಕ್ಕಳು ಜನಪ್ರತಿನಿಧಿಗಳೊಂದಿಗೆ ಕಾರ್ಯಕ್ರಮ ಜರುಗುವುದು ಎಂದು ಕಪಿಲಾ ಎಲುವಿಗೆ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಶೋಭಾ. ಹಿರೇಮಠ್. ಮಂಜುಳಾ ಹುರಕಡ್ಲಿ, ಕಾಂಚನಾ ಕುಂದರಗಿ. ಉಪಸ್ಥಿತರಿದ್ದರು