ನಾಳೆಯಿಂದ ಶಾಲೆ ಆರಂಭ ಪೂರ್ವ ಸಿದ್ಧತೆ :ಥಾರ್ಮಲ್ ಸ್ಕ್ಯಾನರ್ ಕೊರತೆ-ಡಿಡಿಪಿಐ

ರಾಯಚೂರು.ಡಿ.೩೧.ಕೋವಿಡ್ ತಾಂತ್ರಿಕ ಸಲಹಾ ಸಮಿತಿಯ ಮಾರ್ಗದರ್ಶನದಂತೆ ಶಿಕ್ಷಣ ಇಲಾಖೆ ರೂಪಿಸಿದ ಎಸ್‌ಒಪಿ ಆಧರಿಸಿ ಎಸ್ ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ತರಗತಿ ನಾಳೆ ಆರಂಭವಾಗುತ್ತಿರುವುದರಿಂದ ಶಾಲಾಕಾಲೇಜುಗಳಲ್ಲಿನ ಪೂರ್ವ ಸಿದ್ಧತೆಯನ್ನು ನಡೆಸಲಾಗುತ್ತಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರಾದ ಎಂ.ಎಸ್.ಗೋನಾಳ ಅವರು ಹೇಳಿದರು
ಅವರಿಂದು ಸಂಜೆವಾಣಿಯೊಂದಿಗೆ ಮಾತನಾಡುತ್ತಾ ನಾಳೆಯಿಂದ ಶಾಲಾ-ಕಾಲೇಜುಗಳು ಪ್ರಾರಂಭವಾಗುತ್ತಿದ್ದು, ಈಗಾಗಲೇ ಶಾಲೆಗಳಿಗೆ ಕಳೆದ ಮೂರು ದಿನಗಳಿಂದ ಸ್ಯಾನಿಟೇಷನ್ ಮಾಡಿಸಿ ಕೊಠಡಿಗಳನ್ನು ಸ್ವಚ್ಛ ಗಿಳಿಸಲಾಗಿದೆ.ಜಿಲ್ಲೆಯಲ್ಲಿ ಒಟ್ಟು ೪೫೫ ಪ್ರೌಢಶಾಲೆಗಿದ್ದು,೮೩೭ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ವಿದ್ಯಾಘಮವನ್ನು ಮಾಡುತ್ತಿದ್ದು, ನಾವು ಇದನ್ನು ತಂಡಗಳಲ್ಲಿ ಬೋಧನೆ ಮಾಡಿ ಒಂದು ತಂಡದಲ್ಲಿ ೧೫ ರಿಂದ ೨೦ ಮಕ್ಕಳಿಗೆ ಬೋಧನೆ ಮಾಡಲಾಗುತ್ತಾದೆ.
ಶಾಲೆಯಲ್ಲಿ ಕೊರೊನದ ಬಗ್ಗೆ ಮುನ್ನೆಚ್ಚರಿಕೆ ಕ್ರಮವಾಗಿ
ಮಕ್ಕಳಿಗೆ ಕುಡಿಯಲು ಬಿಸಿನೀರಿನ ವ್ಯವಸ್ಥೆ,ಕೈ ತೊಳೆಯಲು ಸಾಬೂನು ನೀಡಲಾಗುವುದು.
ಆರೋಗ್ಯ ಇಲಾಲೆಯಿಂದ ಯಾವುದೇ ಕಿಟ್ ನೀಡಿಲ್ಲ,ಗ್ರಾ.ಪಂ. ಚುನಾವಣೆಯಲ್ಲಿ ಬಳಸಿದ ಥಾರ್ಮಲ್ ಸ್ಕ್ಯಾನರ್ ಗಳನ್ನು ಚುನಾವಣಾ ಅಧಿಕಾರಿಗಳು ನೀಡಿದ್ದಾರೆ.ಸರ್ಕಾರಿ ಶಾಲೆಗಳಿಗೆ ಒಟ್ಟು ೨೧೩ ಥಾರ್ಮಲ್ ಸ್ಕ್ಯಾನರ್ ಗಳು ಬೇಕಾಗಿದ್ದು, ಖಾಸಗಿ ಶಾಲೆಗಳಲ್ಲಿ ಅವರೇ ತೆಗೆದುಕೊಳ್ಳುತ್ತಾರೆ.
೮೩೭ ಪ್ರಾಥಮಿಕ ಶಾಲೆಗಳಿಗೆ ಥಾರ್ಮಲ್ ಸ್ಕ್ಯಾನರ್ ಅವಶ್ಯಕತೆ ಇದೆ.
ಶಾಲಾ ಅನುದಾನ ಬಳಸಿ ಶಾಲೆಯ ಮುಖ್ಯಗುರುಗಳು ವಿದ್ಯಾರ್ಥಿಗಳಿಗೆ ಮಾಸ್ಕ್ ಗಳನ್ನು ನೀಡಲು ಸೂಚಿಸಿದ್ದೇವೆ.ಈ ಬಾರಿ ೧೦ನೇ ತರಗತಿಯ ವಿದ್ಯಾರ್ಥಿಗಳು ೧೪೮೩೭ ಸರ್ಕಾರಿ ಶಾಲೆಯವರಾಗಿದ್ದು, ಒಟ್ಟು ೩೦ಸಾವಿರ ಮಕ್ಕಳು ಎಸ್‌ಎಸ್‌ಎಲ್‌ಸಿ ಪರೀಕ್ಷೆ ಯನ್ನು ಬರೆಯುತ್ತಾರೆ. ಅವರಿಗಾಗಿ ಶಾಲಾ ವರು ಮಕ್ಕಳಿಗೆ ಅನುಗುಣವಾಗಿ ತರಗತಿಯನ್ನು ಮಾಡಲಾಗುತ್ತದೆ.ಈಗಾಗಲೇ ಸುಮಾರು ಶೇ.೩೦ರಷ್ಟು ಮಕ್ಕಳಿಗೆ ಕೋವಿಡ್ ಪರೀಕ್ಷೆ ಮಾಡಲಾಗಿದೆ ಎಂದು ಹೇಳಿದರು.