ನಾಳೆಯಿಂದ ವಟ್ಟಮ್ಮ ನಹಳ್ಳಿ  ಬಸವೇಶ್ವರ ಕಾರ್ತಿಕೋತ್ಸವ.


 ಸಂಜೆವಾಣಿ ವಾರ್ತೆ
 ಹಗರಿಬೊಮ್ಮನಹಳ್ಳಿ: ಡಿ.31 ತಾಲೂಕಿನ ವಟ್ಟಮ್ಮನಹಳ್ಳಿ ಗ್ರಾಮದಲ್ಲಿ ನಾಳೆಯಿಂದ ಎರಡು ದಿನಗಳ ಕಾಲ ಶ್ರೀ ಬಸವೇಶ್ವರ ಸ್ವಾಮಿಯ 29ನೇ ವರ್ಷದ ಕಾರ್ತಿಕೋತ್ಸವ ಜರುಗಲಿದೆ
 ಗ್ರಾಮದಲ್ಲಿ ಶ್ರೀ ವೀರಭದ್ರೇಶ್ವರ ಹಲಗೆ ಹಾಗೂ ನೂತನ ಅಗ್ನಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸ್ವಾಮಿಯ ಕೃಪೆಗೆ ಭಕ್ತಾದಿಗಳು  ಪಾತ್ರರಾಗಬೇಕು. ಮಂಗಳವಾರ ರಾತ್ರಿ ಸಪ್ತಸ್ವರ ಆರ್ಕೆಸ್ಟ್ರಾ ಭದ್ರಾವತಿ ಇವರಿಂದ ರಸಮಂಜರಿ ಕಾರ್ಯಕ್ರಮ ನಡೆಯಲಿದೆ ಗ್ರಾಮಸ್ಥರು ತಿಳಿಸಿದ್ದಾರೆ.