ನಾಳೆಯಿಂದ ಲಕ್ಷ್ಮೀನರಸಿಂಹಸ್ವಾಮಿ ಜಾತ್ರೆ

ತುಮಕೂರು, ಮಾ, ೮- ಬೆಳ್ಳಾವಿ ಹೋಬಳಿಯ ಹೆಗ್ಗೆರೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ವಕ್ಕೋಡಿ ಹಳೇ ಗೊಲ್ಲರ ಹಟ್ಟಿಯ ಶ್ರೀ ಲಕ್ಷ್ಮೀ ನರಸಿಂಹಸ್ವಾಮಿಯ ಕದರಿ ಹುಣ್ಣಿಮೆ ಹಾಗೂ ಜಾತ್ರಾ ಮಹೋತ್ಸವ ಮಾ. ೯ ರಿಂದ ಏರ್ಪಡಿಸಲಾಗಿದೆ.
ಮಾ.೯ ರಂದು ಶ್ರಿ ಲಕ್ಷ್ಮೀನರಸಿಂಹಸ್ವಾಮಿಗೆ ಗಂಗಾಪೂಜೆ ನೆರವೇರಿಸಿದ ಬಳೀಕ ಮಹಾಮಂಗಳಾರತಿ ನೆರವೇರಲಿದ್ದು, ಬಸವನಿಗೆ ಮುದ್ರೆ ಹಾಕಲಾಗುತ್ತದೆ. ಮಾ.೧೦ ರಂದು ನಾಗದೇವತೆಗೆ ಪೂಜೆ ಸಲ್ಲಿಸಲಾಗುತ್ತದೆ. ಮಾ. ೧೧ ರಂದು ಕಳಸರಾಧನೆ ಮತ್ತು ಸಂಜೆ ದೀಪೋತ್ಸವ ಮತ್ತು ಮಹಾಮಂಗಳಾರತಿಯನ್ನು ಏರ್ಪಡಿಸಲಾಗಿದೆ.
ಸಂಜೆ ೭ ಗಂಟೆಗೆ ಅನ್ನದಾಸೋಹ ಆಯೋಜಿಸಲಾಗಿದೆ. ಮಾ. ೧೩ ರಂದು ವಕ್ಕೋಡಿ ಗ್ರಾಮದ ಹಳೆಗದ್ದುಗೆಯಲ್ಲಿ ಬೆಳಿಗ್ಗೆ ೧೦.೩೦ ಗಂಟೆಗೆ ಶ್ರೀ ಲಕ್ಷ್ಮೀ ನರಸಿಂಹಸ್ವಾಮಿಗೆ ಅದ್ಧೂರಿ ಮೆರವಣಿಗೆ ಜರುಗಲಿದೆ.
ಜಾತ್ರಾ ಮಹೋತ್ಸವಕ್ಕೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ದೇವರ ಕೃಫೆಗೆ ಪಾತ್ರರಾಗುವಂತೆ ಅರ್ಚಕರಾದ ಲೋಕೇಶ್ ತಿಳಿಸಿದ್ದಾರೆ.