ನಾಳೆಯಿಂದ ಮೇ 4 ತನಕ ರಾತ್ರಿ ಕರ್ಪ್ಯೂ: ಮತ್ತಷ್ಟು ಕಠಿಣ

ಬೆಂಗಳೂರು, ಏ.20- ಕೊರೋನಾ‌ ಸೋಂಕು ಗಣನೀಯವಾಗಿ ‌ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ನಾಳೆ ರಾತ್ರಿ 9 ಗಂಟೆಯಿಂದ ಮೇ.4 ರ ಬೆಳಗ್ಗೆ 6 ಗಂಟೆಯ ತನಕ‌ ರಾತ್ರಿ ಕರ್ಪ್ಯೂ ಮತ್ತಷ್ಟು ಕಠಿಣ ನಿಯಮ ಜಾರಿ ಮಾಡಿ ರಾಜ್ಯ ಸರ್ಕಾರ ಹೊಸ ಮಾರ್ಗಸೂಚಿ ಪ್ರಕಟಿಸಿದೆ.

ಅಗತ್ಯ ಸೇವೆಗಳನ್ನು ಹೊರತುಪಡಿಸಿ ಇನ್ನುಳಿದ ವೈಯಕ್ತಿಕವಾಗಿ ಸೇರಿದಂತೆ ಎಲ್ಲಾ ವಾಹನ ಸಂಚಾರವನ್ನು ಸಂಪೂರ್ಣವಾಗಿ ನಿರ್ಬಂಧಿಸಿ ಸರ್ಕಾರ ಹೊಸ ಮಾರ್ಗಸೂಚಿ ಪ್ರಕಟಿಸಿದೆ.

ರಾತ್ರಿ ಕರ್ಪ್ಯೂ ಜೊತೆಗೆ ವೀಕೇಂಡ್ ಕರ್ಪ್ಯೂ ನಿಯಮ ಕಠಿಣ ಮಾಡಿ ಸರ್ಕಾರ ಮಾರ್ಗ ಸೂಚಿ ಪ್ರಕಟಿಸಿದೆ.

ರಾಜ್ಯಪಾಲ ವಜುಭಾಯಿ ವಾಲಾ ನೇತೃತ್ವದಲ್ಲಿ ನಡೆದ ಸರ್ವಪಕ್ಷಗಳ ನಾಯಕರ ಸಭೆಯ ಬಳಿಕ ಎಲ್ಲರ ಅಭಿಪ್ರಾಯ ಸಂಗ್ರಹಿಸಿ ಮುಖ್ಯಮಂತ್ರಿ ಯಡಿಯೂರಪ್ಪ ಅವರೊಂದಿಗೆ ಚರ್ಚಿಸಿ ಸರ್ಕಾರದ ಮುಖ್ಯ ಕಾರ್ಯದರ್ಶಿ‌ ಪಿ. ರವಿಕುಮಾರ್ ನೂತನ ಮಾರ್ಗಸೂಚಿಗಳನ್ನು ಪ್ರಕಟಿಸಿದ್ದಾರೆ.

ಶಾಲೆ ಕಾಲೇಜು ಬಂದ್:

ಶಾಲೆ-ಕಾಲೇಜು ತರಬೇತಿ ಸಂಸ್ಥೆಗಳು,ಶಿಕ್ಷಣ ಸಂಸ್ಥೆಗಳನ್ನು ಮುಚ್ಚುವಂತೆ ಆದೇಶಿಸಲಾಗಿದೆ ಆನ್ ಲೈನ್ ತರಗತಿಗಳು ಮತ್ತು ದೂರಶಿಕ್ಷಣ ತರಗತಿಗಳು ಎಂದಿನಂತೆ ಮುಂದುವರಿಯಲು ಅವಕಾಶ ಮಾಡಿಕೊಡಲಾಗಿದೆ‌.

ಚಿತ್ರಮಂದಿರ , ಶಾಪಿಂಗ್ ಮಾಲ್, ವ್ಯಾಯಾಮ‌ಶಾಲೆ, ಯೋಗ ಕೇಂದ್ರಗಳು,ಸ್ಪಾ,ಕ್ರೀಡಾ ಸಂಕೀರ್ಣ, ಈಜುಕೊಳ ಮನರಂಜನಾ ಪಾರ್ಕ್ ಮತ್ತು ಮಲ್ಟಿಪ್ಲೆಕ್ಸ್ ಸಂಪೂರ್ಣವಾಗಿ ಮಚ್ಚುವಂತೆ ಸೂಚಿಸಲಾಗಿದೆ ಎಂದು ರವಿ ಕುಮಾರ್ ತಿಳಿಸಿದ್ದಾರೆ.

ಭಾರತೀಯ ಈಜು ಒಕ್ಕೂಟದಿಂದ ಅನುಮತಿ ಮೇರೆಗೆ ಕ್ರೀಡಾಪಟುಗಳಿಗೆ ತರಬೇತಿಗಾಗಿ ಈಜುಕೊಳ ಬಳಸಲು ಅನುವು ಮಾಡಿಕೊಡಲಾಗಿದೆ.

ಎಲ್ಲ ರಾಜಕೀಯ ಧಾರ್ಮಿಕ ಮನರಂಜನಾತ್ಮಕ ಸಭೆ-ಸಮಾರಂಭಗಳನ್ನು ಕಟ್ಟುನಿಟ್ಟಾಗಿ ನಿಷೇಧ ಹೇರಲಾಗಿದೆ. ರೆಸ್ಟೋರೆಂಟ್ ಗಳು ಮತ್ತು ಹೋಟೆಲ್ ನಲ್ಲಿ ಮನೆಗೆ ಪಾರ್ಸೆಲ್ ಕೊಡಲು ಮಾತ್ರ ಅವಕಾಶ ಕಲ್ಪಿಸಲಾಗಿದೆ.

ಕಟ್ಟಡ ನಿರ್ಮಾಣಕ್ಕೆ ಅವಕಾಶ:

ಕೋರೋನಾ ಸೋಂಕಿನ ನಡುವೆ ಹಲವು ನಿರ್ಬಂಧಗಳನ್ನು ಸರ್ಕಾರ ಜಾರಿಗೊಳಿಸಿದ್ದರೂ‌ ಕಟ್ಟಡ ನಿರ್ಮಾಣಕ್ಕೆ ಸರ್ಕಾರ ಅನುಮತಿ ನೀಡಿದೆ

ಜೊತೆಗ ಕೃಷಿ ಚಟುವಟಿಕೆಗಳಿಗೂ ಅವಕಾಶ ಮಾಡಿಕೊಡಲಾಗಿದೆ. ಕೋಲ್ಡ್ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸುವ ಮೂಲಕ ಈ ಚಟುವಟಿಕೆಗಳನ್ನು ಆರಂಭಿಸಲು ರಾಜ್ಯ ಸರ್ಕಾರ ಮಾರ್ಗಸೂಚಿ ಯಲ್ಲಿ ಅನುವು ಮಾಡಿಕೊಟ್ಟಿದೆ.

ಕೈಗಾರಿಕೆಗೆಳಿಗೆ ಅವಕಾಶ;

ಕೈಗಾರಿಕೆಗಳು ಮತ್ತು ಇತರ ಉತ್ಪಾದನಾ ವಲಯಗಳಲ್ಲಿ ಮಾರ್ಗಸೂಚಿಗಳನ್ನು ತಪ್ಪದೆ ಪಾಲಿಸುವ ಜೊತೆಗೆ ಕರ್ತವ್ಯ ನಿರ್ವಹಣೆಗೆ ಅವಕಾಶ ಮಾಡಿಕೊಡಲಾಗಿದೆ.

ಕೈಗಾರಿಕೆಗಳು ಸೇರಿದಂತೆ ಇನ್ನಿತರ ವಲಯಗಳಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿಗಳು ಮತ್ತು ನೌಕರರು ಸಂಸ್ಥೆಗಳು ನೀಡಿದ ಗುರುತಿನ ಚೀಟಿಯನ್ನು ಪ್ರದರ್ಶನ ಮಾಡಿ ಓಡಾಟಕ್ಕೆ ಅವಕಾಶ ಮಾಡಿಕೊಡಲಾಗಿದೆ.

ಪಡಿತರ ಅಂಗಡಿ ಓಪನ್:

ರಾಜ್ಯದಲ್ಲಿ ಪಡಿತರ ಅಂಗಡಿಗಳನ್ನು ತೆರೆಯಲು ಸರ್ಕಾರ ಅವಕಾಶ ಮಾಡಿಕೊಡಲಾಗಿದೆ ಇದರ ಜೊತೆಗೆ ಹಣ್ಣಿನ ಅಂಗಡಿ , ತರಕಾರಿ ಹಾಲು, ನೀರು ಜಾನುವಾರುಗಳ ಮೇವು ಸೇರಿದಂತೆ ಇನ್ನಿತರ ಅಗತ್ಯ ಕೆಲಸಗಳಿಗೆ ಅವಕಾಶ ಮಾಡಿಕೊಡಲಾಗಿದೆ.

ಏ.23 ರ ಬಳಿಕೆ ಮಾರುಕಟ್ಟೆ ಸ್ಥಳಾಂತರ:

ಏಪ್ರಿಲ್ 23ರ ಬಳಿಕ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಇರುವ ಪ್ರಮುಖ ಮಾರುಕಟ್ಟೆಗಳನ್ನು ವಿಶಾಲ ಪ್ರದೇಶಕ್ಕೆ ಸ್ಥಳಾಂತರ ಮಾಡುವುದಾಗಿ ಅವರು ತಿಳಿಸಿದ್ದಾರೆ.

ಮಧ್ಯದಂಗಡಿಗೆ ಹೋಟೆಲ್ ರೆಸ್ಟೋರೆಂಟ್ ಗಳಲ್ಲಿ ಮನೆಗೆ ತೆಗೆದುಕೊಂಡು ಹೋಗಲು ಮಾತ್ರ ಅವಕಾಶ ಕಲ್ಪಿಸಲಾಗಿದೆ.

ಯಾವುದಕ್ಕೆಲ್ಲಾ ಅವಕಾಶ:

  • ಅಗತ್ಯ ಸೇವೆಗಳಿಗೆ ಅವಕಾಶ
  • ಬ್ಯಾಂಕುಗಳು ವಿಮಾ ಕಂಪನಿಗಳು ಕಾರ್ಯನಿರ್ವಹಣೆ
  • ಕೈಗಾರಿಕೆಗಳು ಮತ್ತು ಉತ್ಪಾದನಾ ವಲಯಗಳು ಎಂದಿನಂತೆ ಕಾರ್ಯನಿರ್ವಹಣೆ ಸಿಬ್ಬಂದಿಗಳು ಗುರುತಿನ ಚೀಟಿ ತೋರಿಸಿ ಸಂಚಾರಕ್ಕೆ ಅನುವು
  • ಮಾಧ್ಯಮಗಳಿಗೆ ಅವಕಾಶ
  • ಹಣ್ಣು ತರಕಾರಿ ಸೇರಿದಂತೆ ಇನ್ನಿತರ ಅಗತ್ಯ ಸೇವೆಗಳ ಎಂದಿನಂತೆ

ಅವಕಾಶವಿಲ್ಲ:

  • ಶಾಲಾ ಕಾಲೇಜು ಬಂದ್
  • ಏಪ್ರಿಲ್ 23ರಿಂದ ಮಾರುಕಟ್ಟೆಗಳು ಸ್ಥಳಾಂತರ
  • ಈಜುಕೊಳ ವ್ಯಾಯಾಮ ಶಾಲೆ, ಸ್ಪಾ ಬಂದ್,
  • ಚಿತ್ರಮಂದಿರ ಮಲ್ಟಿಪ್ಲೆಕ್ಸ್ ಗಳು ಕೂಡ ಬಂದ್.
  • ಹೋಟೆಲ್ ಮತ್ತು ಬಾರ್ಗಳಲ್ಲಿ ಮನೆಗೆ ತೆಗೆದುಕೊಂಡು ಹೋಗಲು ಅವಕಾಶ