ಕಲಬುರಗಿ: ಜೂ.2:ಹಿಂದೂ – ಮುಸಲ್ಮಾನ ಭಾವೈಕ್ಯತಾ ಸಂಕೇತದ ಅಫಜಲಪುರ ತಾಲೂಕಿನ ಭೈರಾಮಡಗಿ ಗ್ರಾಮದ ಹಜರತ್ ಪೀರ ಪೈಗಂಬರ ದಾವಲ ಮಲೀಕ ಜಾತ್ರಾ ಮಹೋತ್ಸವ ಜೂನ್ 3 ರಿಂದ ಮೂರು ದಿನಗಳ ಕಾಲ ಜರುಗಲಿದೆ.
3 ರಂದು ಶನಿವಾರ ರಾತ್ರಿ 8 ಗಂಟೆಯಿಂದ ಗುರುವಿನ ಗಂಧ ಕಳಸವು ವಿಶ್ವಕರ್ಮ ಪೂಜಾರಿಗಳ ಮನೆಯಿಂದ ಮಕ್ಕಳ ಚಿಣಿಕೋಲ ಆಟದೊಂದಿಗೆ ಪುರ ಪ್ರವೇಶ ಮಾಡಿ ರಾತ್ರಿ 11 ಕ್ಕೆ ಮಂದಿರಕ್ಕೆ ಬಂದು ತಲುಪುವುದು.
ಮರುದಿನ ಜೂ. 4ರಂದು ದೀಪೆÇೀತ್ಸವ ಮತ್ತು ಸೂರ್ಯೋದಯದಿಂದ ಸಕಲ ಸದ್ಭಕ್ತರಿಂದ ಹರಕೆಯ ಕಾರ್ಯಕ್ರಮಗಳು ನಡೆಯಲಿವೆ. ಅದೇ ದಿನ ದೇವಿಂದ್ರಪ್ಪ ಚಿಂಚನಸೂರ ಮತ್ತು ಇನ್ನೂಳಿದ ಮೇಳಗಳಿಂದ ಗೀ- ಗೀ ಪದಗಳು ಜರುಗಲಿವೆ.
ಮರುದಿನ ಜೂನ್ 5ರ ಸೋಮವಾರದಂದು ದೀಪ ಹಾಗೂ ಪ್ರಸಿದ್ಧ ಪೈಲ್ವಾನರಿಂದ ಕುಸ್ತಿ ಪಂದ್ಯಗಳು ನಡೆಯಲಿವೆ. ಮೂರು ದಿನಗಳ ಈ ಜಾತ್ರಾ ಮಹೋತ್ಸವದಲ್ಲಿ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಭಕ್ತ ಮಂಡಳಿ ಕೋರಿದೆ.