ನಾಳೆಯಿಂದ ಬಿಜೆಪಿಯ
  “ಬೂತ್ ವಿಜಯ ಅಭಿಯಾನ”


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಜ.01: ಪ್ರಧಾನಿ  ನರೇಂದ್ರ ಮೋದಿ,  ರಾಜ್ಯದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಯವರ ನೇತೃತ್ವದ “ಡಬಲ್ ಇಂಜಿನ್ ಸರ್ಕಾರ” ರಾಜ್ಯದ ಅಭಿವೃದ್ದಿಗೆ ಹೆಚ್ಚಿನ ವೇಗ ನೀಡಿದೆ. ಶೋಷಿತ, ಬಡವ, ದಲಿತ, ರೈತ, ಮಹಿಳೆ ಹಾಗೂ ಯುವಕರೆಲ್ಲರ ದೃಷ್ಟಿಯಿಂದ ಅನೇಕ ಯೋಜನೆಗಳನ್ನು ಜಾರಿಗೆ ತರಲಾಗಿದೆಂದು ನಗರ ಶಾಸಕ ಗಾಲಿ ಸೋಮಶೇಖರ ರೆಡ್ಡಿ, ಪಕ್ಷದ ಜಿಲ್ಲಾ ಅಧ್ಯಕ್ಷ ಗೋನಾಳ್ ಮುರಹರಗೌಡ ಹೇಳಿದರು.
ಅವರು ಇಂದು ನಗರದ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ.‌ ಪಕ್ಷದ  ರಾಜ್ಯ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್‍ರವರ ನೇತೃತ್ವದಲ್ಲಿ ರಾಜ್ಯದಲ್ಲಿ ಪಕ್ಷದ ಸಂಘಟನೆ ಅತ್ಯಂತ ಸಕ್ರೀಯವಾಗಿ  ಸಮರ್ಥವಾಗಿ ಕಾರ್ಯ ನಿರ್ವಹಿಸುತ್ತಿದೆ. ಸಂಘಟನೆಯ ವ್ಯವಸ್ಥೆಯನ್ನು ಕಟ್ಟಕಡೆಯ ಮತಗಟ್ಟೆಯಲ್ಲಿಯೂ ಸಶಕ್ತಗೊಳಿಸಲು ನಾಳೆಯಿಂದ ಜ  12 ರವರೆಗೆ  ಪ್ರತಿ ಮತಗಟ್ಟೆಯಲ್ಲಿ “ಬೂತ್ ವಿಜಯ ಅಭಿಯಾನ”ವನ್ನು ಹಮ್ಮಿಕೊಳ್ಳಲಾಗಿದೆಂದು ತಿಳಿಸಿದರು.
ಪಕ್ಷದ  ಎಲ್ಲಾ ಕಾರ್ಯಕರ್ತರು ಈ ಅಭಿಯಾನದಲ್ಲಿ ಪಾಲ್ಗೊಳ್ಳಲಿದ್ದಾರೆ.ಜನವರಿ 12, ರಂದು “ರಾಷ್ಟ್ರೀಯ ಯುವ ದಿವಸ”ದ ಅಂಗವಾಗಿ ನಡೆಯುವ ರಾಷ್ಟ್ರ ಮಟ್ಟದ ಕಾರ್ಯಕ್ರಮದಲ್ಲಿ  ಪ್ರಧಾನಿ  ನರೇಂದ್ರ ಮೋದಿ ಅವರು ಪಾಲ್ಗೊಳ್ಳಲಿದ್ದಾರೆಂದರು.
ಅಭಿಯಾನದ ಅಂಗವಾಗಿ ಬೂತ್ ಸಮಿತಿಯ ರಚನೆ. ಪೇಜ್ ಪ್ರಮುಖರ ನಿಯುಕ್ತಿ. ವ್ಯಾಟ್ಸಾಪ್ ಗ್ರೂಪ್‍ಗಳ ರಚನೆ ಹಾಗೂ ಮಂಡಲ, ಜಿಲ್ಲಾ, ರಾಜ್ಯದೊಡನೆ ಜೋಡಣೆ. ಮನ್ ಕೀ ಬಾತ್ (ಪ್ರತಿ ಮತಗಟ್ಟೆಯಲ್ಲಿ ಪ್ರತೀ ತಿಂಗಳು). ಕಾರ್ಯಕ್ರಮದ ನಂತರ ಮ. 12.30ರ ಒಳಗೆ, ಈಗಾಗಲೇ ಕಳುಹಿಸಿರುವ ಲಿಂಕ್ ನಿಂದ ಅಪ್‍ಲೋಡ್ ಮಾಡುವುದು, ಪ್ರತಿ ಮತಗಟ್ಟೆಯಲ್ಲಿ 25 ಕಾರ್ಯಕರ್ತರ ಮನೆಯ ಮೇಲೆ ಬಿಜೆಪಿ ಧ್ವಜ ಹಾರಿಸಲಿದೆ.
ಸುದ್ದಿಗೋಷ್ಟಿಯಲ್ಲಿ  ಬಳ್ಳಾರಿ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಅಶೋಕ್ ಕುಮಾರ್ . ಶಿವಶಂಕರ್ ರೆಡ್ಡಿ,  ಉಪಾಧ್ಯಕ್ಷರುಗಳಾದ ಗಾಳಿ ಶಂಕರಪ್ಪ,  ವೀರಶೇಖರ್ ರೆಡ್ಡಿ, ಜವಳಿ ನಿಗಮ ಮಂಡಳಿ ಅಧ್ಯಕ್ಷ ಗುತ್ತಿಗನೂರು  ವಿರುಪಾಕ್ಷಗೌಡ, ಬಳ್ಳಾರಿ ಜಿಲ್ಲಾ ಮಾಧ್ಯಮ ವಕ್ತಾರ ಡಾ. ಬಿ ಕೆ ಸುಂದರ್, ಜಿಲ್ಲಾ ಮಾಧ್ಯಮ ಸಹ ಸಂಚಾಲಕರ ತೊಗರಿ ರಾಜೀವ್ ಮೊದಲಾದವರು ಉಪಸ್ಥಿತರಿದ್ದರು.