ನಾಳೆಯಿಂದ ಬಸವಲಿಂಗ ಅವಧೂತರ ಜಾತ್ರೆ

ಚಿಂಚೋಳಿ,ಮಾ 14: ತಾಲ್ಲೂಕಿನ ದೇಗಲಮಡಿಯ ಬಸವಲಿಂಗ ಅವಧೂತ ಆಶ್ರಮದಲ್ಲಿ ನಾಳೆ (ಮಾ. 15 ) ಪರಮ ಪೂಜ್ಯ ಡಾ. ಬಸವಲಿಂಗ ಅವಧೂತರ 11ನೇ ಜಾತ್ರಾ ಮಹೋತ್ಸವ ಮತ್ತು ಜಗನ್ಮಾತೆ ಅಕ್ಕಮಹಾದೇವಿ ತೊಟ್ಟಿಲು ಉತ್ಸವ ,ಮತ್ತು ಸಪ್ತಭಜನೆ ಮಂಗಳ ನಡೆಯಲಿದೆ.ಮಾ. 16 ರಂದು ಬೆಳಗ್ಗೆ 8.30 ಗಂಟೆಗೆ ಕುಂಭಕಳಸದೊಂದಿಗೆ ಭವ್ಯ ಪಲ್ಲಕಿ ಮೆರವಣಿಗೆ, ಸಾಯಂಕಾಲ ನೂತನ ರಥ ಉದ್ಘಾಟನೆ, ಡಾ. ಬಸವಲಿಂಗ ಅವಧೂತರ ವಚನ ಪುಸ್ತಕ ಲೋಕಾರ್ಪಣೆ ಹಾಗೂ ಸಮಾರೋಪ ಸಮಾರಂಭ ನಡೆಯಲಿದೆ ಎಂದು ಬಸವಲಿಂಗ ಅವಧೂತರ ಸೇವಾ ಸಮಿತಿ ಮುಖ್ಯಸ್ಥ ಶ್ರೀಮಂತ ಕಟ್ಟಿಮನಿ ಅವರು ತಿಳಿಸಿದ್ದಾರೆ