ನಾಳೆಯಿಂದ ಪದವಿ ಕಾಲೇಜು ಪ್ರಾರಂಭ-ಪೂರ್ವ ಸಿದ್ಧತೆ

ರಾಯಚೂರು.ನ.16-ನಾಳೆಯಿಂದ ಪದವಿ ಕಾಲೇಜು ಪ್ರಾರಂಭಕ್ಕೆ ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದ್ದು ನಗರದಲ್ಲಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಾಲೇಜು ಆರಂಭ ಹಿನ್ನೆಲೆ ಸ್ಯಾನಿಟೈಸ್ ಮಾಡಲಾಗ್ತಿದೆ.
ಕಳೆದ 8 ತಿಂಗಳಿಂದ ಕೊರೊನ ಮಹಾಮಾರಿ ಹಿನ್ನಲೆಯಲ್ಲಿ ಶಾಲಾ ಕಾಲೇಜುಗಳಿಗೆ ರಜೆ ನೀಡಿ ಆನ್ ಲೈನ್ ಶಿಕ್ಷಣವನ್ನು ವಿದ್ಯಾರ್ಥಿಗಳಿಗೆ ನೀಡಲಾಗುತ್ತಿತ್ತು ನಾಳೆಯಿಂದ ಪದವಿ ತರಗತಿ ಆರಂಭಕ್ಕೆ ಸಕಲ ಸಿದ್ದತೆಯನ್ನು ಈಗಾಗಲೇ ಕಾಲೇಜು ಶಿಕ್ಷಣ ಇಲಾಖೆಯು ಪೂರ್ವ ಸಿದ್ಧತೆಯನ್ನು ಮಾಡಲಾಗಿದೆ.ನಿನ್ನೆಯಿಂದ ನಗರದ ಎಲ್ಲ ಪದವಿ ಕಾಲೇಜುಗಳಲ್ಲಿ ಕೊಠಡಿಗಳನ್ನು ಸ್ಯಾನಿಟೈಸ್ ಮಾಡಿ, ಸಾಮಾಜಿಕ ಅಂತರಕ್ಕೆ ಆಧ್ಯತೆ ನೀಡಲಾಗಿದೆ.
ತರಗತಿಗಳನ್ನು ಪ್ರಾರಂಭಿಸಲು ಶಿಪ್ಟ್ ವೈಸ್ ಮಾಡಲಾಗಿದೆ.
ಮುನ್ನೆಚ್ಚರಿಕೆಯಾಗಿ ಈಗಾಗಲೇ ಕಾಲೇಜಿನ ಎಲ್ಲಾ ಪ್ರಾಧ್ಯಾಪಕರು ಕೋವೀಡ್ ಟೆಸ್ಟ್ ಮಾಡಿಸಿದ್ದಾರೆ.
ನಾಳೆಯಿಂದ ಬರುವ ಎಲ್ಲ ವಿದ್ಯಾರ್ಥಿಗಳಿಗಳಿಗೂ ಕೂಡಾ ಕರೋನಾ ಟೆಸ್ಟ್ ಕಡ್ಡಾಯವಾಗಿ ಮಾಡಿಸತಾಕ್ಕದು,
ಸಾಕಷ್ಟು ಉತ್ಸಾಹಿಗಳಾಗಿರೋ ವಿದ್ಯಾರ್ಥಿಗಳು
ಕೋವೀಡ್ ನಿಯಮಗಳನ್ನ ಪಾಲಿಸಿ, ಕಾಲೇಜಿಗೆ ಬರೋದಾಗಿ ವಿದ್ಯಾರ್ಥಿಗಳು ಹೇಳಿಕೆ ನೀಡ್ಡಿದರೆ.
ಕಳೆದ 8 ತಿಂಗಳಿಂದ ತರಗತಿಗಳಿಲ್ಲದೇ ಸಾಕಷ್ಟು ಗೊಂದಲದಲ್ಲಿವೆ,ಪರೀಕ್ಷೆ ಬರೆಯೋದು ಹೇಗೆ ಅನ್ನೋ ಆತಂಕಕ್ಕೆ ಒಳಗಾಗಿದೆವು ನಾಳೆಯಿಂದ ಪದವಿ ಕಾಲೇಜು ಪ್ರಾರಂಭಕ್ಕೆ ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದ್ದು ಖುಷಿ ತಂದಿದೆ. ತರಗತಿಗಳು ಆರಂಭ ಆಗುತಿರುವುದರಿಂದ
ಖುಷಿ ಇದೆ ನಮ್ಮ ಮನೆಯಲ್ಲಿಯೂ ಕೂಡಾ ಕಾಲೇಜಿಗೆ ಹೋಗಲು ಸಮ್ಮತಿಸಿದ್ದಾರೆ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿಕೊಂಡು ಕಾಲೇಜಿಗೆ ಬರೋದಾಗಿ ವಿದ್ಯಾರ್ಥಿಗಳು ಹೇಳಿದ್ದಾರೆ