ನಾಳೆಯಿಂದ ನಗರದಲ್ಲಿ “ಮುದುಕನ ಮದುವೆ”


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ:ಜೂ,22-  ಹಾಸ್ಯ ನಟ ಕುಮಾರಸ್ವಾಮಿ ಅವರ ಹಲವು ದಶಕಗಳ ರಂಗಭೂಮಿ ಜೀವನದ ಕೊನೆಯ ಪ್ರಯೋಗಗಳಾಗಿ ನಗರದಲ್ಲಿ “ಮುದುಕನ ಮದುವೆ” ನಾಟಕ ನಾಳೆಯಿಂದ ಆರಂಭಗೊಳ್ಳಲಿದೆ.
ನಾಟಕ ಪ್ರದರ್ಶನಕ್ಕೆ ಹೊಸ ಬಸ್ ನಿಲ್ದಾಣದ ಎದುರಿನ ವೀರಶೈವ ತರುಣ ಸಂಘದ ಸಕ್ಕರ ಕರಡೀಶ ಚೌಕಿ ಮೈದಾನದಲ್ಲಿ ನಿರ್ಮಿಸಿರುವ ಟೆಂಟ್ ನಲ್ಲಿ ಇಂದು ರಂಗ ನಟ ಕುಮಾರಸ್ವಾಮಿ ಅವರು ಸುದ್ದಿಗೋಷ್ಟಿ ನಡೆಸಿ ಈ ವಿಷಯ ತಿಳಿಸಿದರು.
ನಾಳೆ ಸಂಜೆ 6.30 ಕ್ಕೆ ನಾಟಕ ಉದ್ಘಾಟನೆಯಾಗಲಿದೆ. ಪ್ರತಿ ದಿನ ಮಧ್ಯಾಹ್ನ 3.30 ಕ್ಕೆ ಮತ್ತು ಸಂಜೆ 6.30 ಕ್ಕೆ ನಾಟಕ ಪ್ರಕಾರ ದರ್ಶನ ಇರಲಿದೆ. ಐದನೂರಕ್ಕೂ ಹೆಚ್ಚು ಪ್ರೇಕ್ಷಕರು ಕುಳಿತು‌ ನೋಡಲು  ಆಸನದ ವ್ಯವಸ್ಥೆ ಮಾಡಿದೆ. ಮಹಿಳೆಯರಿಕೆ ಪ್ರತ್ಯೇಕ ವ್ಯವಸ್ಥೆ  ಇರಲಿದೆ. ಟಿಕೆಟ್ ಧರ 100 ರೂ , ಮೊದಲು ಬಂದವರಿಗೆ ಮುಂದಿನ ಸೀಟು ಎಂದು ನಗೆ ಚಟಾಕಿ ಹಾರಿಸಿದರು.
ನಾನು ವೃತ್ತಿರಂಗಭೂಮಿ ಆರಂಭಿಸಿದ ಮೇಲೆ ಬಳ್ಳಾರಿಗೆ ನಾಲ್ಕು ಬಾರಿ ಬಂದಿದ್ದೇನೆ 1983 ರಲ್ಲಿ ವಡ್ಡರ ಬಂಡೆ ಪ್ರದರ್ಶನದಲ್ಲಿ ಮಯದುಕನ ಮದುವೆ ನಾಟಕವನ್ನು 160 ದಿನ ಪ್ರದರ್ಶಿಸಿ ದಾಖಲೆ ಮಾಡಿತ್ತು ಎಂಬುದನ್ನು ಸ್ಮರಿಸಿ ಬಳ್ಳಾರಿ ಜನತೆ ನಾಟಕ ಪ್ರದರ್ಶನಕ್ಕೆ ನೀಡುವ ಸಹಕಾರ  ಜೀವನದಲ್ಲಿ ಮರೆತಿಲ್ಲ. ಎಲ್ಲಿಗೇ ಹೋದರೂ ಅದನ್ನು ಸ್ಮರಿಸುತ್ತೇನೆ. ಬಳ್ಳಾರಿಗೂ ನನಗೂ ರಂಗಭೂಮಿಯ ಅವನಾಭಾವ ಸಂಬಂಧದಂತೆ, ನನಗೂ ಜಿಲ್ಲೆಗೂ ಆಂತರಿಕ ಸಂಬಂಧವೂ ಇದೆ. ನನ್ನ ಅಜ್ಜಿ ಸಂಡೂರು ಕುಮಾರಸ್ಬಾಮಿ ಹೆಸರಿಡುವ ಮೂಲಕ ಎಂದರು.
ಸಾಗರದಲ್ಲಿಯೇ ವೃತ್ತಿ ಜೀವನದ ಕೊನೆಯ ನಾಟಕ ಪ್ರದರ್ಶನ ಮಾಡಲು ನಿರ್ಧರಿಸಿದ್ದೆ. ಆದರೆ ಬಳ್ಳಾರಿ ಜನತೆ ಬಂದು ಮತ್ತೊಮ್ಮೆ ಮುದುಕನ ಮದುವೆ ನೋಡಲು ಬಯಸಿದ್ದರಿಂದ ಬಂದಿರುವೆ.  ಬಳ್ಳಾರಿಯ ಪ್ರವಾಸ ಮುಗಿದ ಮೇಲೆ ಮತ್ತೆ ನಾಟಕ ಪ್ರದರ್ಶನ‌ ಮಾಡಲ್ಲ ಎಂದರು. ಈ ವರಗೆ ತಮ್ಮ‌ನಾಟಕಗಳ ಪ್ರದರ್ಶನದ ವಿಡಿಯೋ ದಾಖಲೆ ಆಗಿರದ ಕಾರಣ ಈಗ ಮಾಡಲಿದೆ.
ಮೊದಲಿಗೆ ಮುದುಕನ‌ ಮದುವೆ, ನಂತರ ಬಸ್ ಕಂಡಕ್ಟರ್, ಕಿವುಡ ಮಾಡಿದ ಕಿತಾಪತಿ, ದೇವಿ ಮಹಾತ್ಮೆ, ನಾಯಕನಹಟ್ಟಿ ತಿಪ್ಪೇರುದ್ರಸ್ವಾಮಿ ನಾಟಕ ಪ್ರದರ್ಶನ ಮಾಡಲಿದೆ. ನಟಿ ಉಮಶ್ರೀ ಅವರನ್ನು ಕರೆಸಿ ನಾಟಕ ಪ್ರದರ್ಶನ ಮಾಡಲಿದೆ. ಪತ್ನಿ ಸುಧಾಮಣಿ, ಪುತ್ರಿ, ಅಳಿಯ ಸಹ ನಾಟಕದಲ್ಲಿ ಪಾತ್ರದಾರಿಗಳಾಗಿರುತ್ತಾರೆಂದರು.
ರಾಜ್ಯದಲ್ಲಿ 1930 ರಲ್ಲಿ 160 ನಾಟಕ ಕಪನಿಗಳು ಇದ್ದವು, ಇದು ಅಧುನಿಕ ತಂತ್ರಜ್ಞಾನದ  ಕೈನಲ್ಲೇ ಎಲ್ಲಾ ನೋಡುತ್ತಾರೆ. ಆದರೆ ಜೀವಂತ ಕಲೆ ನಾಟಕ ನೋಡುವ ಮನಸ್ಸುಗಳು ಇನ್ನೂ ಇವೆ. ಅವರಿಗಾಗಿ ನಾಟಕ ಪ್ರದರ್ಶನ ನಡೆಯುತ್ತಿವೆ. ಸಧ್ಯ ರಾಜ್ಯದಲ್ಲಿ ಒಟ್ಟಾರೆ 26 ಕಂಪನಿಗಲಕು ಇದ್ದರೂ  ನಾಲ್ಕು ಕಂಪನಿಗಳು ಕ್ರಿಯಾಶೀಲವಾಗಿವೆಂದರು.
ಕಳೆದ ಒಂದುವರೆ ತಿಂಗಲಕಿಂದ ಟೆಮನಟ್ ಕಟ್ಟಿ, ಅಗ್ನಿಶಾಮಕ , ವಿದ್ಯುತ್, ಪೊಲೀಸ್, ಪಾಲಿಕೆ, ಸಹಾಯಕ ಆಯುಕ್ತರ ಕಚೇರಿಯಿಂದ ನಿರಾಪೇಕ್ಷಣ ಪತ್ರ‌ಪಡೆಯಲು ಹರಸಾಹಸ ಪಡೆಯಬೇಕಾಯಿತು. ನಾಟಕ ನಡೆಸುವುದು ಕಷ್ಟ ಈಗ ಎಂದ ಅವರು. ತಿಪ್ಪೇರುದ್ರಸ್ವಾಮಿ ಎಂಟು ಸಾವಿರಕ್ಕೂ ಹೆಚ್ಚು ಪ್ರಯೋಗ ಮಾಡಿದೆ, ಮುದುಕನ‌ಮದುವೆ 15 ಸಾವಿರಕ್ಕೂ ಹೆಚ್ಚು ಪ್ರಯೋಗ ಮಾಡಿದೆ.
ನಾಟಕದಿಂದಲೇ ನೂರು ತೊಲೆ ಚಿನ್ನ ಇತ್ತು, ಕಾರು ಇದ್ದವು. ನಾಟಕಕ್ಕಾಗಿ ಅವೆಲ್ಲವನ್ನೂ ಕಳೆದುಕೊಂಡೆ. ಸಾಕಿನ್ನು ಕನ್ನಡ ರಂಗಭೂಮಿಯ ಸೇವೆ ಇದು ನನ್ನ ಕೊನೆಯ ಪ್ರಯತ್ನವಷ್ಟೇ ಎಂದರು.
ಸುದ್ದಿಗೋಷ್ಟಿಯಲ್ಲಿ ರಂಗಕರ್ಮಿ, ಕೆ.ಜಗದೀಶ್ ಭೀಮರೆಡ್ಡಿ, ನಾಗನಗೌಡ, ಹೆಚ್.ಎಂ.ಚಂದ್ರಶೇಖರ್, ತಿಪ್ಪೆಸ್ವಾಮಿ, ಖಾಸಿಂ ಬಾಷಾ, ವಸಂತಕುಮಾರ್, ಸುಬ್ಬಣ್ಣ, ಮೊದಲಾದವರು ಇದ್ದರು.