ನಾಳೆಯಿಂದ ಜಿಲ್ಲೆಯಲ್ಲಿ ಬಿಜೆಪಿ ಪಕ್ಷದ ಮುಖಂಡರಿಂದ ಪ್ರಚಾರ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ:ಏ,24- ರಾಜ್ಯದೆಲ್ಲಡೆಯಂತೆ ನಾಳೆಯಿಂದ ಜಿಲ್ಲೆಯ ಐದು ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಪಕ್ಷದ ಮುಖಂಡರು ಪ್ರಚಾರ ಕಾರ್ಯ ನಡೆಸಲಿದ್ದಾರೆ. 
ಪಕ್ಷದ ಜಿಲ್ಲಾ ವಕ್ತಾರ ಡಾ.ಬಿ.ಕೆ.ಸುಂದರ್ ಮತ್ತು ಪಕ್ಷದ ಜಿಲ್ಲಾ ಅಧ್ಯಕ್ಷ ಗೋನಾಳ್ ಮುರಹರಗೌಡ ಅವರು  ಇಂದು ನಗರದ ಪಕ್ಷದ ಜಿಲ್ಲಾ ಕಛೇರಿಯಲ್ಲಿ ಜಂಟಿ ಸುದ್ದಿಗೋಷ್ಟಿ ನಡೆಸಿ.  ನಾಳೆ ಮತ್ತು ನಾಡಿದ್ದು ಕೇಂದ್ರದ ಇಂಧನ ಸಚಿವ ಕೃಷ್ಣಪಾಲ್ ಗುಜ್ಜಾರ್ ಅವರು ಬಳ್ಳಾರಿ ನಗರ ಕ್ಷೇತ್ರದಲ್ಲಿ ರಾಜ್ ಸಭಾ ಸದಸ್ಯ ಡಾ.ಲಕ್ಷ್ಮಣ ಸಿರುಗುಪ್ಪ ಕ್ಷೇತ್ರದಲ್ಲಿ. ಸಂಡೂರು ಕ್ಷೇತ್ರದಲ್ಲಿ ಪಕ್ಷದ ಮುಖಂಡ ಜಿತೇಂದ್ರ ರೆಡ್ಡಿ ನೇತೃತ್ವದಲ್ಲಿ ಮತ್ತು ಧಾನ ಪರಿಷತ್ ಸದಸ್ಯ ವೈ.ಎಂ.ಸತೀಶ್, ಬಳ್ಳಾರಿ ಗ್ರಾಮೀಣ ಕ್ಷೇತ್ರದಲ್ಲಿ ಮಾಜಿ ಸಂಸದೆ ಜೆ.ಶಾಂತ ಅವರ ನೇತೃತ್ವದಲ್ಲಿ ಪ್ರಚಾರ ಕಾರ್ಯ ನಡೆಯಲಿದೆಂದು ತಿಳಿಸಿದರು.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಮೇ 2 ರಂದು ಹೊಸಪೇಟೆ ನಗರಕ್ಕೆ ಬರುತ್ತಿದ್ದಾರೆ. ಬಳ್ಳಾರಿಗೆ ಉತ್ತರ ಪ್ರದೇಶದ ಮುಖ್ಯ ಮಂತ್ರಿ ಆದಿತ್ಯನಾಥ, ನಟ ಪವನ್ ಕಲ್ಯಾಣ ಅವರ ಪ್ರಚಾರಕ್ಕೆ ಕೋರಿದೆಂದರು.  
ಸಿದ್ರಾಮಯ್ಯ ಅವರು ಲಿಂಗಾಯತ ಸಿಎಂಗಳಿಂದಲೇ   ರಾಜ್ಯ ಹಾಳಾಗಿದೆಂದು ಹೇಳಿದ್ದಾರೆ. ಇದರಿಂದ ಲಿಂಗಾಯತ ಸಮುದಾಯ ಸಿದ್ದರಾಮಯ್ಯ ಅವರಿಗೆ ತಕ್ಕ ಪಾಠ ಕಲಿಸಲಿದೆಂದರು. 
ಎ.27 ರಂದು ಪ್ರತಿ ಜಿಪಂ ವ್ಯಾಪ್ತಿಯಲ್ಲಿ ಪಕ್ಷದ ಕಾರ್ಯಕರ್ತರು ಮುಖಂಡರೊಂದಿಗೆ ವರ್ಚುವಲ್ ಮೀಟಿಂಗ್ ಮಾಡಲಿದ್ದಾರೆ. ಎ.30 ಮಹಾ ಸಂಪರ್ಕ ಅಭಿಯಾನ, ಆಯಾ ಬೂತ್ ಮಟ್ಟದಲ್ಲಿ ಪ್ರಮುಖ ಮುಖಂಡರಿಂದ ಪ್ರಚಾರ ಮಾಡಲಿದ್ದಾರೆಂದರು.

ಅನಿಲ್ ಲಾಡ್ ಸ್ಪರ್ಧೆ
ಬಿಜೆಪಿಗೆ ಸಹಕಾರ
ನಗರ ಕ್ಷೇತ್ರದಲ್ಲಿ ಕಾಂಗ್ರೆಸ್ ನಿಂದ ಟಿಕೆಟ್ ದೊರೆಯಲಿಲ್ಲ‌ವೆಂದು ಮಾಜಿ ಶಾಸಕ ಅನಿಲ್ ಲಾಡ್ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವುದರಿಂದ ನಮ್ಮ ಬಿಜೆಪಿ ಅಭ್ಯರ್ಥಿ ಗೆಲುವಿಗೆ ಹೆಚ್ಚಿನ ಮತಗಳು ದೊರೆಯಲಿವೆಂದರು.
ಸುದ್ದಿಗೋಷ್ಟಿಯಲ್ಲಿ ಪಕ್ಷದ ಮುಖಂಡರುಗಳಾದ ಕೆ.ಎಸ್.ಅಶೋಕ್ ಕುಮಾರ್, ರಾಜೀವ್ ತೊಗರಿ, ಅಡವಿ ಸ್ವಾಮಿ, ರಮೇಶ್ ದರೋಜಿ ಮೊದಲಾದವರು ಇದ್ದರು.