ನಾಳೆಯಿಂದ ಚೇಳ್ಳಗುರ್ಕಿಯಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಮೇ.17: ತಾಲೂಕಿನ ಚೇಳ್ಳಗುರ್ಕಿ ಗ್ರಾಮದಲ್ಲಿ ನಾಳೆಯಿಂದ ಮೇ.26ರ ವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿದೆ.
ಶ್ರೀ ಎಱ್ರಿಸ್ವಾಮಿ ಜೀವ ಸಮಾದಿ ಟ್ರಸ್ಟ್ ಮತ್ತು ಶ್ರೀ ಎಱ್ರಿಸ್ವಾಮಿ ದಾಸೋಹ ಸೇವಾ ಸಂಘ ಕಾರ್ಯಕ್ರಮಗಳನ್ನು ಆಯೋಜಿಸಿದ್ದು, ನಾಳೆ ಬೆಳಿಗ್ಗೆ 6 ಗಂಟೆಗೆ ನಂದಿ ಧ್ವಜಾರೋಹಣ ಹಾಗೂ ಸಪ್ತಭಜನೆ ಪ್ರಾರಂಭವಾಗಲಿದೆ.
ಮೇ.19ರಂದು ಬೆಳಿಗ್ಗೆ 5.30ಕ್ಕೆ ಗಂಗೆ ತರುವುದು, 6.30ಕ್ಕೆ ಶ್ರೀ ಎಱ್ರಿತಾತನವರಿಗೆ ವಿಶೇಷ ಪೂಜೆ ಬೆಳಿಗ್ಗೆ 10 ಗಂಟೆಗೆ ಶ್ರೀ ಎಱ್ರಿತಾತನ ಜೀವ ಸಮಾಧಿ ಶತಮಾನೋತ್ಸವ ಉದ್ಘಾಟನೆ ಜರುಗಲಿದ್ದು ರಾತ್ರಿ 7 ಗಂಟೆಗೆ ಬೆಳ್ಳಿ ರಥೋತ್ಸವ ಜರುಗಲಿದೆ.
ಮೇ.20 ರಿಂದ ಶ್ರೀ ಎಱ್ರಿತಾತನವರ ಜೀವ ಸಮಾಧಿ ಶತಮಾನೋತ್ಸವ ಕಾರ್ಯಕ್ರಮ ಆಯೋಜಿಸಿದ್ದು ಮೇ.20ರಂದು ಶ್ರೀ ಎಱ್ರಿತಾತನವರ ಪವಾಡಗಳ ಸ್ಮರಣ ಸಂಚಿಕೆ, ಭಜನಾ ತಂಡಗಳಿಗೆ ಸನ್ಮಾನ, ದೊಡ್ಡ ಬಸವ ಗವಾಯಿಗಳಿಗೆ ವಚನ ಗಾಯನವಿದೆ.
ಸಂಜೆ 5ಕ್ಕೆ ಭರತನಾಟ್ಯ, 6ಕ್ಕೆ ಸಂಗೀತ ಗಾಯನ, ಸಂಜೆ 7ಕ್ಕೆ ಹಾಸ್ಯಸಂಜೆ ಗಂಗಾವತಿ ಪ್ರಾಣೇಶ್ ಮತ್ತು ತಂಡದವರಿಂದ ಜರುಗಲಿದೆ.
ಮೇ.21ರಂದು ಸಂಜೆ ಜಾನಪದ ವೈವಿಧ್ಯಮಯ ನೃತ್ಯ 6.30ಕ್ಕೆ ಸಂಗೀತ ಸುಧೆ ಇದೆ.
ಮೇ.22ರಂದು ಬೆಳಿಗ್ಗೆ 6ಕ್ಕೆ ಮಲ್ಲಪ್ಪನ ಮಟ್ಟಿಯಿಂದ ಶ್ರೀ ಎಱ್ರಿತಾತನವರನ್ನು ಗ್ರಾಮಕ್ಕೆ ಕರೆತರುವುದು ಸಂಜೆ6ಕ್ಕೆ ಭರತನಾಟ್ಯ 7ಕ್ಕೆ ನೆರಳು ಮತ್ತು ಬೆಳಕು ಕಾರ್ಯಕ್ರಮ ರಾತ್ರಿ 8ಕ್ಕೆ ನಾಟಕ ಶಿವಶರಣೆ ಅಕ್ಕಮಹಾದೇವಿ ಪ್ರದರ್ಶನವಾಗಲಿದೆ.
ಮೇ.23ರಂದು ಸಂಜೆ 5ಕ್ಕೆ ಶತಮಾನೋತ್ಸವ ಸಮಾರೋಪ ಸಮಾರಂಭ 6ಕ್ಕೆ ಸುಗಮ ಸಂಗೀತ, 7ಕ್ಕೆ ಭರತನಾಟ್ಯ ರಾತ್ರಿ 9ಕ್ಕೆ ನಾಟಕ, ಚೇಳ್ಳಗುರ್ಕಿ ವಾಸ ಶ್ರೀ ಎಱ್ರಿತಾತ ಪ್ರದರ್ಶನವಾಗಲಿದೆ.
ಮೇ.24ರಂದು ಸಂಜೆ6ಕ್ಕೆ ಬಸವ ಉತ್ಸವ, ರಾತ್ರಿ8ಕ್ಕೆ ವಟುಗಳ ದೀಕ್ಷಾ ಕಾರ್ಯಕ್ರಮ ಮೇ.25 ರಂದು ಬೆಳಿಗ್ಗೆ 6ಕ್ಕೆ ಸಪ್ತ ಭಜನೆ ಮುಕ್ತಾಯ, ಸಂಜೆ 5ಕ್ಕೆ ಮಹಾ ರಥೋತ್ಸವದ ನಂತರ ಕರ್ಪೂರದ ಆರತಿ, ಮೇ.26ರಂದು ಸಂಜೆ 7ಕ್ಕೆ ಹೂವಿನ ರಥೋತ್ಸವ ನಂತರ ಬಾಣೋತ್ಸವ ಜರುಗಲಿದೆ.