ನಾಳೆಯಿಂದ ಕಲ್ಲಾಲಿಂಗೇಶ್ವರ ಜಾತ್ರಾ ಮಹೋತ್ಸವ

ಕಾಳಗಿ.ಮೇ.16 : ತಾಲೂಕು ಸಮೀಪದ ಭಂಟನಳ್ಳಿ ಗ್ರಾಮದ ಆರಾಧ್ಯ ದೈವ ಕಲ್ಲಾಲಿಂಗೇಶ್ವರ ಜಾತ್ರಾ ಮಹೋತ್ಸವ ನಾಳೆಯಿಂದ ಮೂರು ದಿನಗಳ ವರೆಗೆ ಸಡಗರ ಸಂಭ್ರಮದಿಂದ ನಡೆಯುತ್ತದೆ ಎಂದು ಕಮಿಟಿ ಅಧ್ಯಕ್ಷ ಸಿದ್ದಣ್ಣ ಬೇನೆಕಂಪಳ್ಳಿ ತಿಳಿಸಿದ್ದಾರೆ.
ಮೇ 17 ರಂದು ಬೆಳ್ಳಗ್ಗೆ 6 ಕ್ಕೆ ಪ್ರಭಾವಳಿ ಉತ್ಸವ ಬೆಳ್ಳಗೆ 9 ಗಂಟೆಗೆ ಅಗ್ನಿಪ್ರವೇಶ, ಸಂಜೆ 6 ಕ್ಕೆ ರಥೋತ್ಸವಕ್ಕೆ ಸೇಡಂ ಕೊತ್ತಲಬಸವೇಶ್ವರ ಮತ್ತು ರೂದ್ನರ ಮಠದ ಪೂಜ್ಯ ಸದಾಶಿವಸ್ವಾಮೀಜಿ ಚಾಲನೆ ನೀಡಲಿದ್ದಾರೆ. ಇಂದು ಹತ್ತನೇ ಮತ್ತು ಪಿಯುಸಿಯಲ್ಲಿ ಶೇ.70 ರಷ್ಟು ಅಂಕ ಪಡೆದ ಮಕ್ಕಳಿಗೆ ಸನ್ಮಾನ, ಸಾಂಸ್ಕøತಿಕ ಮತ್ತು ಧರ್ಮ ಸಭೆ ಕಾರ್ಯಕ್ರಮ ನಡೆಯಲಿದೆ. ತೊಟ್ನಳ್ಳಿ ಮಹಾಂತೇಶ್ವರ ಮಠದ ಡಾ. ತ್ರಿಮೂರ್ತಿ ಶಿವಾಚಾರ್ಯರು ಸಾನಿಧ್ಯ ವಹಿಸಲಿದ್ದಾರೆ. ಉದ್ಯಮಿ ಶಿವಕುಮಾರ (ಜೆ.ಕೆ) ಪಾಟೀಲ ತೆಲ್ಕೂರ್, ಸಂಶೋಧಕ ಸಾಹಿತಿ ಮೂಡುಬಿ ಗುಂಡೇರಾವ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮತ್ತು ನ್ಯಾಯವಾದಿ ರವೀಂದ್ರಕುಮಾರ ಭಂಟನಳ್ಳಿ, ದೇವಾಲಯದ ಕಮಿಟಿ ಅಧ್ಯಕ್ಷ ಸಿದ್ದಣ್ಣ ಬೆನಕಂಪಳ್ಳಿ ಕಾರ್ಯಕ್ರಮಕ್ಕೆ ಪಾಲ್ಗೊಳ್ಳಲಿದ್ದಾರೆ.