ನಾಳೆಯಿಂದ ಕರ್ನಾಟಕ ಹಿಸ್ಟರಿ ಕಾಂಗ್ರೆsಸ್‍ನ 30 ನೇ ಮಹಾಸಮ್ಮೇಳನ

            

ಧಾರವಾಡ ಮಾ.21: ಕರ್ನಾಟಕ ವಿಶ್ವವಿದ್ಯಾಲಯದ ಇತಿಹಾಸ ಮತ್ತು ಪ್ರಾಚ್ಯಶಾಸ್ತ್ರ ವಿಭಾಗದ ಆಶ್ರಯದಡಿ ಭಾರತೀಯ ಇತಿಹಾಸ ಅನುಸಂಧಾನ ಪರಿಷತ್ತು, ನವದೆಹಲಿ ಹಾಗೂ ಕರ್ನಾಟಕ ರಾಜ್ಯ ಪತ್ರಾಗಾರ ಇಲಾಖೆ ಬೆಂಗಳೂರು, ಇವೆರಡೂ ಸಂಸ್ಥೆಗಳು ಸಹಯೋಗದೊಂದಿಗೆ ನಾಳೆ ದಿ.22 ರಿಂದ 24 ರವರೆಗೆ ದಿ. ಕರ್ನಾಟಕ ಹಿಸ್ಟರಿ ಕಾಂಗ್ರೆಸ್‍ನ 30 ನೇ ಮಹಾಸಮ್ಮೇಳನವನ್ನು ಮೂರು ದಿನಗಳ ಕಾಲ ಹಮ್ಮಿಕೊಳ್ಳಲಾಗಿದೆ ಎಂದು ಪ್ರಧಾನ ಕಾರ್ಯದರ್ಶಿ ಪೆÇ್ರ. ಆಯ್.ಕೆ.ಪತ್ತಾರ ಇಂದಿಲ್ಲಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮ್ಮೇಳನದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿಗಳಾದ ಪೆÇ್ರ. ಕೆ. ಬಿ. ಗುಡಸಿ ಅವರು ವಹಿಸಲಿದ್ದು, ಉದ್ಘಾಟನೆಯನ್ನು ಜವಾಹರಲಾಲ ನೆಹರು ಕೇಂದ್ರೀಯ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಪೆÇ್ರ , ಯಗಟಿ ಚಿನ್ನಾರಾವ್ ಅವರು ಮಾಡಲಿದ್ದಾರೆ . ಈ ಮಹಾಸಮ್ಮೇಳನದ ಸರ್ವಾಧ್ಯಕ್ಷರಾಗಿ ಇತಿಹಾಸ ಮತ್ತು ಪ್ರಾಚ್ಯಶಾಸ್ತ್ರ ವಿಭಾಗದ ವಿಶ್ರಾಂತ ಪ್ರಾಧ್ಯಾಪಕರಾದ ಪೆÇ್ರ. ಎಂ.ಟಿ. ಕಾಂಬಳ ಅವರು ಆಯ್ಕೆಯಾಗಿದ್ದಾರೆ ಎಂದರು.
ಉದ್ಘಾಟನಾ ಸಮಾರಂಭಕ್ಕೆ ವಿಶೇಷ ಆಹ್ವಾನಿತರಾಗಿ ಆಂಧ್ರಪ್ರದೇಶದ ಕೇಂದ್ರಿಯ ಬುಡಕಟ್ಟು ವಿಶ್ವವಿದ್ಯಾಲಯದ ಕುಲಪತಿಗಳಾದ ಪೆÇ್ರ. ತೇಜಸ್ವಿ ಕಟ್ಟಿಮನಿ ಅವರು ಬರುತ್ತಿದ್ದು ಈ ಸಮ್ಮೇಳನದಲ್ಲಿ 29 ನೇ ಮಹಾಸಮ್ಮೇಳನದ ಪೆÇ್ರಸಿಡಿಂಗ್‍ನ್ನು ಬಿಡುಗಡೆಗೊಳಿಸಲಿದ್ದಾರೆ. ಇನ್ನೊಬ್ಬ ವಿಶೇಷ ಆಹ್ವಾನಿತರಾಗಿರುವ ಪಂ. ಪಾ, ನಾಗರಾಜಯ್ಯನವರು ಆವಿಷ್ಕಾರ' ಸಂಪುಟವನ್ನು ಬಿಡುಗಡೆಗೊಳಿಸಲಿದ್ದಾರೆ. ರಾಜ್ಯ ಪತ್ರಾಗಾರ ನಿರ್ದೇಶನಾಲಯದ ನಿರ್ದೆಶಕರಾಗಿರುವ ಚೌಡಾರೆಡ್ಡಿಯವರು ಮುಂಬೈ ಕರ್ನಾಟಕ ಭಾಗದ ಹಳೆ ದಾಖಲೆ ಪತ್ರಗಳ ಪ್ರದರ್ಶನದ ಉದ್ಘಾಟನೆಯನ್ನು ಮಾಡಲಿದ್ದಾರೆ ಎಂದರು. ಕರ್ನಾಟಕ ಹಿಸ್ಟರಿ ಕಾಂಗ್ರೆಸ್ಸಿನ ಅಧ್ಯಕ್ಷರಾದ ಪೆÇ್ರ. ಆರ್. ರಾಜಣ್ಣ ಅವರು ಮುಖ್ಯ ಅತಿಥಿಗಳಾಗಿದ್ದು ಯುವ ಇತಿಹಾಸಕಾರ ಮಂಜುನಾಥ ಪಾಟೀಲ ಅವರಿಗೆ ಕುಂದಣ ಪ್ರಶಸ್ತಿಯನ್ನು ಪ್ರದಾನ ಮಾಡಲಿದ್ದಾರೆ. ಭಾರತೀಯ ಇತಿಹಾಸ ಅನುಸಂಧಾನ ಪರಿಷತ್ತಿನ ಪ್ರಾದೇಶಿಕ ನಿರ್ದೇಶಕರಾದ ಡಾ. ಎಸ್. ಕೆ. ಅರುಣಿ ಅವರು ವಿಭಾಗದನ್ಯೂಸ ಲೆಟರ್’ನ್ನು ಬಿಡುಗಡೆಗೊಳಿಸಲಿದ್ದಾರೆ. ಪುರಾತತ್ವ ಸಂಗ್ರಹಾಲಯಗಳ ಹಾಗೂ ಪರಂಪರಾ ಇಲಾಖೆಯ ಉಪನಿರ್ದೇಶಕರಾದ ಡಾ. ಆರ್. ಶೇಜೇಶ್ವರ ಅವರು ಹೊಸ ಪುಸ್ತಕಗಳ ಬಿಡುಗಡೆ ಮಾಡಲಿದ್ದಾರೆ. ನಿಕಟಪೂರ್ವ ಸರ್ವಾಧ್ಯಕ್ಷರಾದ ಪೆÇ್ರ. ಎಸ್. ಷಡಕ್ಷರಯ್ಯ ಅವರು ಮತ್ತು ಹಿಸ್ಟರಿ ಕಾಂಗ್ರೆಸ್ಸಿ ಪ್ರಧಾನ ಕಾರ್ಯದರ್ಶಿಗಳಾದ ಪೆÇ್ರ. ಆಮ್. ಕೆ. ಪತ್ತಾರ ಅವರು ಸಮಾರಂಭದಲ್ಲಿ ಅತಿಥಿಗಳಾಗಿ ಆಗಮಿಸಲಿದ್ದಾರೆ.
ಈ ಮೂರು ದಿನಗಳಲ್ಲಿ ಕರ್ನಾಟಕದ ಇತಿಹಾಸ ಮತ್ತು ಸಂಸ್ಕೃತಿ ಕುರಿತು ಸುಮಾರು 200 ಪ್ರಬಂಧಗಳು ವಿವಿಧ ವಿದ್ವಾಂಸರಿಂದ ಮಂಡನೆಯಾಗಲಿವೆ. ಮೊದಲ ದಿನದ ಸಂಜೆ 3.30 ಕ್ಕೆ ದತ್ತಿನಿಧಿ ಉಪನ್ಯಾಸಗಳು ಆಯೋಜಿಸಲ್ಪಟ್ಟಿವೆ. ಇತ್ತೀಚಿಗೆ ನಮ್ಮನ್ನಗಲಿದ ಖ್ಯಾತ ಇತಿಹಾಸಕಾರ ಷ. ಶೆಟ್ಟರ್ ಅವರ ಹೆಸರಿನಲ್ಲಿ ದತ್ತಿನಿಧಿ ಉಪನ್ಯಾಸವನ್ನು ಖ್ಯಾತ ಸಾಹಿತಿ ಹಂಪನಾ ಅವರು ನೀಡಲಿದ್ದಾರೆ. ಎರಡನೇ ದತ್ತಿನಿಧಿ ಉಪನ್ಯಾಸ ತುಮಕೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಎಲ್. ಪಿ. ರಾಜು ಅವರ ಹೆಸರಿನಲ್ಲಿದ್ದು ಆ ಉಪನ್ಯಾಸವನ್ನು ಪೆÇ್ರ. ತೇಜಸ್ವಿ ಕಟ್ಟಿಮನಿ ಅವರು ನೀಡಲಿದ್ದಾರೆ. ಇದರ ಜೊತೆಗೆ ಪೆÇ್ರ. ಈರಣ್ಣ ಪತ್ತಾರ ಮತ್ತು ಪೆÇ್ರ. ಎಸ್. ಕೆ.ಕಲ್ಲೋಳಿಕರ ಅವರ ಹೆಸರಿನಲ್ಲಿ ದತ್ತಿನಿಧಿ ಉಪನ್ಯಾಸಗಳು ಏರ್ಪಾಟವಾಗಿದ್ದು ಕ್ರಮವಾಗಿ ಪೆÇ್ರ. ಎಸ್. ಪಾಡಿಗಾರ ಮತ್ತು ಪೆÇ್ರ. ಯಗಟಿ ಚಿನ್ನಾರಾವ ಅವರು ನೀಡಲಿದ್ದಾರೆ ಎಂದರು.
ದಿ 23 ರ ಸಂಜೆ 4 ಗಂಟೆಗೆ ಪೆÇ್ರ. ಎಸ್. ರಾಜಶೇಖರ ದತ್ತಿನಿಧಿ ಉಪನ್ಯಾಸವನ್ನು ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕರಾದ ಸಿ . ಮಹಾದೇವ ಮತ್ತು ಪೆÇ್ರ. ಎಸ್. ನಾಗರತ್ನಮ್ಮ ದತ್ತಿನಿಧಿ ಉಪನ್ಯಾಸವನ್ನು ಡಾ. ವಿನಯಾ ಒಕ್ಕುಂದ ಅವರು ನೀಡಲಿದ್ದಾರೆ ಎಂದರು.
ದಿ. 25 ರ ಬೆಳಿಗ್ಗೆ 9.30 ಗಂಟೆಗೆ ಸಮಕಾಲೀನ ದಲಿತ ಹಾಗೂ ಅಲಕ್ಷಿತ ಸಮುದಾಯಗಳ ಒಂದು ಚಿಂತನೆ ‘ ಎಂಬ ಸಂವಾದ ಗೋಷ್ಠಿ ನಡೆಯಲಿದ್ದು ಸಂಪನ್ಮೂಲ ವ್ಯಕ್ತಿಗಳಾಗಿ ಪೆÇ್ರ. ವೈ. ಬಿ. ಹಿಮ್ಮಡಿ, ಎಂ. ಗೋಪಿನಾಥ ಮತ್ತು ಡಾ. ಕೇದಾರನಾಥ ತಂಬೂರಿಮಠ ಆಗಮಿಸಲಿದ್ದು ಹಿರಿಯ ಪತ್ರಕರ್ತ ಡಾ. ಸರಜೂ ಕಾಟ್ಕರ್ ಅವರು ಅಧ್ಯಕ್ಷತೆಯನ್ನು ವಹಿಸಲಿದ್ದಾರೆ ಎಂದರು.
ದಿ.24 ರ 11-30 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದ್ದು ತಮಿಳುನಾಡು ಸರಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿರುವ ಶಂಭು ಕಲ್ಲೋಳಿಕರ ಅವರು ಸಮಾರೋಪ ನುಡಿಯನ್ನು ಹೇಳಲಿದ್ದು ಕರ್ನಾಟಕ ವಿಶ್ವವಿದ್ಯಾಲಯದ ಕುಲಸಚಿವರಾದ ಡಾ . ಕೆ . ಟಿ. ಹನುಮಂತಪ್ಪ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ . ಮುಖ್ಯ ಅತಿಥಿಗಳಾಗಿ ತುಮಕೂರ ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವ ಡಾ . ನಿರ್ಮಲ ರಾಜು , ಕರ್ನಾಟಕ ವಿಶ್ವವಿದ್ಯಾಲಯದ ಮೌಲ್ಯ ಮಾಪನ ಕುಲಸಚಿವ ಪೆÇ್ರ. ರವೀಂದ್ರ ಕದಂ, ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಕುಲಸಚಿವ ಪೆÇ್ರ.ಎಂ. ಕೂರಿಸಿ ಹಾಗೂ ಸದಾನಂದ ನೆಲ್ಕುರ್ದಿ ಅವರು ಭಾಗವಹಿಸಲಿದ್ದಾರೆ. ಈ ಸಂದರ್ಭದಲ್ಲಿ ವಿಭಾಗದ ಅಧ್ಯಕ್ಷರಾದ ಪೆÇ್ರ. ಎಲ್. ಪಿ. ಮಾರುತಿ ಮತ್ತು ಸ್ಥಳಿಯ ಜಂಟಿ ಕಾರ್ಯದರ್ಶಿಗಳಾದ ಪೆÇ್ರ. ಶೀಲಾಧರ ಮುಗಳಿ ಉಪಸ್ಥಿತರಿರುತ್ತಾರೆ.
ಪತ್ರಿಕಾಗೋಷ್ಠಿಯಲ್ಲಿ ಇತಿಹಾಸ ಮತ್ತು ಪ್ರಾಚ್ಯಶಾಸ್ತ್ರ ವಿಭಾಗ ಸ್ಥಳೀಯ ಕಾರ್ಯದರ್ಶಿಗಳಾದ ಪೆÇ್ರ. ಶಿವರುದ್ರ ಕಲ್ಲೋಳಿಕರ, ಪೆÇ್ರ. ಶೀಲಾಧರ ಮುಗಳಿ, ಪೆÇ್ರ. ಎಲ್. ಪಿ. ಮಾರುತಿ, ಆರ್.ಎಮ್.ಶೇಡಕ್ಷರಿ ಉಪಸ್ಥಿತರಿದ್ದರು.