ನಾಳೆಯಿಂದ ಎಸ್.ಎಸ್.ಎಲ್.ಸಿ. ಪರೀಕ್ಷೆ ಆರಂಭ


ಲಕ್ಷ್ಮೇಶ್ವರ,ಮಾ.24: ತಾಲೂಕಿನ 6 ಪರೀಕ್ಷಾ ಕೇಂದ್ರಗಳಲ್ಲಿ ನಾಳೆಯಿಂದ ಎಸ್ ಎಸ್ ಎಲ್ ಸಿ ಪರೀಕ್ಷೆಗಳು ಆರಂಭವಾಗಲಿವೆ.
ಲಕ್ಷ್ಮೇಶ್ವರದ ಉಮಾ ವಿದ್ಯಾಲಯದ ಮುನ್ಸಿಪಲ್ ಪ್ರೌಢಶಾಲೆ ಪಿ ಎಸ್ ಬಿ ಡಿ ಬಾಲಕಿಯರ ಪ್ರೌಢಶಾಲೆ ಬಿಸಿಎನ್ ಕನ್ನಡ ಮಾಧ್ಯಮ ಪ್ರೌಢಶಾಲೆ ಲಕ್ಷ್ಮೇಶ್ವರ ಹಾಗೂ ಬಡ್ನಿಯ ಸರ್ಕಾರಿ ಪ್ರೌಢಶಾಲೆ ಶಿಗ್ಲಿ ಯ ಎಸ್ ಎಸ್ ಕೆ ಪ್ರೌಢಶಾಲೆ ಬಾಲೆ ಹೊಸ ರು ಸರ್ಕಾರಿ ಪ್ರೌಢಶಾಲಾ ಪರೀಕ್ಷಾ ಕೇಂದ್ರಗಳಲ್ಲಿ ಜರುಗಲಿವೆ.
ಒಟ್ಟು ಲಕ್ಷ್ಮೇಶ್ವರ ತಾಲೂಕಿನ 6 ಪರೀಕ್ಷಾ ಕೇಂದ್ರಗಳಲ್ಲಿ 1698 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದು ಕನ್ನಡ ಮಾಧ್ಯಮದಲ್ಲಿ 1206 ವಿದ್ಯಾರ್ಥಿಗಳು ಆಂಗ್ಲ ಮಾಧ್ಯಮದಲ್ಲಿ 442 ವಿದ್ಯಾರ್ಥಿಗಳು ಉರ್ದು ಮಾಧ್ಯಮದಲ್ಲಿ 50 ವಿದ್ಯಾರ್ಥಿಗಳು ಒಟ್ಟು 1698 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.