ನಾಳೆಯಿಂದ ಎಸ್ಸೆಸ್ಸೆಲ್ಸಿ ಮಕ್ಕಳಿಗೆ ಮೊಬೈಲ್ ಫೋನ್ ಇನ್ ಕಾರ್ಯಕ್ರಮ

ಬಳ್ಳಾರಿ,ಮೇ 02 :2020-21ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆಗಾಗಿ ಹಾಗೂ ಜನತಾ ಕಫ್ರ್ಯೂ ಸಮಯದ ಸದುಪಯೋಗಪಡೆದುಕೊಳ್ಳಲು ಎಸ್ಸೆಸ್ಸೆಲ್ಸಿ ಮಕ್ಕಳಿಗೆ ಮೊಬೈಲ್ ಫೋನ್ ಇನ್ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಬಳ್ಳಾರಿ ಪೂರ್ವವಲಯದ ಕ್ಷೇತ್ರ ಶಿಕ್ಷಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ವಿಷಯವಾರು ಕ್ಲಿಷ್ಟಾಂಶಗಳ ಬಗ್ಗೆ ಇರುವ ಸಂದೇಹಗಳು ಮತ್ತು ಗೊಂದಲಗಳನ್ನು ಪರಿಹರಿಸಲು ಸಹಾಯವಾಣಿಯನ್ನು ಪ್ರಾರಂಭಿಸಲಾಗಿದ್ದು, ಸಂಬಂಧಪಟ್ಟ ವಿಷಯ ಸಂಪನ್ಮೂಲ ಶಿಕ್ಷಕರು ವಿದ್ಯಾರ್ಥಿಗಳ ಪ್ರಶ್ನೆಗೆ ಉತ್ತರಿಸಲಿದ್ದಾರೆ.
ಆದ ಕಾರಣ ಬಳ್ಳಾರಿ ಪೂರ್ವವಲಯ ವ್ಯಾಪ್ತಿಯ ಎಲ್ಲ ಪ್ರೌಢಶಾಲಾ ಮುಖ್ಯಗುರುಗಳು ಹಾಗೂ ಶಿಕ್ಷಕರು ವಿದ್ಯಾರ್ಥಿಗಳಿಗೆ ಈ ಕುರಿತು ಮಾಹಿತಿ ತಲುಪಿಸಬೇಕು ಮತ್ತು ವಿದ್ಯಾರ್ಥಿಗಳು ತಮ್ಮ ಸಂದೇಹಗಳ ಬಗ್ಗೆ ದೂರವಾಣಿ ಮೂಲಕ ಸಂಪರ್ಕಿಸಿ ಪರಿಹಾರ ಕಂಡುಕೊಳ್ಳುವ ಮೂಲಕ ಎಸ್ಸೆಸ್ಸೆಲ್ಸಿ ಫಲಿತಾಂಶ ಉತ್ತಮವಾಗಿ ಬರಲು ಎಲ್ಲರೂ ಶ್ರಮಿಸಬೇಕು ಎಂದು ಅವರು ತಿಳಿಸಿದ್ದಾರೆ.
ಮೊಬೈಲ್ ಫೋನ್ ಇನ್ ಕಾರ್ಯಕ್ರಮದ ವೇಳಾಪಟ್ಟಿ ಹಾಗೂ ಭಾಗವಹಿಸುವ ಸಂಪನ್ಮೂಲ ಶಿಕ್ಷಕರ ವಿವರ: ಮೇ 3ರಂದು ಕನ್ನಡ ವಿಷಯಕ್ಕೆ ಸಂಬಂಧಿಸಿದಂತೆ ಸಿರಿವಾರ ಸರಕಾರಿ ಪ್ರೌಢಶಾಲಾ ಸಹ ಶಿಕ್ಷಕ ಹರಿಪ್ರಸಾದ ಅವರ ಮೊ: 8722517436, ರೂಪನಗುಡಿ ಸರಕಾರಿ ಪ್ರೌಢಶಾಲೆಯ ಸಹ ಶಿಕ್ಷಕ ಬಸವರಾಜ ಟಿ.ಎಂ ಅವರ ಮೊ: 9743887044, ಶ್ರೀಧರಗಡ್ಡೆ ಸರಕಾರಿ ಪ್ರೌಢಶಾಲೆಯ ಸಹಶಿಕ್ಷಕ ಮಲ್ಲಿಕಾರ್ಜುನ ಅವರ ಮೊ: 7892989253. ಮೇ 4ರಂದು ಇಂಗ್ಲಿಷ್ ವಿಷಯಕ್ಕೆ ಸಂಬಂಧಿಸಿದಂತೆ ಮೋಕಾ ಕ.ಪಿ.ಎಸ್ ಸಹಶಿಕ್ಷಕ ಮಧುಸೂಧನ ಅವರ ಮೊ:8792134436, ಅಂದ್ರಾಳು ಸರಕಾರಿ ಪ್ರೌಢಶಾಲೆಯ ಸಹಶಿಕ್ಷಕ ವಿಜಯಭೂಷಣ ಜೋಶಿ ಅವರ ಮೊ:9844394840. ಮೇ 4ರಂದು ಹಿಂದಿ ವಿಷಯಕ್ಕೆ ಸಂಬಂಧಿಸಿದಂತೆ ಹಿರೇಹಡ್ಲಿಗಿ ಸರಕಾರಿ ಪ್ರೌಢಶಾಲೆಯ ಸಹಶಿಕ್ಷಕ ಅಬ್ದುಲ್ ಕಲಾಂ ಅವರ ಮೊ:9845400842, ಬಳ್ಳಾರಿ ಎಸ್‍ಆರ್ ಕಾಲೋನಿ ಸರಕಾರಿ ಪ್ರೌಢಶಾಲೆಯ ಸಹಶಿಕ್ಷಕ ಮೆಹಬೂಬ ಭಾಷಾ ಅವರ ಮೊ:9739458747. ಮೇ 6ರಂದು ಗಣಿತ ವಿಷಯಕ್ಕೆ ಸಂಬಂಧಿಸಿದಂತೆ ಬಾಪೂಜಿನಗರ ಸರಕಾರಿ ಪ್ರೌಢಶಾಲೆಯ ಕಲ್ಪನಾ ಅವರ ಮೊ:9845750575, ಮೋಕಾ ಕೆಪಿಎಸ್‍ನ ಹಿರೇಮಠ ಎಸ್.ಎಂ ಅವರ ಮೊ:9845168850. ಮೇ 7ರಂದು ವಿಜ್ಞಾನ ವಿಷಯಕ್ಕೆ ಸಂಬಂಧಿಸಿದಂತೆ ಕಪಗಲ್ ರಸ್ತೆಯ ಸರಕಾರಿ ಪ್ರೌಢಶಾಲೆಯ ಸಹ ಶಿಕ್ಷಕ ವಿಶ್ವನಾಥ ಅವರ ಮೊ: 9591566856,ಹಗರಿಪಾರಂ ಸರಕಾರಿ ಪ್ರೌಢಶಾಲೆಯ ಗಾದಿಲಿಂಗಪ್ಪ ಅವರ ಮೊ:9481435994. ಮೇ 8ರಂದು ಸಮಾಜ ವಿಜ್ಞಾನ ವಿಷಯಕ್ಕೆ ಸಂಬಂಧಿಸಿದಂತೆ ಕಪಗಲ್ ರಸ್ತೆಯ ಸರಕಾರಿ ಪ್ರೌಢಶಾಲೆಯ ಸಹ ಶಿಕ್ಷಕಿ ಪೂರ್ಣಿಮಾ ಅವರ ಮೊ:8277152320, ಶ್ರೀಧರಗಡ್ಡೆ ಸರಕಾರಿ ಪ್ರೌಢಶಾಲೆಯ ಸಹಶಿಕ್ಷಕ ನರಸನಗೌಡ ಅವರ ಮೊ:9980723072.
ವಿದ್ಯಾರ್ಥಿಗಳು ಈ ವಿಷುಯಗಳಿಗೆ ಸಂಬಂಧಿಸಿದಂತೆ ನಿಗದಿಪಡಿಸಲಾಗಿರುವ ದಿನದಂದು ಬೆಳಗ್ಗೆ 9.30ರಿಂದ 10.30ರವರೆಗೆ ತಮ್ಮ ಪ್ರಶ್ನೆಗಳು ಮತ್ತು ಗೊಂದಲಗಳನ್ನು ಪರಿಹರಿಸಿಕೊಳ್ಳಬಹುದಾಗಿದೆ.