ನಾಳೆಯಿಂದ ಎಸ್ಎಸ್ ಎಲ್ ಸಿ ಪರೀಕ್ಷೆ.
 ಅಖಂಡ ಕೂಡ್ಲಿಗಿ ತಾಲೂಕಿನಲ್ಲಿ 18ಪರೀಕ್ಷಾ ಕೇಂದ್ರಗಳು, 4627 ವಿದ್ಯಾರ್ಥಿಗಳು ಪರೀಕ್ಷೆಗೆ.



ಕೂಡ್ಲಿಗಿ.ಮಾ.30 :- ರಾಜ್ಯಾದ್ಯಾಂತ ನಾಳೆಯಿಂದ ಎಸ್ ಎಸ್ ಎಲ್ ಸಿ ಪರೀಕ್ಷೆಗಳು ಪ್ರಾರಂಭವಾಗುತ್ತಿದ್ದು ಅಖಂಡ ಕೂಡ್ಲಿಗಿ ತಾಲೂಕಿನಲ್ಲಿ ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಒಟ್ಟು 84ಪ್ರೌಢಶಾಲೆಗಳಿದ್ದು 18 ಪರೀಕ್ಷಾ ಕೇಂದ್ರಗಳನ್ನು  ತೆರೆಯಲಾಗಿದ್ದು 4627ಪರೀಕ್ಷೆಗೆ ನೋಂದಣಿಯಾಗಿದ್ದು ಹಾಜರಾಗುವ ಸಂಭವವಿದೆ.
ಕೂಡ್ಲಿಗಿ ಹಾಗೂ ಈಗಿನ ಕೊಟ್ಟೂರು ತಾಲೂಕಿನಲ್ಲಿ ಒಟ್ಟು  18ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿದ್ದು  ಒಂದು ಕೊಠಡಿಯಲ್ಲಿ 24 ವಿದ್ಯಾರ್ಥಿಗಳಿಗೆ 12ಡೆಸ್ಕಗಳ ವ್ಯವಸ್ಥೆ ಮಾಡಲಾಗಿದೆ  ಇದರಂತೆ 201ಪರೀಕ್ಷಾ ಕೊಠಡಿಗಳ ವ್ಯವಸ್ಥೆ ಮಾಡಲಾಗಿ ಹೆಚ್ಚುವರಿಯಾಗಿ 18ಕೊಠಡಿಗಳ ವ್ಯವಸ್ಥೆ ಸಹ ಮಾಡಲಾಗಿದೆ. ಎಲ್ಲಾ ಪರೀಕ್ಷಾ ಕೇಂದ್ರದ ಪರೀಕ್ಷಾ ಕೊಠಡಿಗಳಿಗೆ ಸ್ಯಾನಿಟೈಸರ್ ಮಾಡಲು ಕೂಡ್ಲಿಗಿ ಹಾಗೂ ಕೊಟ್ಟೂರು ಪಟ್ಟಣ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಗೆ ಈಗಾಗಲೇ ಕ್ಷೇತ್ರ ಶಿಕ್ಷಣಾಧಿಕಾರಿ ಕಾರ್ಯಾಲಯದಿಂದ ಪತ್ರ ಬರೆಯಲಾಗಿದೆ ಎಂದು ತಿಳಿದಿದೆ.
ಕೂಡ್ಲಿಗಿ ಸರ್ಕಾರಿ ಜೂನಿಯರ್ ಕಾಲೇಜ್ , ಹೆಚ್ ಎಂ ವಿ ಪದವಿ ಪೂರ್ವ ಕಾಲೇಜ್ , ರೇಣುಕಾ ಪದವಿ ಪೂರ್ವ ಕಾಲೇಜ್ , ಸರ್ಕಾರಿ ಜೂನಿಯರ್ ಕಾಲೇಜ್ ಕೊಟ್ಟೂರು, ಸರ್ಕಾರಿ ಬಾಲಕಿಯರ ಪ್ರೌಢಶಾಲೆ ಕೊಟ್ಟೂರು, ಗುರುದೇವ ಆಂಗ್ಲಮಾಧ್ಯಮ ಶಾಲೆ ಕೊಟ್ಟೂರು, ಸರ್ಕಾರಿ ಬಾಲಕರ ಪ್ರೌಢಶಾಲೆ ಚಿಕ್ಕಜೋಗಿಹಳ್ಳಿ, ಸರ್ಕಾರಿ ಬಾಲಕಿಯರ ಪ್ರೌಢಶಾಲೆ ಚಿಕ್ಕಜೋಗಿಹಳ್ಳಿ, ಎಸ್ ಕೆ ಡಿ ಡಿ ಬಿ ಪ್ರೌಢಶಾಲೆ ಹೊಸಹಳ್ಳಿ, ಬಾಲಕಿಯರ ಪ್ರೌಢಶಾಲೆ ಹೊಸಹಳ್ಳಿ, ಕರ್ನಾಟಕ ಪಬ್ಲಿಕ್ ಶಾಲೆ ಗುಡೇಕೋಟೆ, ಉಜ್ಜಿನಿ ಜಗದ್ಗುರು ಪ್ರೌಢಶಾಲೆ ಉಜ್ಜಿನಿ, ತೆರಳಬಾಳು ಸಿದ್ದೇಶ್ವರ ಪ್ರೌಢಶಾಲೆ ತೂಲಹಳ್ಳಿ, ಶರಣಬಸವೇಶ್ವರ ಸಮನ್ವಯ ಪ್ರೌಢಶಾಲೆ ಕಾನಾಮಡುಗು, ಸರ್ಕಾರಿ ಪ್ರೌಢಶಾಲೆ ಹಿರೇಹೆಗ್ಡಾಳ್ , ಸರ್ಕಾರಿ ಪ್ರೌಢಶಾಲೆ ಚೌಡಾಪುರ, ಕರ್ನಾಟಕ ಪಬ್ಲಿಕ್ ಶಾಲೆ ಕೋಗಳಿ, ಮತ್ತು ಸರ್ಕಾರಿ ಪ್ರೌಢಶಾಲೆ ತಾಯಕನಹಳ್ಳಿ ಸೇರಿ ಒಟ್ಟು 18ಪರೀಕ್ಷಾ ಕೇಂದ್ರಕ್ಕೆ ಸಂಬಂಧಿಸಿದಂತೆ 18ಮುಖ್ಯ ಅಧೀಕ್ಷಕರು, 18 ಮೊಬೈಲ್ ಸ್ವಾಧೀನಾಧಿಕಾರಿಗಳು, 18ಪರೀಕ್ಷಾ  ಪ್ರಶ್ನೆಪತ್ರಿಕೆ ಅಭಿರಕ್ಷಕರು, 18ಸ್ಥಾನಿಕ ಜಾಗೃತ ದಳದ ಅಧಿಕಾರಿಗಳು, ಐವರು ಜಿಲ್ಲಾ ವೀಕ್ಷಣಾಧಿಕಾರಿಗಳು, ಎರಡು ತಾಲೂಕಿನ ತಹಶೀಲ್ದಾರರು, ತಾಲೂಕು ವೈದ್ಯಾಧಿಕಾರಿಗಳು ಪರೀಕ್ಷಾ ವೀಕ್ಷಕರಾಗಿದ್ದಾರೆ. ಪರೀಕ್ಷಾ ಪತ್ರಿಕೆ ರವಾನೆಗೆ ಐದು ಮಾರ್ಗಗಳನ್ನು ಸೂಚಿಸಿದ್ದು ಇದಕ್ಕೆ ಐವರು  ಮಾರ್ಗಾಧಿಕಾರಿಗಳನ್ನು ನೇಮಿಸಲಾಗಿದೆ.
ನಾಳೆಯಿಂದ ಬೆಳಿಗ್ಗೆ 10-30 ಗಂಟೆಯಿಂದ ಮಧ್ಯಾಹ್ನ 1-45ಗಂಟೆವರೆಗೆ ಯಾವುದೇ ಪರೀಕ್ಷೆ ಅಕ್ರಮವಾಗಿ ನಡೆಯದಂತೆ ಬಿಗಿ ಬಂದೋಬಸ್ತ್ ಕಲ್ಪಿಸಲಾಗಿದೆ.ಎಂದು ಕೂಡ್ಲಿಗಿ ಕ್ಷೇತ್ರಶಿಕ್ಷಣಾಧಿಕಾರಿಗಳ ಕಾರ್ಯಾಲಯ ಮಾಹಿತಿ ತಿಳಿಸಿದೆ. 

One attachment • Scanned by Gmail