ನಾಳಿನ ಸಾರ್ವತ್ರಿಕ ಚುನಾವಣೆ ಯಶಸ್ವಿಗೆ, ವಿಭಿನ್ನ ಮತದಾನ ಜಾಗೃತಿ ತಂತ್ರಗಳು


ಸಂಜೆವಾಣಿ ವಾರ್ತೆ
ಕೊಟ್ಟೂರು, ಮೇ.09: ಮೇ- 10 ರಂದು ನಡೆಯುವ 2023ರ ಕರ್ನಾಟಕ ವಿಧಾನ ಸಭಾ ಸಾರ್ವತ್ರಿಕ ಚುನಾವಣೆ ಹಿನ್ನೆಲೆ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎ.ನಸರುಲ್ಲಾ ಮತದಾರರನ್ನು ಆಕರ್ಷಿಸಲು ಕೊಟ್ಟೂರು ಪಟ್ಟಣ ಪಂಚಾಯತಿ ವ್ಯಾಪ್ತಿಯ 25 ಮತಗಟ್ಟೆಗಳ್ಳನ್ನು ಸ್ವಚ್ಛಗೊಳಿಸಿ, ಮೂಲ ಭೂತ ಸೌಕರ್ಯಗಳನ್ನು ಕಲ್ಪಿಸುವ ಮೂಲಕ ಮತಗಟ್ಟೆಗಳನ್ನು ವಿಶೇಷ ರೀತಿಯಲ್ಲಿ ಶೃಂಗರಿಸಿದ್ದಾರೆ.
ಕೊಟ್ಟೂರು ಪಟ್ಟಣದಲ್ಲಿ 10768 ಪುರುಷರು ಮತ್ತು 11213 ಮಹಿಳೆಯ ಒಟ್ಟು 21981 ಮತದಾರರಿದ್ದು, ಹೆಚ್ಚಿನ ಮತದಾನ ನಡೆಯಲು, ಮತಗಟ್ಟೆ ಕೇಂದ್ರಗಳಲ್ಲಿ ಮೂಲ ಸೌಕರ್ಯಗಳೊಂದಿಗೆ ,ಮತದಾರರ ವಿಶ್ರಾಂತಿಗಾಗಿ ಮತಗಟ್ಟೆಗಳ ಹತ್ತಿರ ನೆರಳಿನ ವ್ಯವಸ್ಥೆ ಮತ್ತು ವಿಶ್ರಾಂತಿ ಕೊಠಡಿಗಳನ್ನು ಕಲ್ಪಿಸಿದ್ದಾರೆ, ವಿಕಲಚೇತನರು, ಹಿರಿಯ ನಾಗರೀಕರ ಅನುಕೂಲಕ್ಕಾಗಿ ಗಾಲಿ ಕುರ್ಚಿ ವ್ಯವಸ್ಥೆಯನ್ನು ಕೂಡ ಮಾಡಲಾಗಿದೆ.
ಮತಗಟ್ಟೆ ಸಂಖ್ಯೆ 232 ಸರ್ಕಾರಿ ಪದವಿ ಪೂರ್ವ ಕಾಲೇಜು ರೂಮ್ ನಂ.1 ನ್ನು “ಸಖೀ ಮತದಾನ ಕೇಂದ್ರ’ (ಪಿಂಕ್ ಬೂತ್)ನ್ನಾಗಿ. ಮತಗಟ್ಟೆ ಸಂಖ್ಯೆ 251 ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕೂಡ್ಲಿಗಿ ರಸ್ತೆ ಮತಗಟ್ಟೆಯನ್ನು “ಯುವ ಮತದಾರರ ಕೇಂದ್ರ’ ಹಾಗೂ ಮತಗಟ್ಟೆ ಸಂಖ್ಯೆ 248 ಸರ್ಕಾರಿ ಮದಾರಿ ಪ್ರಾಥಮಿಕ ಶಾಲೆ, ಗಚ್ಚಿನಮಠ ರೂಮ್ ನಂ.1 ನ್ನು “ಮಾದರಿ ಮತದಾನ ಕೇಂದ್ರ’ವನ್ನಾಗಿ ಮಾಡಲಾಗಿದ್ದು, ಸದರಿ ಮತಗಟ್ಟೆಗಳಿಗೆ ವಿಶೇಷ ರೂಪದಲ್ಲಿ ಶೃಂಗರಿಸಲಾಗಿದೆ.
2023ರ ಸಾರ್ವತ್ರಿಕ ವಿಧಾನ ಸಭಾ ಚುನಾವಣೆಯಲ್ಲಿ ಪಟ್ಟಣದಲ್ಲಿ ಶೇ.90 ರಷ್ಟು ಮತದಾನ ನಡೆಯಲೆಂದು ಈಗಾಗಲೇ
ಮತದಾರರಲ್ಲಿ ಕಡ್ಡಾಯವಾಗಿ ಮತದಾನ ಮಾಡುವಂತೆ ಕಳೆದ ಒಂದು ತಿಂಗಳಿಂದ ಜಾಗೃತಿ ಜಾಥಾ, ಬೈಕ್ ರ್ಯಾಲಿ, ಪಂಚಿನ ಮೆರೆವಣಿಗೆ, ಮೇಣದ ಬತ್ತಿ ನಡಿಗೆ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಅಂಗನವಾಡಿ ಕಾರ್ಯಕರ್ತರು, ಆಶಾ ಕಾರ್ಯಕರ್ತೆಯರಿಂದ ಮತ್ತು ಮಹಿಳಾ ಸಂಘಗಳೋಂದಿಗೆ ಮೆಹೆಂದಿ ಹಾಕಿಕೊಳ್ಳುವ ಮೂಲಕ, ಬೀದಿ ನಾಟಕಗಳು, ಮತದಾನ ಜಾಗೃತಿ ಗೀತೆ ಹಾಡುವುದು ಈಗೆ ಹತ್ತು ಹಲವು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರು. 
ಇಷ್ಟೆಲ್ಲಾ ಮುತುವರ್ಜಿ ವಹಿಸಿಕೊಂಡು ಸತತ ಒಂದು ತಿಂಗಳು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಮತ್ತು ಸಿಬ್ಬಂದಿ ಹಾಗೂ ಚುನಾವಣಾಧಿಕಾರಿಗಳು ಸೇರಿದಂತೆ ಇತರೆ ಎಲ್ಲಾ ಅಧಿಕಾರಿಗಳು ಶ್ರಮಿಸಿದ್ದಾರೆ ಇವರ ಶ್ರಮವು ಯಶಸ್ವಿಯಾಗಲು ಪಟ್ಟಣದ ಪ್ರತಿಯೊಬ್ಬ ಮತದಾರರು ಕಡ್ಡಾಯವಾಗಿ ಮತದಾನ ಮಾಡಿ ಪ್ರಜಾಪ್ರಭುತ್ವ ವ್ಯವಸ್ಥೆ ಎತ್ತಿಡಿಯಬೇಕಿದೆ.