ನಾಳಿನ ಬಂದ್‌ಗೆ ಹಲವು ಸಂಘಟನೆಗಳ ಬೆಂಬಲ

ಮಾಲೂರು.ಸೆ೨೭:ಕಾವೇರಿ ನೀರು ಹೋರಾಟಕ್ಕೆ ೨೯ರ ಶುಕ್ರವಾರ ಕರ್ನಾಟಕ ಬಂದ್ ಕರೆಗೆ ಕನ್ನಡಪರ, ದಲಿತಪರ, ರೈತಪರ, ಸಾಹಿತಿಗಳು, ಚಿಂತಕರು ಸೇರಿದಂತೆ ಸುಮಾರು ೨೦ಕ್ಕೂ ಹೆಚ್ಚು ಸಂಘಟನೆಗಳು ಬೆಂಬಲ ಸೂಚಿಸಿವೆ.
ಪಟ್ಟಣದ ಕನ್ನಡ ಸಾಹಿತ್ಯ ಪರಿಷತ್ ಕಚೇರಿಯ ಸಭಾಂಗಣದಲ್ಲಿ ಕನ್ನಡ ಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಎಂ.ವಿ.ಹನುಮಂತಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಪೂರ್ವಭಾವಿ ಸಭೆ ನಡೆಯಿತು.
ಕನ್ನಡ ಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಎಂ.ವಿ.ಹನುಮಂತಯ್ಯ ಮಾತನಾಡಿ, ಕಾವೇರಿ ನದಿ ನೀರನ್ನು ಅವಲಂಭಿಸಿಕೊಂಡು ರಾಜ್ಯ ಬಹುತೇಕ ರೈತರು ಕಾವೇರಿ ನದಿಯ ನೀರಿನ ಮೇಲೆ ಅವಲಂಬಿತರಾಗಿದ್ದು, ರಾಜ್ಯ ರಾಜಧಾನಿಯಲ್ಲಿ ಕುಡಿಯುವ ನೀರಿಗೆ ಕಾವೇರಿ ನದಿ ನೀರು ಜೀವಜಲವಾಗಿದೆ, ಇಂತಹ ಸಂದರ್ಭದಲ್ಲಿ ತಮಿಳುನಾಡು ಸರ್ಕಾರ ತಮ್ಮ ರಾಜ್ಯಕ್ಕೆ ನೀರಿ ಹರಿಸುವಂತೆ ಒತ್ತಾಯ ಮಾಡಿದ್ದು, ಸುಪ್ರೀಂಕೋರ್ಟ್ ಹಾಗೂ ಕಾವೇರಿ ನಿರ್ವಹಣಾ ಪ್ರಾಧಿಕಾರ ನೀರು ಹರಿಸುವಂತೆ ರಾಜ್ಯಕ್ಕೆ ಆದೇಶ ಸಹಿತ ಸೂಚನೆ ನೀಡಿದ್ದು, ಸುಪ್ರೀಂಕೋರ್ಟ್ ಆದೇಶದಂತೆ ನೀರು ಹರಿಸಿದರೆ ನಮ್ಮ ರಾಜ್ಯದ ರೈತರಿಗೆ ಸಮಸ್ಯೆಯಾಗಲಿದ್ದು, ಇದೀಗ ಹೋರಾಟದಿಂದ ಮಾತ್ರ ನೀರು ಉಳಿಸಿಕೊಳ್ಳಲು ಸಾಧ್ಯವಾಗಲಿದ್ದು, ಕನ್ನಡ ಪರ ಸಂಘಟನೆಗಳು ನೀಡಿರುವ ಕರ್ನಾಟಕ ಬಂದ್‌ಗೆ ನಾವುಗಳು ಸ್ವಯಂ ಪ್ರೇರಿತವಾಗಿ ಬಂದ್‌ನಲ್ಲಿ ಪಾಲ್ಗೊಂಡು ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ, ಚಾಲಕ ಸಂಘಟನೆಗಳು ಸೇರಿ ಬಂದ್ ಯಶಸ್ವಿ ಮಾಡುವ ಮೂಲಕ ಕಾವೇರಿ ಸಂರಕ್ಷಣೆಗೆ ಮುಂದಾಗಬೇಕು ಎಂದರು.
ಇದೆ ವೇಳೆ ವಿವಿಧ ಸಂಘಟನೆಗಳ ಮುಖಂಡರುಗಳು ಕನ್ನಡ ಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಎಂ.ವಿ.ಹನುಮಂತಯ್ಯ ಅವರ ನೇತೃತ್ವದಲ್ಲಿ ಪೊಲೀಸ್ ಠಾಣೆಗೆ ಭೇಟಿ ನೀಡಿ ಬಂದ್‌ಗೆ ಅನುಮತಿ ನೀಡುವಂತೆ ಮನವಿ ಮಾಡಿದರು.
ಕರವೇ ಪ್ರವೀಣ್ ಶೆಟ್ಟಿ ಬಣದ ತಾಲ್ಲೂಕು ಅಧ್ಯಕ್ಷ ಶಿವಾರ ನಾರಾಯಣಸ್ವಾಮಿ, ಎ.ಎನ್.ದಯಾನಂದ್, ದಲಿತ ನಾಗರೀಕ ಸಮಿತಿ ರಾಜ್ಯಾಧ್ಯಕ್ಷ ಕೋಡೂರು ಗೋಪಾಲ್, ದಲಿತ ಸಿಂಹ ಸೇನೆ ಕರ್ನಾಟಕ ರಾಜ್ಯಾಧ್ಯಕ್ಷ ತಿಪ್ಪಸಂದ್ರ ಶ್ರೀನಿವಾಸ್, ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂ.ಸಂಚಾಲಕ ಚವ್ವೇನಹಳ್ಳಿ ವಿಜಿ, ತಾಲ್ಲೂಕು ಸಂಚಾಲಕ ಎಸ್.ಎಂ.ರಾಜು, ನಮ್ಮ ಕರ್ನಾಟಕ ಸೇನೆ ತಾಲ್ಲೂಕು ಅಧ್ಯಕ್ಷ ಎಸ್.ಎಂ.ರಾಜು, ಉಪಾಧ್ಯಕ್ಷ ಚಾಕನಹಳ್ಳಿ ನಾಗರಾಜ್, ಕನ್ನಡ ಹರೀಶ್, ಸುರೇಶ್ ಸಿಂಗ್, ಕಲ್ಲು ಸೀನಪ್ಪ, ಶ್ರೀಧರ್ ಉಪಾಧ್ಯಾಯ, ಲಕ್ಷ್ಮಣ ಸಿಂಗ್, ಕೆ.ಮುನಿಕೃಷ್ಣಪ್ಪ, ಜಿ.ನಾರಾಯಣಸ್ವಾಮಿ, ರಮೇಶ್, ಕೆ.ಎನ್.ಜಗದೀಶ್, ವಿಕ್ರಂ ಶ್ರೀನಿವಾಸ್, ನವೀನ್, ನಾಗಯ್ಯ, ರಘು, ಡಿ.ಎನ್.ಗೋಪಾಲ್, ಮಂಜುನಾಥ್ ಕೂರಿ ಮಂಜುನಾಥ್, ಸಂತೋಷ್, ವೆಂಕಟೇಶ್, ಬಾಬು, ಸೋಮಶೇಖರಚಾರಿ ಸೇರಿದಂತೆ ಹಲವಾರು ಮುಖಂಡರು ಹಾಜರಿದ್ದರು.