ನಾಳಿದ್ದು, ಮೆಟ್ರೋ ಸಂಚಾರ ತಾತ್ಕಾಲಿಕ ಸ್ಥಗಿತ

ಬೆಂಗಳೂರು, ಜ.8-ದುರಸ್ತಿ ಕಾಮಗಾರಿ ನಡೆಯುವ ಕಾರಣದಿಂದ
ನಾಳಿದ್ದು(ಜ.10) ನ್ಯಾಷನಲ್ ಕಾಲೇಜು ಮೆಟ್ರೋ ನಿಲ್ದಾಣದಿಂದ ಯಲಚೇನಹಳ್ಳಿ ಮೆಟ್ರೋ ನಿಲ್ದಾಣದವರೆಗೆ ಮೆಟ್ರೋ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

ಬನಶಂಕರಿ ಮತ್ತು ಜಯನಗರದ ಮೆಟ್ರೋ ನಿಲ್ದಾಣಗಳ ನಡುವಿನ ಹಸಿರು ಮಾರ್ಗದ ದುರಸ್ತಿ ಕಾಮಗಾರಿ ನಡೆಯುವ ಕಾರಣದಿಂದ ಮೆಟ್ರೋ ಸಂಚಾರದಲ್ಲಿ ಬೆಳಿಗ್ಗೆ 7 ರಿಂದ 9ರ ತನಕ (ಎರಡು ಗಂಟೆ ಕಾಲ) ವ್ಯತ್ಯಯವಾಗಲಿದೆ.

ಇನ್ನು, ನೇರಳೆ ಮಾರ್ಗದಲ್ಲಿ ಎಂದಿನಂತೆ ಮೆಟ್ರೋ ಸೇವೆ ಮುಂದುವರೆಯಲಿದೆ ಎಂದು ಬಿಎಂಆರ್​ಸಿಎಲ್​ ಪ್ರಕಟಣೆಯಲ್ಲಿ ತಿಳಿಸಿದೆ.