ನಾಲ್ವರ ನಾಮಪತ್ರ ಸಲ್ಲಿಕೆ; ಮತದಾರರ ಪಟ್ಟಿಗಳಲ್ಲಿ ಗೊಂದಲ

ವಿಜಯಪುರ,ಏ೧೧:ವಿಜಯಪುರ ಪುರಸಭೆಗೆ ಏಪ್ರಿಲ್ ೮ ರಿಂದ ನಾಮಪತ್ರ ಸಲ್ಲಿಕೆ ಪ್ರಾರಂಭವಾಗಿದ್ದು, ೮ ರಂದು ಒಂದು, ದಿನಾಂಕ ಒಂಬತ್ತರಂದು ಮೂರು ಒಟ್ಟಾರೆ ನಾಲ್ವರು ನಾಮಪತ್ರಗಳನ್ನು ಸಲ್ಲಿಸಿರುತ್ತಾರೆ ಎಂದು ಚುನಾವಣಾಧಿಕಾರಿ ಎಸ್.ಅಮೀರ್ ಪಾಷ ತಿಳಿಸಿರುವರು.
ಏಪ್ರಿಲ್-೮ ರಂದು ವಿಮಲಮ್ಮ ಬಸವರಾಜು ೧ ನೇ ವಾರ್ಡ್ ಜಯಮಹಲ್ ಲೇಔಟ್‌ಗೆ ಜೆ.ಡಿ.ಎಸ್ ವತಿಯಿಂದ ನಾಮಪತ್ರ ಸಲ್ಲಿಸಿದ್ದು, ಏಪ್ರಿಲ್-೯ ರಂದು ಮಾಜಿ ಪುರಸಭಾ ಸದಸ್ಯ ಎಂ.ಕೇಶವಪ್ಪ ಜೆ.ಡಿ.ಎಸ್ ಪಕ್ಷದಿಂದ ಎನ್.ಮಂಜುಳ ಮುನಿರಾಜು ಬಿ.ನಿರ್ಮಲ ಪ್ರಕಾಶ್ ಪಕ್ಷೇತರ ಅಭ್ಯರ್ಥಿಗಳಾಗಿ ನಾಮಪತ್ರಗಳನ್ನು ಸಲ್ಲಿಸಿರುವರು.
ಮತದಾರರ ಪಟ್ಟಿಗಳ ಕೊರತೆ;-ಪುರಸಭಾ ಚುನಾವಣೆ ಘೋಷಣೆಯಾಗಿದ್ದು, ಪಟ್ಟಣದ ಪುರಸಭಾ ಕಚೇರಿಯಲ್ಲಾಗಲೀ, ಚುನಾವಣಾಧಿಕಾರಿಗಳ ಬಳಿಯಲ್ಲಾಗಲೀ, ಸಾರ್ವಜನಿಕರಿಗೆ ಹಾಗೂ ಸ್ಪರ್ಧಾಕಾಂಕ್ಷಿಗಳಿಗೆ ಮತದಾರರ ಪಟ್ಟಿ ದೊರೆಯದೇ, ಸಾಕಷ್ಟು ತೊಂದರೆಯುಂಟಾಗಿದೆ ಎಂದು ನಾಮಪತ್ರ ಸಲ್ಲಿಕೆಯಲ್ಲಿ ಮತದಾರರ ಪಟ್ಟಿಯಲ್ಲಿನ ಸಂಖ್ಯೆಯನ್ನು ನಮೂದು ಮಾಡಬೇಕಾಗಿದ್ದು, ಎಲ್ಲರಿಗೂ ಇದರಿಂದ ತೊಂದರೆಯಾಗುತ್ತಿದೆ ಎಂದು ಮಾಜಿ ಪುರಸಭಾ ಸದಸ್ಯ ಆರ್.ಮುನಿರಾಜು ಆರೋಪಿಸಿದರು. ಪುರಸಭಾ ಮುಖ್ಯಾಧಿಕಾರಿ ಪ್ರದೀಪ್ ಕುಮಾರ್‌ರವರು ಮಾತನಾಡಿ, ಮತದಾರರ ಪಟ್ಟಿಗಳು ತಾಲೂಕು ಕಚೇರಿಯಲ್ಲಿ ಸಾಕಷ್ಟು ಲಭ್ಯವಿದ್ದು, ಪುರಸಭೆಯಲ್ಲಿ ವಿತರಿಸಲು ಒಪ್ಪಿಗೆ ನೀಡದ ಕಾರಣ ಇಲ್ಲಿ ದೊರೆಯುತ್ತಿಲ್ಲ. ಅವಶ್ಯಕತೆಯುಳ್ಳವರು ತಾಲೂಕು ಕಚೇರಿಯಲ್ಲಿ ನಿಗಧಿತ ಶುಲ್ಕ ಪಾವತಿಸಿ, ಪಡೆದುಕೊಳ್ಳಬಹುದೆಂದು ತಿಳಿಸಿದರು.