ನಾಲ್ವರು ಸಾಧಕರಿಗೆ ಕಲಾಭಿಮಾನಿ ಗೌರವ ಪ್ರಶಸ್ತಿ


ಸಂಜೆವಾಣಿ ವಾರ್ತೆ
ಹೊಸಪೇಟೆ ಜು28: ಕರ್ನಾಟಕ ಕಲಾಭಿಮಾನಿ ಸಂಘ, ತನ್ನ ಬೆಳ್ಳಿ ಹಬ್ಬದ ಪ್ರಯುಕ್ತ ನಾಲ್ವರು ಕಲಾವಿದರಿಗೆ ಕಲಾಭಿಮಾನಿ ಗೌರವ ಪ್ರಶಸ್ತಿ ನೀಡಿ ಗೌರವಿಸಲಿದೆ ಎಂದು ಕಲಾಭಿಮಾನಿ ಸಂಘದ ಉಪಾಧ್ಯಕ್ಷ ಶ್ರೀಪತಿ ಆಚಾರ್ಯ ತಿಳಿಸಿದ್ದಾರೆ.
ನಗರ ಮಲ್ಲಿಗಿ ಹೋಟೆಲ್ ಸಭಾಂಗಣದಲ್ಲಿ ಜು.29 ರಂದು ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.
ಜಾನಪದ ಅಕಾಡೆಮಿ ಅಧ್ಯಕ್ಷೆ ಪದ್ಮಶ್ರೀ ಮಾತಾ ಬಿ. ಮಂಜಮ್ಮ ಜೋಗತಿ, ತೆಂಕುತಿಟ್ಟು ಯಕ್ಷಗಾನ ರಂಗ ಹಾಗೂ ಪ್ರಸಾಧನ ಕಲಾವಿದರಾಗಿ ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಸೇವೆ ಸಲ್ಲಿಸಿರುವ ಮಂಗಳೂರಿನ ಕೇಶವ ಶಕ್ತಿನಗರ, ಕಾಲ ಯಕ್ಷಗಾನ ಕ್ಷೇತ್ರದಲ್ಲಿ ನಾಲ್ಕು ದಶಕಗಳ ಸೇವೆ ಸಲ್ಲಿಸಿರುವ  ತಾರಾನಾಥ ವರ್ಕಾಡಿ ಮತ್ತು ಯಾಜಿ ಪ್ರಕಾಶನದ ಮೂಲಕ ಅನೇಕ ಮೌಲಿಕ ಪುಸ್ತಕಗಳನ್ನು ಪ್ರಕಟಿಸಿ, ಪ್ರಕಾಶನ ಕ್ಷೇತ್ರದಲ್ಲಿ ಸಾಧನೆ ಗೈದಿರುವ ಸವಿತಾ ಯಾಜಿ ಅವರು ಸೇರಿದಂತೆ ವಿವಿಧ ರಂಗದಲ್ಲಿ ಸಾಧನೆ ಗೈದಿರುವ ಒಟ್ಟು ನಾಲ್ವರಿಗೆ ಕಲಾಭಿಮಾನಿ ಗೌರವ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ತಿಳಿಸಿದ್ದಾರೆ.
ಉದ್ಘಾಟನೆ: ಕರ್ನಾಟಕ ಕಲಾಭಿಮಾನಿ ಸಂಘದ ಬೆಳ್ಳಿ ಹಬ್ಬದ ನಿಮಿತ್ತವಾಗಿ ನಗರದ ಮಲ್ಲಿಗಿ ಸಭಾಂಗಣದಲ್ಲಿ ಜು.29 ರಂದು 6.30 ಸಮಾರೋಪ ಸಮಾರಂಭ ನಡೆಯಲಿದೆ. ಸಂಘದ ಗೌರವಾಧ್ಯಕ್ಷ ದೀಪಕ್ ಕುಮಾರ್ ಸಿಂಗ್ ಸಮಾರಂಭಕ್ಕೆ ಚಾಲನೆ ನೀಡಲಿದ್ದಾರೆ. ಸಂಘದ ಅಧ್ಯಕ್ಷ ಮೋಹನ್ ಕುಂಟಾರ್ ಅಧ್ಯಕ್ಷತೆ ವಹಿಸಲಿದ್ದಾರೆ. ಕನ್ನಡ ವಿಶ್ವವಿದ್ಯಾಲಯದ ಕುಲಸಚಿವ ಡಾ. ಎ.ಸುಬ್ಬಣ್ಣ ರೈ, ಅಭಿನಂದನ ಮಾತುಗಳನ್ನು ಆಡಲಿದ್ದಾರೆ. ಹುಡಾ ಅಧ್ಯಕ್ಷ ಅಶೋಕ್ ಜೀರೆ ಉಪಸ್ಥಿತರಿವರು. ಸಮಾರಂಭದ ನಂತರ ಶ್ರೀ ಕ್ಷೇತ್ರ ಹಟ್ಟಿಯಂಗಡಿ ಮೇಳ, ಚೂಡಾಮಣಿ ಬಡಗುತಿಟ್ಟು ಮತ್ತು ಬಲ್ಲಿರೇನಯ್ಯ ಮಿತ್ರಮೇಳ ಬೆಳ್ಮಣ್ಣು ತಂಡದವರಿಂದ ಅಂಬಾ ಶಪಥ ಎಂಬ ತೆಂಕುತಿಟ್ಟು ಯಕ್ಷಗಾನ ಪೌರಾಣಿಕ ಪ್ರಸಂಗಗಳ ಪ್ರದರ್ಶನ ನಡೆಯಲಿದೆ ಎಂದು ಅವರು ಹೇಳಿದ್ದಾರೆ.

Attachments area