ನಾಲ್ವರು ವಿದೇಶಿ ಪ್ರವಾಸಿಗರಿಗೆ ಸೋಂಕು

ಜೈಪುರ (ರಾಜಸ್ಥಾನ), ಮಾ ೧೬ – ಆಸ್ಟ್ರೇಲಿಯಾದಿಂದ ರಾಜಸ್ಥಾನಕ್ಕೆ ಪ್ರವಾಸಕ್ಕೆ ಬಂದಿದ್ದ ಮಹಿಳೆ ಸೇರಿದಂತೆ ನಾಲ್ವರು ವಿದೇಶಿ ಪ್ರವಾಸಿಗರಿಗೆ ಕೋವಿಡ್ ಸೋಂಕು ತಗುಲಿರುವುದು ದೃಢಪಟ್ಟಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆಸ್ಟ್ರೇಲಿಯದ ಪ್ರವಾಸಿಗರು ಸವಾಯಿ ಮಾಧೋಪುರದ ಹೋಟೆಲ್‌ನಲ್ಲಿ ತಂಗಿದ್ದರು. ಕೋವಿಡ್ – ಸೋಂಕಿಗೆ ಒಳಗಾಗಿದ್ದಾರೆ.ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ರಾಜಸ್ಥಾನದ ಆರೋಗ್ಯ ವಿಶ್ವವಿದ್ಯಾಲಯಉಪಕುಲಪತಿ ಡಾ ಸುಧೀರ್ ಭಂಡಾರಿ ತಿಳಿಸಿದ್ದಾರೆ.
“ಮೂವರು ಪ್ರವಾಸಿಗರ ಸ್ಥಿತಿ ಸಾಮಾನ್ಯವಾಗಿದೆ, ನಾಲ್ಕನೆಯವರಿಗೆ ಶೀತವಿದೆ” ಚಿಕಿತ್ಸೆ ಮುಂದುವರಿಸಲಾಗಿದೆ ಎಂದು ಹೇಳಿದ್ದಾರೆ.
ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಅವರು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಪತ್ರ ಬರೆದಿದ್ದಾರೆ. ಕೆಲವು ರಾಜ್ಯಗಳಲ್ಲಿ ಕೋವಿಡ್-೧೯ ಪರೀಕ್ಷಾ ಪಾಸಿಟಿವಿ ದರ ಕ್ರಮೇಣವಾಗಿ ಏರಿಕೆಯಾಗುತ್ತಿದ್ದು, ಇದು ತಕ್ಷಣವೇ ಗಮನಹರಿಸಬೇಕಾದ ಸಮಸ್ಯೆಯಾಗಿದೆ ಎಂದು ಸೂಚಿಸಿದ್ದರು
ಹೊಸ ಪ್ರಕರಣಗಳು, ಕಂಡುಬರುತ್ತಿರುವ ಹಿನ್ನೆಲೆಯಲ್ಲಿ ಆತಂಕ ಮೂಡಿಸಿದೆ. ಇದರ ಹೊರತಾಗಿಯೂ, ಇನ್ನೂ ಜಾಗರೂಕರಾಗಿರಿ ಮತ್ತು ಪರೀಕ್ಷೆಯ ಐದು ಪಟ್ಟು ಕಾರ್ಯತಂತ್ರದ ಮೇಲೆ ಕೇಂದ್ರೀಕರಿಸುವ ಅಗತ್ಯವಿದೆ ಎಂದು ಹೇಳಿದೆ.
ಪರೀಕ್ಷೆ ,ಪತ್ತೆಣ ಚಿಕಿತ್ಸೆ ಸೇರಿ ಐದು ಪಟ್ಟು ಕಾರ್ಯತಂತ್ರದ ಮೇಲೆ ಕೇಂದ್ರೀಕರಿಸುವ ಅವಶ್ಯಕತೆಯಿದೆ. ಲಸಿಕೆ ಹಾಕುವುದು ಮತ್ತು ಕೋವಿಡ್ ಸೂಕ್ತ ನಡವಳಿಕೆಯನ್ನು ಅನುಸರಿಸುವುದು” ಎಂದು ಭೂಷಣ್ ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.
ಇತ್ತೀಚೆಗೆ ಭಾರತದ ಅನೇಕ ರಾಜ್ಯಗಳು ಕೋವಿಡ್ ಪ್ರಕರಣಗಳು ಹೆಚ್ಚಾಗಿವೆ. ಗುಜರಾತ್‌ನಲ್ಲಿ ಮಂಗಳವಾರ ಒಟ್ಟು ೯೦ ಹೊಸ ಪ್ರಕರಣಗಳು ವರದಿಯಾಗಿವೆ.
ಏತನ್ಮಧ್ಯೆ, ಹಿಮಾಚಲ ಪ್ರದೇಶದಲ್ಲಿ ೨೮ ಹೊಸ ಕೋವಿಡ್ -೧೯ ಪ್ರಕರಣಗಳನ್ನು ದಾಖಲಿಸಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.