ನಾಲ್ವರು ದರೋಡೆಕೋರರ ಯಶಸ್ವಿ ಬಂಧನ

ಮೈಸೂರು:ಮಾ:23: ವೈದ್ಯರ ಮನೆಯಲ್ಲಿ ದರೋಡೆ ಮಾಡಿದ್ದ ನಾಲ್ವರು ಖದೀಮರನ್ನು ಬಂಧಿಸಿದ ಪೆÇಲೀಸರು 9,86,200ರೂ.ನಗದು 42ಗ್ರಾಂ ಚಿನ್ನಾಭ ರಣಗಳು 1.145ಬೆಳ್ಳಿಯ ಪದಾರ್ಥಗಳು, ಕೃತ್ಯಕ್ಕೆ ಬಳ ಸಿದ್ದ ಒಂದು ಕಾರು, ಮೊಬೈಲ್ ಫೆÇೀನ್ ಮತ್ತು ಮಾರಕಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ.
ದೂರು ನೀಡಿದ್ದ ಸುಮುಖ ಅವರ ತಂದೆ ತಾಯಿ ಇಬ್ಬರೂ ವೈದ್ಯರಾಗಿದ್ದು 17/3/2021ರಂದು ಇಬ್ಬರೂ ಕ್ಲಿನಿಕ್ ಗೆ ಹೋಗಿದ್ದ ಸಂದರ್ಭದಲ್ಲಿ ಕೈಕಾಲುಕಟ್ಟಿ ಕೊಲೆ ಬೆದರಿಕೆ ಹಾಕಿ ಚಿನ್ನಾಭರಣ, ನಗದು ಹಣ ದೋಚಿದ್ದರು. ನೀಡಿದ್ದ ದೂರಿನ ಮೇರೆಗೆ ಅವಿನಾಶ್ ಆರ್ ಬಿನ್ ಅಭಿ ಬಿನ್ ಲೇಟ್ ರಂಗಸ್ವಾಮಿ(25), ನವೀನ್ ಕುಮಾರ್ ಹೆಚ್ ಬಿನ್ ಲೇ.ಶೇಖರ್(25), ರವಿ ಜೆ.ಬಿನ್ಜವರಯ್ಯ(30), ಸತೀಶ @ಶಶಿ ಬಿನ್ ರಾಜೇಗೌಡ(33) ಅವರುಗಳನ್ನು ದಸ್ತಗಿರಿ ಮಾಡಿ ಅವರಿಂದ 9.86,200ರೂ.ನಗದು, 42ಗ್ರಾಂ ಚಿನ್ನಾಭರಣಗಳು, 1.145ಕೆ.ಜಿ.ಬೆಳ್ಳಿಯ ಪದಾರ್ಥಗಳನ್ನು ಮತ್ತು ಕೃತ್ಯಕ್ಕೆ ಬಳಸಿದ್ದ ಒಂದು ವೋಕ್ಸ್ ವೇಗನ್ ಪೆÇೀಲೋ ಕಾರು, ಕೆಎ 09ಎಂಇ 9608, ಮೊಬೈಲ್ ಫೆÇೀನ್ ವಶಪಡಿಸಿಕೊಂಡಿದ್ದಾರೆ.
ಪತ್ತೆ ಕಾರ್ಯದಲ್ಲಿ ಡಿಸಿಪಿ ಗೀತ ಪ್ರಸನ್ನ ಮಾರ್ಗದರ್ಶನದಲ್ಲಿ ಕೃಷ್ಣರಾಜ ವಿಭಾಗದ ಸಹಾಯಕ ಪೆÇಲೀಸ್ ಆಯುಕ್ತ ಎಂ.ಎಸ್.ಪೂರ್ಣಚಂದ್ರ ತೇಜಸ್ವಿ ಅವರ ಉಸ್ತುವಾರಿಯಲ್ಲಿ ಸರಸ್ವತಿಪುರಂ ಪೆÇಲೀಸ್ ಠಾಣೆಯ ಪಿಐ ಸಿ.ತಿಮ್ಮರಾಜು, ಕುವೆಂಪುನಗರ ಪೆÇಲೀಸ್ ಠಾಣೆಯ ಪಿಎಸ್ ಐ ರಾಚಯ್ಯ ಎಸ್, ಸಿಬ್ಬಂದಿಯವರಾದ ಕರೀಗೌಡ, ಕೆ.ಎನ್, ಸುರೇಶ್, ಮಂಜುನಾಥ್, ಬಸವರಾಜ್ ಅರಸ್, ಪ್ರಕಾಶ್, ರಾಘವೇಂದ್ರ, ಮಂಜುನಾಥ್,ಉಮೇಶ್, ಮಂಜು, ಅರ್ಜುನ್, ಹರೀಶ್ ಕುಮಾರ್, ಮಲ್ಲಿಕಾರ್ಜುನ್, ಬಸವರಾಜು, ಡ್ರೈವರ್ ಹರೀಶ್, ಮಹದೇವ, ಮೋಹನ್ ಆರೋಪಿಗಳನ್ನು ಪತ್ತೆ ಮಾಡಲು ಶ್ರಮಿಸಿದ್ದು, ಪತ್ತೆ ಕಾರ್ಯ ನಡೆಸಿದ ಸಿಬ್ಬಂದಿಗಳ ಕಾರ್ಯವನ್ನು ನಗರ ಪೆÇಲೀಸ್ ಆಯುಕ್ತ ಡಾ.ಚಂದ್ರಗುಪ್ತ, ಡಿಸಿಪಿ, ಡಾ.ಎ.ಎನ್.ಪ್ರಕಾಶ್ ಗೌಡ ಶ್ಲಾಘಿಸಿದ್ದಾರೆ