ನಾಲ್ಗೆ ಚಂಡಮಾರುತಕ್ಕೆ ೭೨ ಸಾವು

ಮಗಿಂದಾನಾವೋ (ಫಿಲಿಪೈನ್ಸ್), ಅ.೨೯- ಉಷ್ಣವಲಯದ ಚಂಡಮಾರುತ ‘ನಾಲ್ಗೆ’ ಅಬ್ಬರಕ್ಕೆ ಸಿಲುಕಿರುವ ಫಿಲಿಪೈನ್ಸ್‌ನಲ್ಲಿ ಜನಜೀವನ ಅಕ್ಷರಶಃ ಅಸ್ತವ್ಯಸ್ಥಗೊಂಡಿದೆ. ಈವರೆಗೆ ಕನಿಷ್ಠ ೭೨ ಮಂದಿ ಮೃತಪಟ್ಟಿದ್ದು, ಘಟನೆ ಹಿನ್ನೆಲೆಯಲ್ಲಿ ಹಲವೆಡೆ ಭೂಕುಸಿತ ಪ್ರಕರಣ ವರದಿಯಾಗುತ್ತಿದೆ.


ಉಷ್ಣವಲಯದ ಚಂಡಮಾರುತಗಳು ಫಿಲಿಪೈನ್ಸ್‌ನಲ್ಲಿ ಸಾಮಾನ್ಯವಾಗಿದ್ದು, ವಾರ್ಷಿಕ ಸುಮಾರು ಸರಾಸರಿಯಲ್ಲಿ ೨೦ ಉಷ್ಣವಲದಯ ಚಂಡಮಾರುತಗಳು ಬೀಸುತ್ತದೆ. ಸದ್ಯ
ಮಗಿಂದಾನಾವೋ ಪ್ರಾಂತ್ಯದಲ್ಲಿ ಹೆಚ್ಚಿನ ಹಾನಿ ಸಂಭವಿಸಿದ್ದು, ಈ ಪ್ರದೇಶವೊಂದರಲ್ಲೇ ೬೭ ಮೃತ ಪ್ರಕರಣಗಳು ವರದಿಯಾಗಿದೆ. ಸುಲ್ತಾನ್ ಕುದರತ್‌ನಲ್ಲಿ ಇಬ್ಬರು ಮೃತಪಟ್ಟರೆ ದಕ್ಷಿಣ ಕೊಟಬಾಟೊದಲ್ಲಿ ಮತ್ತಿಬ್ಬರು ಅಸುನೀಗಿದ್ದಾರೆ. ಉಳಿದ ಸಾವು-ನೋವಿನ ಪ್ರಕರಣಗಳು ಮಧ್ಯ ಫಿಲಿಪೈನ್ಸ್‌ನ ವಿಸಯಾಸ್ ಪ್ರದೇಶದಾದ್ಯಂತ ನಡೆದಿದೆ.

ಮಳೆಯ ಪರಿಣಾಮ ಹರಿಯುತ್ತಿರುವ ಪ್ರವಾಹದಿಂದ ಹಲವೆಡೆ ಭೂಕುಸಿತ ಪ್ರಕರಣಗಳು ವರದಿಯಾಗಿದೆ. ಘಟನೆಯಲ್ಲಿ ೩೩ ಮಂದಿ ಗಾಯಗೊಂಡಿದ್ದು, ಅಲ್ಲದೆ ೧೪ ಮಂದಿ ಕಣ್ಮರೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಸಿದ್ದಾರೆ. ಉಷ್ಣವಲಯದ ಚಂಡಮಾರುತವು ಗಂಟೆಗೆ ಗರಿಷ್ಠ ೯೫ ಕಿಲೋಮೀಟರ್ (೫೯ ಮೈಲುಗಳು) ಗಾಳಿ ಮತ್ತು ೧೬೦ ಕಿಲೋಮೀಟರ್ (೯೯.೪ mಠಿh) ವರೆಗಿನ ಗಾಳಿಯನ್ನು ಹೊಂದಿದ್ದು, ಶನಿವಾರ ಪೂರ್ವ ಕ್ಯಾಟಂಡುವನೆಸ್ ಪ್ರಾಂತ್ಯದಲ್ಲಿ ಭೂಕುಸಿತಕ್ಕೆ ಕಾರಣವಾಗಿದೆ. ಸದ್ಯ ನಾಲ್ಗೆಯ ಪರಿಣಾಮ ಶನಿವಾರ ರಾಜಧಾನಿ ಪ್ರದೇಶ ಮತ್ತು ಹತ್ತಿರದ ಪ್ರಾಂತ್ಯಗಳ ಮೇಲೆ ಭಾರೀ ಮತ್ತು ಕೆಲವೊಮ್ಮೆ ಧಾರಾಕಾರ ಮಳೆಯನ್ನು ಸುರಿಸಲಿದೆ ಎಂದು ಅಂದಾಜಿಸಲಾಗಿದೆ. ಲುಜಾನ್ ದ್ವೀಪವನ್ನು ಹಾದು ದಕ್ಷಿಣ ಚೀನಾ ಸಮುದ್ರಕ್ಕೆ ಹೋಗುತ್ತಿದೆ ಎಂದು ರಾಜ್ಯ ಹವಾಮಾನ ಸಂಸ್ಥೆ ತನ್ನ ಇತ್ತೀಚಿನ ಬುಲೆಟಿನ್‌ನಲ್ಲಿ ತಿಳಿಸಿದೆ.