ನಾಲ್ಕೇ ಎಕರೆಯಲ್ಲಿ 600 ಕ್ವಿಂಟಲ್ ಹಸಿ ಶುಂಠಿ ಬೆಳೆದ ಮಾದರಿ ರಾಜಕಾರಣಿ ಕೇಶವರಾವ ತಳಘಟಕರ್

ವಿಶೇಷ ವರದಿ: ಶಿವಕುಮಾರ ಸ್ವಾಮಿ

ಬೀದರ:ನ.17: ಮೂಲತಃ ರಾಜಕೀಯದಲ್ಲಿ ಗುರ್ತಿಸಿಕೊಂಡು ಒಂದು ಕಾಲದಲ್ಲಿ ಜಿಲ್ಲಾ ಪಂಚಾಯತಿಯ ಉಪಾಧ್ಯಕ್ಷರಾಗಿದ್ದ ಹುಮನಾಬಾದ್ ತಾಲೂಕಿನ ಹಳ್ಳಿಖೇಡ(ಬಿ) ಗ್ರಾಮದವರಾದ ಕೇಶವರಾವ್ ಮಹಾರಾಜ ತಳಘಟಕರ್ ಅವರು ಈಗ ಬಸವತೀರ್ಥ ವಿದ್ಯಾಪೀಠ ಕೇಂದ್ರ ಸಮಿತಿಯ ಕಾರ್ಯಾಧ್ಯಕ್ಷರಾಗಿ ಸೇವೆ ಗೈಯ್ಯುವ ಮೂಲಕ ಓರ್ವ ಶಿಕ್ಷಣ ಪ್ರೇಮಿಯಾಗಿ ಹೊರಹೊಮ್ಮಿದ್ದಾರೆ. ಅಧ್ಯಾತ್ಮ ಜೀವಿಯಾಗಿ ಹಲವಾರು ಸಾಧು, ಸಂತರ, ಮಠಾಧೀಶರ, ಚಿಂತಕರ ಹಾಗೂ ಪ್ರಗತಿಪರರ ಸದಾ ಸಮಾಗಮದಲ್ಲಿರುವ ಇವರು ತನ್ನ 21 ಎಕರೆ ಜಮಿನಿನ ಪೈಕಿ ನಾಲ್ಕು ಎಕರೆ ಹೊಲದಲ್ಲಿ ಸುಮಾರು 600 ಕ್ವಿಂಟಲ್ ಹಸಿ ಶುಂಠಿ ಬೆಳೆದು ಎಲ್ಲರ ಹುಬ್ಬೇರಿಸುವಂತೆ ಮಾಡಿದ್ದಾರೆ.

ತಾನು ಯಾವ ಹುದ್ದೆಯಲ್ಲಿ ಗುರ್ತಿಸಿಕೊಂಡರೂ ಓರ್ವ ಮಾದರಿ ಕೃಷಿಕನಾಗಿ ಎಂತಹ ಸಾಧನೆ ಮಾಡಬಹುದೆನ್ನುವುದಕ್ಕೆ ಕೇಶವರಾವ್ ಮಹಾರಾಜರೇ ನೇರ ಸಾಕ್ಷಿ.

ಇತಿಹಾಸದ ಪುಟಗಳು ತಿರುವಿ ನೋಡಿದಾಗ ರಾಜಕಾರಣಿಗಳು ಬರೀ ನೊಗಳೆ ಭಾಷಣ ಬೀಗುವುದು ಮಾತ್ರ ಕಂಡಿದ್ದೇವೆ. ಆದರೆ ರಾಜಕಾರಣಿಗಳಾಗಿದ್ದುಕೊಂಡು ಮಾದರಿ ಕೃಷಿ ಮಾಡಬಹುದೆಂಬುದನ್ನು ನಾಡಿನ ರಾಜಕಾರಣಿಗಳಿಗೆ ತೋರಿಸಿಕೊಟ್ಟು ಮಣ್ಣಿನ ಮಕ್ಕಳು ಎಂದು ಬರೀ ಪೋಸ್ ಕೋಡುವವರಿಗೆ ಇವರೇ ಸರಿಯಾದ ಮಾರ್ಗದರ್ಶಕರು ಎಂದು ಹೇಳಬಹುದು.

ಹಳ್ಳಿಖೇಡ(ಬಿ) ಗ್ರಾಮದಿಂದ ಎರಡು ಕಿ.ಮೀಟರ್ ಅಂತರದಲ್ಲಿರುವ ಸೀಮಿನಾಗಣ್ಣನ ದೇವಸ್ಥಾನದ ಬಳಿ ಇರುವ ತನ್ನ 21 ಎಕರೆ ಸ್ವಂತ ಜಮಿನಿನಲ್ಲಿ ವಿವಿಧ ತರಕಾರಿ ಬೆಳೆಗಳು, ಹಣ್ಣು ಹಂಪಲುಗಳು ಬೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಇತ್ತೀಚೀನ ರೇನ್ ಗನ್ ಎಂಬ ಆಧುನಿಕ ನೀರಾವರಿ ಪದ್ದತಿ ಬಳಿಸಿಕೊಂಡು ನಾಲ್ಕು ಎಕರೆಯಲ್ಲಿ ಉತ್ತಮ ಗುಣಮಟ್ಟದ ಹಸಿ ಶುಂಠಿ, ಎರಡು ಎಕರೆಯಲ್ಲಿ ಟೊಮಾಟೊ ಬೆಳೆದು ಸುಮಾರು 60 ರಿಂದ 70 ಕ್ವಿಂಟಾಲ್ ಇಳುವರಿ ಮಾಡುವ ಗುರಿ ಹೊಂದಿದ್ದಾರೆ. ಹಾಗೇ ಎರಡು ಎಕರೆಯಲ್ಲಿ ಬೆಳ್ಳುಳ್ಳಿ ನಾಟಿ ಮಾಡಿದ್ದು ಬರುವ ಫೆಬ್ರವರಿ-2021 ರಲ್ಲಿ ಸುಮಾರು 50 ಕ್ವಿಂಟಾಲ್ ಬೆಳ್ಳುಳ್ಳಿ ತೆಗೆಯುವ ಇರಾದೆ ಇವರದದ್ದಾಗಿದೆ.

ಹಾಗೇ ನಾಲ್ಕು ಎಕರೆಯಲ್ಲಿ ಕಲ್ಲಂಗಡಿ ಬೆಳೆಸಲು ತಯ್ಯಾರಿ ಆರಂಭಿಸಿರುವ ಇವರು, ಇನ್ನು ಒಂದು ವರೆ ಎಕರೆಯಲ್ಲಿ ಕೈ ತೋಟ ನಿರ್ಮಾಣಕ್ಕೆ ಬಳಿಸುವ ಹುಲ್ಲನ್ನು ಹಚ್ಚಿ ವೈವಿಧ್ಯಮಯ ಕೃಷಿ ಪದ್ದತಿ ಅನುಸರಿಸಿದ್ದಾರೆ.

ನಿನ್ನೆಯಷ್ಟೇ ನಮ್ಮ ಜಿಲ್ಲಾ ಪ್ರತಿನಿಧಿ ಶಿವಕುಮಾರ ಸ್ವಾಮಿ ಮಹಾರಾಜರ ಕೌತಕ ಕಣ್ತುಂಬಿಕೊಳ್ಳಲು ಹೋದಾಗ ಅವರೊಬ್ಬ ಕೇವಲ ರಾಜಕಾರಣಿಯಲ್ಲ, ಪ್ರಗತಿಪರ ರೈತರೆಂಬ ಸತ್ಯ ಹೊರಬಿದ್ದಿದೆ. ಮಹಾರಾಜರ ಅನುಪಮ ಸೇವೆಯನ್ನು ಗುರುತಿಸಿ ಸಂಜೆವಾಣಿ ದಿನಪತ್ರಿಕೆಯು ದೀಪಾವಳಿ ವಿಶೇಷ ಸಂಚಿಕೆ ಜೊತೆಗೆ ವಿಘ್ನ ನಿವಾರಕ ಗನೇಶ ಮೂರ್ತಿ ನೀಡಿ ಅವರ ಹಿಡಿದೆ ಎಲ್ಲ ಕಾರ್ಯUಳು ಸಫಲವಾಗಲಿ ಎಂದು ಹಾರೈಸಿತು. ಈ ವೇಳೆ ಬಸವತೀರ್ಥ ವಿದ್ಯಾಪೀಠ ಪ್ರಾಥಮಿಕ ಶಾಲೆಯ ಮುಖ್ಯಗುರು ಗುಂಡಯ್ಯ ತೀರ್ಥಾ, ಸ್ಥಳಿಯರಾದ ಬಂಡೆಪ್ಪ ಸಾಲಿ, ಗೌರೀಶ ತೀರ್ಥಾ, ಮಹಾರಾಜರ ಪುತ್ರ ಸಂದೀಪ ತಳಘಟಕರ್, ಮೊಮ್ಮಗಳು ಜೊತೆಗಿದ್ದರು.

ಹನಿ, ನೀರಾವರಿ, ರೇನ್ ಪಂಪ್ ಮಾದರಿ ಕೃಷಿಯನ್ನೇ ಬಂಡವಾಳವಾಗಿಸಿಕೊಂಡು ಕಬ್ಬು ಸೇರಿದಂತೆ ಇತರೆ ದೈನಂದಿನ ಬೆಳೆಗಳನ್ನು ಸಹ ಬೆಳೆಯುತ್ತಿರುವ ಇವರ ಪ್ರಾಮಾಣಿಕ ಪ್ರಯತ್ನಕ್ಕೆ ಅವರ ಆಳು ಈರಪ್ಪ ಕೈ ಜೋಡಿಸಿದ್ದಾನೆ. ಅವರ ಮೂರು ಜನ ಗಂಡು ಮಕ್ಕಳಲ್ಲಿ ಹಿರಿಯ ಮಗ ರತ್ನದೀಪ ಓರ್ವ ಸಾಫ್ಟವೇರ್ ತಂತ್ರಜ್ಞರಾಗಿದ್ದು ರಾಜ್ಯ ರಾಜ್ಯಧಾನಿ ಬೆಂಗಳೂರಿನಲ್ಲಿ ಸೇವೆ ಸಲ್ಲಿಸುತ್ತಿದ್ದರೆ ಮಿಕ್ಕ ಇಬ್ಬರು ಮಕ್ಕಳಾದ ಸಂದೀಪ ಹಾಗೂ ನೀಲದೀಪ ಇಬ್ಬರು ತಂದೆಗೆ ಸಾಥ ನೀಡುವ ಮೂಲಕ ಮಾದರಿ ಕೃಷಿ ಕುಟುಂಬಕ್ಕೆ ಕೈ ಜೋಡಿಸಿದ್ದಾರೆ.

ರಾಜಕೀಯದಲ್ಲಿದ್ದರೂ ಎಲ್ಲ ಕ್ಷೇತ್ರಗಳನ್ನು ಚೆನ್ನಾಗಿ ಅರಿತ ಇವರು, ಪ್ರಗತಿಪರ ಹೋರಾಟಗಾರರು ಹೌದು. ರಾಜಕೀಯವಾಗಿ ತಾನೋರ್ವ ಕಾಂಗ್ರೆಸ್ ಮುಖಂಡನಾಗಿದ್ದರೂ ಇತರೆ ಪಕ್ಷಗಳ ಮುಖಂಡರೊಂದಿಗೂ ಉತ್ತಮ ಬಾಂಧವ್ಯ ಇರಿಸುವ ಮೂಲಕ ಅಪರೂಪದ ವ್ಯಕ್ತಿತ್ವ ಉಳ್ಳುವರಾಗಿದ್ದಾರೆ. ಎಲ್ಲರೊಂದಿಗೆ ಪ್ರೀತಿ ವಿಶ್ವಾಸದಿಂದ ಗುರುತಿಸಿರುವ ಇವರು ಬಸವತೀರ್ಥ ವಿದ್ಯಾಪೀಠ ಎತ್ತರಕ್ಕೆ ಬೆಳೆಯಲು ಇವರೂ ಕಾರಣಿಕರ್ತರಾಗಿದ್ದಾರೆ. 70 ವರ್ಷ ದಾಟಿದರೂ ಯುವಕರಂತೆ ವಿದ್ಯಾಪೀಠದ ಎಲ್ಲ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ಸ್ಪೂರ್ತಿ ತಂಬುತ್ತಾರೆ. ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದರೂ ಎಲ್ಲ ತಳಮಟ್ಟದ ಸಮುದಾಯಗಳೊಂದಿಗೆ ಉತ್ತಮ ಬಾಂಧವ್ಯ ಇರಿಸಿಕೊಂಡಿರುವ ಇವರ ಇಂಥಹ ಮಾದರಿ ಬದುಕು ಜಿಲ್ಲೆಯ ರಾಜಕಾರಣಿಗಳಿಗೆ ಮಾದರಿಯಾಗಲಿ, ಇತ್ತಿಚೀನ ವಯಕ್ತಿಕ ಆರೋಪ, ಪ್ರತ್ಯಾರೋಪದಲ್ಲಿ ತೊಡಗಿರುವ ರಾಜಕಾರಣಿಗಳಂತೂ ಇತ್ತ ಚಿತ್ತ ಹರಿಸಿ ಕೇಶವರಾವ ಮಹಾರಾಜರ ಬದುಕು ರೂಢಿಸಿಕೊಳ್ಳಬೇಕು, ನೊಂದ ಅನ್ನದಾತರ ಸೇವೆ ಮಾಡುವ ಪ್ರಾಮಾಣಿಕ ಪ್ರಯತ್ನ ಈ ಜಿಲ್ಲೆಯ ರಾಜಕಾರಣಿಗಳು ಮಾಡಬೇಕೆನ್ನುವುದು ಸಾರ್ವಜನಿಕರ ಅಭಿಪ್ರಾಯ.