ನಾಲ್ಕು ವಿಶೇಷ ಪೀಠ, ಸುಪ್ರೀಂ ನಿರ್ಧಾರ

ನವದೆಹಲಿ, ನ. ೨೩- ಬಾಕಿ ಇರುವ ಪ್ರಕರಣಗಳ ಇತ್ಯರ್ಥಕ್ಕೆ ಒತ್ತು ನೀಡಿರುವ ಸುಪ್ರೀಂಕೋರ್ಟ್, ಕ್ರಿಮಿನಲ್ ಪ್ರಕರಣ, ತೆರಿಗೆ, ಭೂ ಸ್ವಾಧೀನ ಸಮಸ್ಯೆ, ಮೋಟಾರ್ ವಾಹನ ಅಪಘಾತ ಸೇರಿದಂತೆ ವಿವಿಧ ವಿಷಯಗಳ ವಿಚಾರಣೆಗೆ ನಾಲ್ಕು ವಿಶೇಷ ಪೀಠ ರಚಿಸಲು ನಿರ್ಧರಿಸಿದೆ.ಕ್ರಿಮಿನಲ್ ವಿಷಯಗಳು, ನೇರ ಮತ್ತು ಪರೋಕ್ಷ ತೆರಿಗೆ ವಿಷಯಗಳು, ಭೂ ಸ್ವಾಧೀನ ವಿಷಯಗಳು ಮತ್ತು ಬಾಕಿ ಇರುವ ಮೋಟಾರು ಅಪಘಾತಗಳ ಹಕ್ಕುಗಳ ನ್ಯಾಯಮಂಡಳಿಗೆ ಸಂಬಂಧಿಸಿದ ಪ್ರಕರಣಗಳು ಮುಂದಿನವಾರದಿಂದ ವಿಶೇಷ ಪೀಠದ ಮುಂದೆ ವಿಚಾರಣೆಗೆ ಬರಲಿವೆ.ಭೂಸ್ವಾಧೀನಕ್ಕೆ ಸಂಬಂಧಿಸಿದಂತೆ ತುರ್ತು ವಿಚಾರಣೆಗಾಗಿ ವಕೀಲರೊಬ್ಬರು ಈ ವಿಷಯ ಪ್ರಸ್ತಾಪಿಸಿದಾಗ ೪ ವಿಶೇಷ ಪೀಟ ರಚಿಸುವ ತೀರ್ಮಾನವನ್ನು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್ ಈ ಘೋಷಿಸಿದರು.ಮುಂದಿನ ವಾರದಿಂದ ಕ್ರಿಮಿನಲ್ ವಿಷಯಗಳು, ನೇರ ಮತ್ತು ಪರೋಕ್ಷ ತೆರಿಗೆ ವಿಷಯಗಳು, ಭೂಸ್ವಾಧೀನ ವಿಷಯಗಳು ಮತ್ತು ಮೋಟಾರು ಅಪಘಾತಗಳ ಹಕ್ಕುಗಳ ನ್ಯಾಯಮಂಡಳಿಯ ವಿಚಾರಣೆ ನಡೆಸಲಿದೆ.ಇದರಿಂದ ಬಾಕಿ ಇರುವ ಪ್ರಕರಣಗಳ ಇತ್ಯರ್ಥಕ್ಕೆ ಸಹಕಾರಿಯಾಗಲಿದೆ ಎಂದು ಮುಖ್ಯನ್ಯಾಯಮೂರ್ತಿಗಳು ಹೇಳಿದರು.ಭೂಸ್ವಾಧೀನಕ್ಕೆ ಸಂಬಂಧಿಸಿದ ವಿಶೇಷ ಪೀಠದ ಮುಂದೆ ಈ ವಿಷಯವನ್ನು ಪ್ರಸ್ತಾಪಿಸಲು ಮುಖ್ಯನ್ಯಾಯಮೂರ್ತಿಗಳು ಅರ್ಜಿದಾರರ ಪರ ವಕೀಲರಿಗೆ ಸೂಚಿಸಿದ್ದಾರೆ. ಭೂಸ್ವಾಧೀನ ಸಮಸ್ಯೆಗಳ ಕುರಿತು ವ್ಯವಹರಿಸುವ ಪೀಠವನ್ನು ನ್ಯಾಯಮೂರ್ತಿ ಸೂರ್ಯಕಾಂತ್ ಮುನ್ನೆಡಸಲಿದ್ದಾರೆ ಎಂದು ಹೇಳಿದ್ಸಾರೆ.ಕಳೆದ ವಾರ ಮುಖ್ಯನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್ ಅವರಿದ್ದ ಪೀಠ ದೇಶದಲ್ಲಿ ಬಾಕಿ ಇರುವ ಪ್ರಕರಣಗಳ ಇತ್ಯರ್ಥಕ್ಕೆ ಆದ್ಯತೆ ನೀಡಲಾಗುವುದು ಇದಕ್ಕಾಗಿ ದಿನದ ವಿಚಾರಣೆಯ ಅರ್ಜಿಗಳ ಜೊತೆಗೆ ೩ ವಿಷಯಗಳ ವಿಲೇವಾರಿ ಮಾಡಲು ಉನ್ನತ ನ್ಯಾಯಾಲಯದ ಪ್ರತಿ ಪೀಠವು ಪ್ರತಿದಿನ ೧೦ ವರ್ಗಾವಣೆ ಅರ್ಜಿಗಳು ಮತ್ತು ೧೦ ಜಾಮೀನು ವಿಷಯಗಳನ್ನು ತೆಗೆದುಕೊಳ್ಳುವಂತೆ ಸೂಚಿಸಿದ್ದರು

ಬಾಕಿ ಇರುವ ಪ್ರಕರಣಗಳ ಇತ್ಯರ್ಥಕ್ಕೆ ಸುಪ್ರೀಂಕೋರ್ಟ್ ಒತ್ತು.

ಭೂಸ್ವಾಧೀನ ಪ್ರಕರಣ ,ಮೋಟಾರುವಾಹನ ಸಮಸ್ಯೆ ಇತ್ಯರ್ಥ್ಯಕ್ಕೆ ನಾಲ್ಕು ವಿಶೇಷ ಪೀಠ ರಚನೆ

ಮುಂದಿನವಾರದಿಂದ ನಾಲ್ಕು ಪೀಠ ಕಾರ್ಯನಿರ್ವಹಣೆ

ಮುಖ್ಯನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್ ಈ ವಿಷಯ ಪ್ರಕಟ

ಪ್ರಕಣಗಳ ಬಾಕಿ ಇತ್ಯರ್ಥಕ್ಕೆ ಸಹಕಾರಿ

ಪ್ರತಿದಿನದ ನಿಯೋಜಿತ ಅರ್ಜಿಗಳ ಜೊತೆಗೆ ಹೆಚ್ಚುವರಿ ಅರ್ಜಿ ವಿಲೇವಾರಿಗೆ ಸೂಚನೆ

ನಾಲ್ಕು ವಿಶೇಷ ಪೀಠದಿಂದ ಸಂಬಂಧಿಸಿದ ಪ್ರಕರಣಗಳ ವಿಚಾರಣೆ