ನಾಲ್ಕು ವರ್ಷದ ಮಗುವಿನ ಶವ ಪತ್ತೆ

ಕಲಬುರಗಿ,ಜೂ.21-ನಗರದ ನಾಗನಳ್ಳಿ ರಸ್ತೆಯ ಅಂಡರ್ ಬ್ರಿಜ್ ಹತ್ತಿರ ನಾಲ್ಕು ವರ್ಷದ ಮಗುವಿನ ಶವವೊಂದು ಮಂಗಳವಾರ ಪತ್ತೆಯಾಗಿದೆ.
ನೀಲಿ ಹಾಗೂ ಕೆಂಪು ಬಣ್ಣದ ಬಟ್ಟೆಯಲ್ಲಿ ಸುತ್ತಿ ಮಗುವಿನ ಶವವನ್ನು ಎಸೆಯಲಾಗಿದ್ದು, ಮಗುವಿನ ಶವವನ್ನು ನೋಡಿದ ಕೆಲವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಟೇಷನ್ ಬಜಾರ್ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಮಗುವಿನ ಶವವನ್ನು ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ಕಳುಹಿಸಿದ್ದಾರೆ.
ಸ್ಥಳಕ್ಕೆ ದಕ್ಷಿಣ ಎಸಿಪಿ ಭೂತೇಗೌಡ, ಸ್ಟೇಷನ್ ಬಜಾರ್ ಪಿಐ ಸೋಮಶೇಖರ ಕಿರದಳ್ಳಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಭರತೇಶ ಶೀಲವಂತ, ಚೈಲ್ಡ್‍ಲೈನ್‍ನ ಮಲ್ಲಯ್ಯ, ಪ್ರಿಯಾಂಕ, ಮುಮಾರ ರಾಟೋಡ್, ಅಬ್ರಾಹಾಂ ಸೇರಿ ಪೊಲೀಸ್ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.