ನಾಲ್ಕು ದಿನಗಳಿಂದ‌ ಸಿಡಿಪಿಒ ನಾಪತ್ತೆ, ಸಿಬ್ಬಂದಿಗಳ ಆತಂಕ

ಸಿಂಧನೂರು.ನ. 6- ನಾಲ್ಕು ದಿನಗಳಿಂದ ಕಛೇರಿಗೆ ಬಾರದೆ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿರುವದನ್ನು ನೋಡಿ ಸಿಡಿಪಿಒ ನಾಪತ್ತೆ ಆದ ಬಗ್ಗೆ ಕಛೇರಿಯ ಸಿಬ್ಬಂದಿಗಳಿಗೆ ಭಯ ಕಾಡ ತೊಡಗಿದೆ.
ನಗರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸುದೀಪ ಕುಮಾರ 4 ದಿನಗಳಿಂದ ಕಛೇರಿಗೆ ಬಂದಿಲ್ಲ. ರಜೆಯೂ ಸಹ ಹಾಕಿಲ್ಲ ಎಲ್ಲಿ ಹೋಗಿದ್ದಾರೆಂದು ಕೇಳಲು ಅವರ ದೂರವಾಣಿಗೆ ಕರೆ ಮಾಡಿದರೆ ಮೊಬೈಲ್ ಫೋನ್ ಸ್ವಿಚ್ ಆಫ್‌ ಆಗಿರುವುದರಿಂದ ಅಧಿಕಾರಿಗಳು ಭಯ ಬೀತರಾಗಿ ನೀವಾದರೂ ನಮ್ಮ ಸಿಡಿಪಿಒ ಎಲ್ಲಿದ್ದಾರೆ ನೋಡಿದ್ದಿರಾ ಹುಡುಕಿ ಕೊಡಿ ಎಂದು ಹೇಸರನ್ನು ಹೇಳದ ಸಿಬ್ಬಂದಿಗಳು ಪತ್ರಿಕೆಗೆ ತಿಳಿಸಿದರು.
ಸ್ತ್ರೀ ಶಕ್ತಿ ಮಹಿಳಾ ಒಕ್ಕೂಟದ ಅದ್ಯಕ್ಷೆ ಶ್ರೀದೇವಿ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಯೋಗಿತಾಬಾಯಿ ಮೇಲೆ ಹಲ್ಲೆ ಮಾಡಿದಾಗ ಸಿಡಿಪಿಒ ಸುದೀಪ ಕುಮಾರ ಘಟನೆಗೆ ಪ್ರತ್ಯಕ್ಷ ಸಾಕ್ಷಿಯಾಗಿದ್ದು ,ಘಟನೆ ಬಗ್ಗೆ ಪತ್ರಿಕೆಯಲ್ಲಿ ವರದಿ‌ ಬಂದಿದ್ದು ಶಾಸಕ ನಾಡಗೌಡ ರು ಹಾಗೂ ವಿವಿಧ ‌ಮುಖಂಡರು ಖಂಡಿಸಿದ್ದು ಸರ್ಕಾರಿ ನೌಕರರು ಹಾಗೂ ವಿವಿಧ ಸಂಘಟನೆಗಳ‌ ಮುಖಂಡರುಗಳು ಘಟನೆ ಬಗ್ಗೆ ಮಾಹಿತಿ ಪಡೆಯಲು ‌ಸಿಡಿಪಿಒ ಕಛೇರಿಗೆ ಹೋದರೆ ಸುದೀಪಕುಮಾರ ಕಛೇರಿಯಲ್ಲಿ ಇಲ್ಲ.ಅವರ ಮೊಬೈಲ್ ಸ್ವಿಚ್ ಆಫ್ ಆಗಿದ್ದು ನೋಡಿದರೆ ಶ್ರೀದೇವಿ ಶ್ರೀನಿವಾಸ ಭಯಕ್ಕೆ ಹೆದರಿ ಸಿಡಿಪಿಒ ಸುದೀಪ ಕುಮಾರ ನಾಪತ್ತೆಯಾಗಿದ್ದಾರೆಂದು ಅನುಮಾನ ಬರುವದು ಸಹಜ.
4 ದಿನಗಳಿಂದ ಕಛೇರಿ ಕೆಲಸ ಕಾರ್ಯ ಗಳಿಗಾಗಿ ,ಮಾಹಿತಿ ಗಾಗಿ, ಸಿಬ್ಬಂದಿಗಳು ಅಧಿಕಾರಿ ಸುದೀಪ ಕುಮಾರ ಗಾಗಿ ಕಾಯುತ್ತಿದ್ದಾರೆ.ಆದರೆ ಸುದೀಪ ಕುಮಾರ ಮಾತ್ರ ಕಛೇರಿಗೆ ಬಾರದೆ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ನಾಪತ್ತೆಯಾಗಿರುವದು ಮಹಿಳಾ ಮತ್ತು ‌ಮಕ್ಕಳ‌ ಕಲ್ಯಾಣ ಇಲಾಖೆಯ ಸಹಾಯಕ ಉಪ ನಿರ್ದೇಶಕರಾದ ವೀರನಗೌಡರಿಗೆ ಗೊತ್ತಾಗದೆ ಇರುವದು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.
ಪ್ರತಿದಿನ ಜಿಲ್ಲೆಯ ಎಲ್ಲಾ ತಾಲೂಕಗಳ ಸಿಡಿಪಿಒ ಗಳು ಅಂದಿನ ಕಛೇರಿಯ ಆಗು ಹೋಗುಗಳ ಬಗ್ಗೆ ಜಿಲ್ಲಾ ಸಹಾಯಕ‌ ಉಪ ನಿರ್ದೇಶಕರಾದ ವೀರನಗೌಡರು ಮಾಹಿತಿ ಪಡೆದುಕೊಳ್ಳುತ್ತಾರೆ, ಮಾಹಿತಿ ನೀಡದ ಅಧಿಕಾರಿ ವಿರುದ್ಧ ನೋಟಿಸ್ ನೀಡಿ ಕ್ರಮ ಜರುಗಿಸುತ್ತಾರೆ.ನಾಲ್ಕು ದಿನಗಳಿಂದ ‌ಕಛೇರಿಗೆ ಬಾರದೆ ,ರಜೆಯನ್ನು ಹಾಕದೆ ,ಮೇಲಾಧಿಕಾರಿಗಳ ಗಮನಕ್ಕೆ ತರದೆ , ಅನಧಿಕೃತವಾಗಿ ಸಿಡಿಪಿಒ ಗೈರಾಜುರಾಗಿದ್ದು ಮತ್ತು ಅವರ ಮೊಬೈಲ್ ಸ್ವಿಚ್ ಆಫ್ ಆಗಿದ್ದು ಇದರಿಂದ ಕಛೇರಿಯ ಸಿಬ್ಬಂದಿಗಳು ಆತಂಕಗೊಂಡಿದ್ದು ಸಾರ್ವಜನಿಕರು ಕೆಲಸ ಕಾರ್ಯಗಳಿಗಾಗಿ ಕಛೇರಿಗೆ ಅಲೆದಾಡಿ ಅಧಿಕಾರಿ ಇಲ್ಲದ ಕಾರಣ ಬೇಸರದಿಂದ ಮರಳಿ ಮನೆಗೆ ಹೋಗುತ್ತಿದ್ದಾರೆ.