ನಾಲ್ಕು ದಿನಕೊಮ್ಮೆ ನೀರು ದೀಪಾವಳಿ ಕೊಡುಗೆ -ಪಾಟೀಲ್

ಸಿಂಧನೂರು.ನ.08- ನಗರದಲ್ಲಿ ಈ ಮುಂಚೆ 8 ದಿನಕೊಮ್ಮೆ ನೀರು ಬಿಡುತ್ತಿದ್ದು 8 ದಿನ ಬದಲು 4 ದಿನಕೊಮ್ಮೆ ನೀರು ಬಿಡುವ ಮೂಲಕ ನಗರದ ಜನತೆಗೆ ನೂತನ ನಗರಸಭೆ ಆಡಳಿತ ಮಂಡಳಿ ದೀಪಾವಳಿ ಕೊಡುಗೆ ನೀಡಿದೆ ಎಂದು ನೂತನ ನಗರ ಸಭೆ ಅಧ್ಯಕ್ಷರಾದ ಮಲ್ಲಿಕಾರ್ಜುನ ಪಾಟೀಲ್ ಪತ್ರಿಕೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಮುಂಚೆ 8 ದಿನಕೊಮ್ಮೆ ನೀರು ಬಿಡುವದರಿಂದ ಜನರಿಗೆ ತುಂಬ ನೀರಿನ ಸಮಸ್ಯೆ ಯಾಗಿದ್ದು ಇದನ್ನು ಅರಿತುಕೊಂಡು ಮಾಜಿ ಶಾಸಕ ಹಂಪನಗೌಡ ಬಾದರ್ಲಿಯವರ ಸಲಹೆ ಮೇರೆಗೆ ನಗರಸಭೆ ಆಡಳಿತ ಮಂಡಳಿ ಸಭೆ ಕರೆದು ಚರ್ಚಿಸಿ 8 ದಿನ ಬದಲು 4 ದಿನಕೊಮ್ಮೆ ನೀರು ಬಿಡಲು ತೀರ್ಮಾನಿಸಲಾಗಿದೆ ಎಂದರು.
ನೂತನ ನಗರಸಭೆ ಆಡಳಿತ ಅಧಿಕಾರಕ್ಕೆ ಬಂದ ಮೇಲೆ ಮೊದಲ ಆದ್ಯತೆಯಂತೆ 24/7 ಕುಡಿಯುವ ನೀರಿನ ಯೋಜನೆ ಬಗ್ಗೆ ಮಾಜಿ ಶಾಸಕ ಹಂಪನಗೌಡ ಬಾದರ್ಲಿ ಅವರೊಂದಿಗೆ ಚರ್ಚಿಸಿ ತುರ್ವಿಹಾಳ ಕೆರೆಗೆ ಭೇಟಿ ನೀಡಿ ನೀರಿನ ಲಭ್ಯತೆ ಬಗ್ಗೆ ತಿಳಿದುಕೊಂಡು ಹಂಪನಗೌಡ ಬಾದರ್ಲಿ ಯವರ ಸಲಹೆ-ಸೂಚನೆ ಮೇರೆಗೆ ಕಾಂಗ್ರೆಸ್ ಪಕ್ಷದ ಎಲ್ಲಾ ನಗರಸಭೆ ಸದಸ್ಯರು ಹಾಗು ಉಳಿದ 11 ನಗರಸಭೆ ಸದಸ್ಯರ ಜೊತೆಗೆ ನಾಮ ನಿರ್ದೇಶನಗೊಂಡ ಸದಸ್ಯರ ಸಲೆಹೆಗಳನ್ನು ಪಡೆದು 13-11-2020 ರಿಂದ ಪ್ರತಿ 4 ದಿನಕೊಮ್ಮೆ ನೀರು ಬಿಡಲು ನೂತನ ನಗರಸಭೆ ಆಡಳಿತ ಮಂಡಳಿ ತೀರ್ಮಾನಿಸಿ ನಗರದ ಜನೆತೆಗೆ ದೀಪಾವಳಿಯ ಸಿಹಿ ಸುದ್ದಿ ನೀಡಿದೆ ಎಂದು ನಗರಸಭೆ ಅಧ್ಯಕ್ಷರಾದ ಮಲ್ಲಿಕಾರ್ಜುನ ಪಾಟೀಲ್ ತಿಳಿಸಿದ್ದಾರೆ.