ನಾಲ್ಕು ತಿಂಗಳ ಹಿಂದೆ ನಡೆದ ಯುವಕನ ಕೊಲೆ ಪ್ರಕರಣ ಬಯಲು: ಆರೋಪಿಗಳ ಬಂಧನ

ಆಳಂದ:ಎ.16: ನಾಲ್ಕು ತಿಂಗಳ ಹಿಂದೆ ಮನೆಯವರಿಗೆ ಗೊತ್ತಿಲ್ಲದೆ ಯುವಕನೋರ್ವನಿಗೆ ಕರೆದೊಯ್ಯದ ಆತನ ಓರ್ವ ಪ್ರಾಪ್ತ ಹಾಗೂ ಮೂವರು ಅಪ್ರಾಪ್ತ ಸೇರಿ ನಾಲ್ವರು ಗೆಳೆಯರು ಸಿನಿಮಿಯ ರೀತಿಯಲ್ಲಿ ಪಟ್ಟಣದಲ್ಲಿ ಕೊಲೆ ಮಾಡಿ ಶವಸುಟ್ಟು ಹಾಕಿದ ಘಟನೆ ಸ್ಥಳೀಯ ಪೊಲೀಸರು ಇಂದು ಬಯಲು ಮಾಡಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಪಟ್ಟಣದ ಹನುಮಾನ ಬಡಾವಣೆಯ ಹತ್ತಿರದ ನೌಕಾಡ ಗಲ್ಲಿಯ ಕಪ್ಪರಬಾಡಿ ಬಡಾವಣೆಯ ನಿವಾಸಿ ಇಸ್ಲಾಯಿಲ ತಂದೆ ನಬಿಸಾಬ ಖಂಡುವಾಲೆ (20), ಎಂಬಾತನೇ ಕೊಲೆಗೀಡಾಗಿದ್ದಾನೆ.

ಇದೇ ನೌಕಾಡಗಲ್ಲಿ ಬಡಾವಣೆಯ ಅಲಿಸಾಬ ತಂದೆ ಇಸ್ಮಾಯಿಲಸಾಬ ಚೌಸ್ (19), ಎಂಬಾತನೊಂದಿಗೆ ಮೂವರು ಅಪ್ರಾಪ್ತರು ಒಳಗೊಂಡು ನಾಲ್ವರು ಸೇರಿ ಇಲ್ಲಿನ ಎ.ವಿ.ಪಾಟೀಲ ಡಿಗ್ರಿ ಕಾಲೇಜಿನ ಪ್ರದೇಶದಲ್ಲಿ ರಾತ್ರಿ ಕರೆಯಿಸಿ ಕಲ್ಲು ರಾಡಿನಿಂದ ಹೊಡೆದು ಕೊಲೆ ಮಾಡಿದ್ದಾರೆ ಎನ್ನಲಾಗಿದೆ.

ಈ ಘಟನೆ ನಡೆದಿದ್ದು, ಕಳದ 26 ಡಿಸೆಂಬರ್ 2022ರಂದು ಪಟ್ಟಣದ ಡಿಗ್ರಿ ಕಾಲೇಜು ಪ್ರದೇಶದಲ್ಲಿ ರಾತ್ರಿ ಕರೆದೊಯ್ಯದು ಕೊಲೆ ಮಾಡಿದ್ದು ಅಲ್ಲದೆ ಕೊಲೆಯಾದ ವ್ಯಕ್ತಿಯ ಶವವನ್ನು ಪೆಟ್ರೋಲ ಹಾಕಿ ಆರೋಪಿತರು ಸುಟ್ಟಿದ್ದರಾದರು ಶವ ಅರೆಬರೆ ಸುಟ್ಟಿದ್ದರಿಂದ ನಾಲ್ಕು ದಿನಗಳ ಬಳಿಕ ಮತ್ತೆ (ಡಿ.30ರಂದು) ಯಾರಿಗೂ ಗೊತ್ತಾಗದಂತೆ ಮಾಡಲು ಬೇರೊಂದು ಊರಿನಿಂದ ವಾಹನದಲ್ಲಿ ಕಟ್ಟಿಗೆ ತಂದು ಪೂರ್ಣವಾಗಿ ಶವ ಸುಟ್ಟು ಹಾಕಿ ಹಾಕಿದ್ದಾರೆ ಎನ್ನಲಾಗಿದೆ.

ಬಳಿಕ ಸಂಶÀಯ ಬರದಹಾಗೇ ನೋಡಿಕೊಂಡಿದ್ದ ಆರೋಪಿತರು ನೆರೆ ಹೊರೆಯಲ್ಲೇ ಹಾಯಾಗಿ ಓಡಾಡಿಕೊಂಡಿದ್ದರು.

ಈ ಘಟನೆಗೆ ಹಣದ ವ್ಯವಹಾರವೇ ಕಾರಣವೆಂದು ವಿಚಾರಣೆಯಲ್ಲಿ ಬಂಧಿತರು ಹೇಳಿಕೊಂಡಿದ್ದಾರೆ ಎನ್ನಲಾಗಿದೆ.

ಘಟನೆ ಹಿನ್ನೆಲೆ:

ಡಿ.26ರಂದು ಮನೆಯಿಂದ ಹೊರಹೋಗಿದ್ದ ಮಗ ಎರಡ್ಮೂರು ದಿನವಾದರು ಮರಳಿ ಮನೆಗೆ ಬಂದಿಲ್ಲ ಮಗನನ್ನು ಹುಡುಕಿಕೊಡಿ ಎಂದು ಮೃತನ ತಂದೆ ನಬಿಸಾಬ ಸ್ಥಳೀಯ ಠಾಣೆಗೆ ದೂರು ನೀಡಿ, ಮಗ ಮನೆಗೆ ಬಂದಿಲ್ಲ ಹುಡುಕಿಕೊಡ್ಡಿ ಎಂದು ಮನವಿ ಮಾಡಿಕೊಂಡಿದ್ದರು. ಅಂದು ಮಗ ನಾಪತ್ತೆಯಾಗಿದ್ದ ಬಗ್ಗೆ ಊಹಿಸಲಾಗಿತ್ತಾದರು, ಇಂದು ಪೊಲೀಸರು ಕೊಲೆಯಾದ ಘÀಟನೆ ಬಯಲುಮಾಡಿದಂತೆ ಕುಟುಂಬಸ್ಥರಲ್ಲಿ ಆಕ್ರಂದನ ಮನೆಮಾಡಿತ್ತಲ್ಲದೆ, ಪಟ್ಟಣದ ಸಾರ್ವಜನಿಕ ವಲಯದಲ್ಲಿ ಘಟನೆ ಬೆಚ್ಚಿಬೀಳಿಸುವಂತಾಗಿದೆ.

ಇಷ್ಟುದಿನಗಳ ಕಾಲ ಕೊಲೆ ಆರೋಪಿತರು ನೆರೆ ಹೊರೆಯಲ್ಲೇ ಇದ್ದರು, ಸುಳಿವು ಬಿಟ್ಟಿಕೊಡದೇ ಓಡಾಡಿಕೊಂಡಿದ್ದರು. ಯಾರಿಗೂ ಶಂಕ್ಯ ಬಾರದಂತೆ ಇದ್ದವರು. ಆಗಾಗ ಮೃತನ ಮನೆಗೆ ಬಂದು ಎಲ್ಲಿ ಹೋಗಿದ್ದಾನೆ, ಬಂದಿದ್ದಾನೆಯೇ ಎಂದು ಕೊಲೆಯಾದವನ ತಂದೆ, ತಾಯಿಯನ್ನೇ ಕೇಳುತ್ತಿದ್ದರು ಎನ್ನಲಾಗಿದೆ.

ಈ ಕುರಿತು ಸ್ಥಳೀಯ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ಹಲವುದಿನಗಳಿಂದ ಎಲ್ಲ ಮಗ್ಗಲುಗಳಿಂದ ಶೋಧ ನಡೆಸಿದ್ದರಾದರು ಸುಳಿವು ಸಿಕ್ಕರಲಿಲ್ಲ. ತೀವ್ರ ಚಿಂತಿತನಾಗಿದ್ದ ನಬಿಸಾಬ ಮಗನ ಹುಡುಕಾಟಕ್ಕೆ ಹಲವು ಬಾರಿ ಠಾಣೆಗೆ ಎಡತಾಕಿ ಹಾಕಿದ್ದು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಗಮನಕ್ಕೆ ತಂದಿದ್ದರು. ಎಲ್ಲ ಸಂಬಂಧಿಕÀರಿಗೆ ಮಗನ ನಾಪತ್ತೆಯಾಗಿದ್ದು ಸುಳಿವು ಸಿಕ್ಕರೆ ಹೇಳಿ ಎಂದು ಒಂದೇ ಸವನೆ ಕೊರಗಿ ಓಡಾಡಿದ್ದನ್ನು. ಆದರೆ ಮಗನ ನಾಪತ್ತೆಯಾದ ಸುಳಿವು ಮಾತ್ರ ಸಿಗದೇ ಕಣ್ಣೀರಿನಲ್ಲೇ ದಿನದೊಡುತ್ತಿದ್ದ ಕುಟಂಬಸ್ಥರಿಗೆ ಶುಕ್ರವಾರ ಪೊಲೀಸರ ಕೊನೆಯ ಕಾರ್ಯಾಚರಣೆಯಿಂದ ಕೊಲೆಯಾದ ಘಟನೆ ಕೇಳಿ ರೋಧಿಸಿ ಮಗನ ಕೊಲೆಗಡಕರ ಮೇಲೆ ಹಿಡಿಶಾಪ ಹಾಕಿ ವ್ಯಕ್ತವಾದ ಆಕ್ರೋಶ, ಅಕ್ರಂದನ ಮುಗಿಲು ಮುಟುವಂತ್ತಿತ್ತು. ಶವ ಸುಟ್ಟ ಸ್ಥಳವನ್ನು ಪೊಲೀಸರು ಮಜೂರ ಮಾಡಿದರು.

ಈ ಘಟನೆ ಭೇದಿಸುವಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಇಶಾಪಂತ ಹೆಚ್ಚುವರಿ ಎಸ್‍ಪಿ ಶ್ರೀನಿಧಿ, ಡಿವೈಎಸ್‍ಪಿ ಗೋಪಿ ಆರ್. ಮಾರ್ಗದರ್ಶನದಲ್ಲಿ ಸಿಪಿಐ ಮಹಾದೇವ ಪಂಚಮುಖಿ ನೇತೃತ್ವದಲ್ಲಿ ಪಿಎಸ್‍ಐ ತಿರುಮಲ್ಲೇಶ ಕುಂಬಾರ ಸೇರಿ ಪೊಲೀಸ್ ಸಿಬ್ಬಂದಿಗಳು ಜಾಲ ಬೀಸಿ ಪ್ರಕರಣವನ್ನು ಭೇದಿಸಿ ಆರೋಪಿತ ಅಲಿಸಾಬ ತಂದೆ ಇಸ್ಮಾಯಿಲಸಾಬ ಚೌಸ್ (19), ಎಂಬಾತನಿಗೆ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದು ಅಅಲ್ಲದದೆ, ಇನ್ನೂ ಅಪ್ರಾಪ್ತರಾದ ಮೂವರು ಕಾನೂನಿನ ಸಂಘರ್ಷಕ್ಕೆ ಒಳಗಾದ ಬಾಲಕರನ್ನು ಬಾಲ ನ್ಯಾಯ ಮಂಡಳಿ ವಶಕ್ಕೆ ಒಪ್ಪಿಪಿಸಲಾಗಿದೆ.