ಇಲಕಲ್ಲ:ಅ.13: ತಾಲೂಕಿನ ಹಿರೇ ಓತಗೇರಿ ಗ್ರಾಮದ ಶುದ್ಧ ಕುಡಿಯುವ ನೀರಿನ ಘಟಕ ಆಗಿಂದಾಗೆ ಕೈ ಕೊಡುತ್ತಾ ಬರುತ್ತದೆ. ಇದರಿಂದ ಗ್ರಾಮದ ಜನರು ಮಾತ್ರ ನೀರಿಗಾಗಿ ಪರಿತಪಿಸುವ ಸ್ಥಿತಿ ಬಂದಿದೆ.
ಕಳೆದ ನಾಲ್ಕು ದಿನಗಳಿಂದ ಶುದ್ಧ ಕುಡಿಯುವ ನೀರಿನ ಘಟಕ ಬಂದಾಗಿದೆ. ಇಲ್ಲಿಯವರೆಗೂ ಅದನ್ನು ರಿಪೇರಿ ಮಾಡುವ ಗೋಜಿಗೆ ಯಾರು ಹೋಗಿಲ್ಲ. ಹೀಗಾಗಿ ಸಾರ್ವಜನಿಕರು ಕುಡಿಯುವ ನೀರಿಗಾಗಿ ದೂರದ ಇಳಕಲ್ ನಗರಕ್ಕೆ ಹೋಗಬೇಕಾದ ಸ್ಥಿತಿ ಬಂದಿದೆ.
ಪ್ರತಿ ಸಲವೂ ಏನಾದರೂ ಒಂದು ತೊಂದರೆಯಾದಾಗ ಶುದ್ಧ ಕುಡಿಯುವ ನೀರಿನ ಘಟಕ ನಿರ್ವಹಿಸುವ ಗುತ್ತಿಗೆದಾರರು ಸಮರ್ಪಕವಾಗಿ ರಿಪೇರಿ ಮಾಡದ ಕಾರಣ ಪದೇ ಪದೇ ಬಂದ್ ಆಗುವ ಮೂಲಕ ಜನರಿಗೆ ತೊಂದರೆ ಆಗುತ್ತದೆ.
ಹೀಗಾಗಿ ಶುದ್ಧ ಕುಡಿಯುವ ನೀರಿನ ಘಟಕವನ್ನು ಬೇಗನೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಸ್ಪಂದಿಸಿ ಪ್ರಾರಂಭಿಸಬೇಕೆಂದು ಗ್ರಾಮಸ್ಥರ ಮನವಿಯಾಗಿದೆ.