ನಾಲ್ಕನೇ ದಿನವೂ ಶಿವಮೊಗ್ಗ ನಗರ ಸ್ತಬ್ದ

ಶಿವಮೊಗ್ಗ, ಮೇ.೧ : ರಾಜ್ಯಾದ್ಯಂತ ಜಾರಿಗೊಳಿಸಲಾಗಿರುವ 14 ದಿನಗಳ ಜನತಾ ಕರ್ಫ್ಯೂ
೪ ನೇ ದಿನಕ್ಕೆ ಕಾಲಿಟ್ಟಿದೆ. ಶಿವಮೊಗ್ಗ ನಗರ ಸತತ ಮೂರನೇ ದಿನವೂ ಸಂಪೂರ್ಣ
ಸ್ತಬ್ದವಾಗಿತ್ತು. ವ್ಯಾಪಾರ-ವಹಿವಾಟು ಸ್ಥಗಿತಗೊಂಡಿತ್ತು. ಜನ-ವಾಹನ ಸಂಚಾರ ಸಂಪೂರ್ಣ
ವಿರಳವಾಗಿತ್ತು. ಪ್ರಮುಖ ರಸ್ತೆ, ವೃತ್ತಗಳಲ್ಲಿ ಪೊಲೀಸರ ಗಸ್ತು ಮುಂದುವರಿದಿತ್ತು.