ನಾಲೆಗೆ ಐದು ದಿನ ಹೆಚ್ಚುವರಿ ನೀರು: ಬಲದಂಡೆ ಕಾಲುವೆ ಅನ್ನದಾತರು ನಿರಾಳ

?????????????????????????????????????????????????????????????????????????????????????????????????????????????????????????????????????????????????????????????????????????????????????????

ದೇವದುರ್ಗ,ಏ.೦೧- ನಾರಾಯಣಪುರ ಬಲದಂಡೆ ನಾಲೆಯ ಬೇಸಿಗೆ ಬೆಳೆಗೆ ಐದುದಿನ ಹೆಚ್ಚುವರಿಯಾಗಿ ನೀರು ಹರಿಸಲು ಕೃಷ್ಣಾಭಾಗ್ಯ ಜಲನಿಗಮದ ಅಧಿಕಾರಿಗಳು ತೀರ್ಮಾನ ಕೈಗೊಂಡಿದ್ದಾರೆ. ಇದರಿಂದ ಜಿಲ್ಲೆಯ ಮೂರು ತಾಲೂಕಿನ ಸಾವಿರಾರು ರೈತರಿಗೆ ಅನುಕೂಲವಾಗಲಿದ್ದು, ಪೂರ್ಣಪ್ರಮಾಣದಲ್ಲಿ ಬೆಳೆ ಕೈಗೆ ಬರಲಿದೆ.
ಆಲಮಟ್ಟಿ ಹಾಗೂ ನಾರಾಯಣಪುರ ಜಲಾಶಯ ಆಶ್ರಿತ ರೈತರು ವರ್ಷದಲ್ಲಿ ಎರಡು ಬೆಳೆ ಪಡೆಯುತ್ತಿದ್ದು, ಈ ವರ್ಷಕೂಡ ಬೇಸಿಗೆ ಬೆಳೆಯು ಕೃಷಿಕರ ಕೈಹಿಡಿಯಲಿದೆ. ವಾರಬಂಧಿ ಪ್ರಕಾರ ಮಾ.೩೦ರಂದು ಸಂಜೆ ನೀರು ಬಂದ್ ಮಾಡಲಾಗಿದ್ದು, ರೈತರ ಒತ್ತಾಯದ ಮೇರೆಗೆ ಏ.೬ರಿಂದ ೧೦ರವರೆಗೆ ಐದುದಿನ ಹೆಚ್ಚುವರಿ ೫ಟಿಎಂಸಿ ಅಡಿ ನೀರು ಹರಿಸಲು ಕೃಷ್ಣಾಭಾಗ್ಯ ಜಲನಿಗಮ ಮುಂದಾಗಿದೆ.
ಮುಂಗಾರಿನ ನಾಲ್ಕು ತಿಂಗಳಲ್ಲಿ ಉತ್ತಮವಾದ ಮಳೆಸುರಿದ ಕಾರಣ ಮೊದಲ ಬೆಳೆಗೆ ಆಗಷ್ಟ್ ೫ರಿಂದ ನವೆಂಬರ್ ೧೫ರವರೆಗೆ ವಾರಬಂಧಿ ಇಲ್ಲದೆ ನಿರಂತರವಾಗಿ ನೀರು ಹರಿಸಲಾಗಿತ್ತು. ಎರಡೂ ಜಲಾಶಯದಲ್ಲಿ ಒಳಹರಿವು ಕಡಿಮೆಯಾಗಿದ್ದರಿಂದ ಹಾಗೂ ಬೇಸಿಗೆ ಬೆಳೆಗೆ ಪೂರ್ಣ ನೀರು ಹರಿಸಲು ಎರಡನೇ ಬೆಳೆಗೆ ಡಿ.೧ರಿಂದ ವಾರಬಂಧಿ ಪದ್ಧತಿ ಜಾರಿಗೊಳಿಸಲಾಗಿತ್ತು. ೧೪ದಿನಚಾಲು, ೮ದಿನಬಂದ್ ಮಾಡಿ ಮಾ.೩೦ರವರೆಗೆ ನೀರು ಹರಿಸಲು ಎರಡನೇ ಐಸಿಸಿ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿತ್ತು.
ಹಿಂಗಾರು ಬೆಳೆಗೆ ಭತ್ತ ಹೊರತುಪಡಿಸಿ ಬೇರೆಬೆಳೆ ಬೆಳೆಯಲು ಅಧಿಕಾರಿಗಳು ಮನವಿ ಮಾಡಿದ್ದರು. ಆದರೂ ಹಲವು ರೈತರು ಭತ್ತನಾಟಿ ಮಾಡಿದ್ದು ಶೇಂಗಾ, ಮೆಣಸಿನಕಾಯಿ, ಸಜ್ಜೆ ಕೂಡಬಿತ್ತನೆ ಮಾಡಿದ್ದಾರೆ. ಸುಮಾರು ೩೦ಸಾವಿರ ಹೆಕ್ಟೇರ್‌ನಲ್ಲಿ ಭತ್ತ, ೩೫ಸಾವಿರ ಹೆಕ್ಟೇರ್‌ನಲ್ಲಿ ಮೆಣಸಿನಕಾಯಿ ಸೇರಿ ಶೇಂಗಾ, ಸಜ್ಜೆ ಬೆಳೆಯಲಾಗಿದೆ. ಮೆಣಸಿನಕಾಯಿ ಹಾಗೂ ಭತ್ತದ ಬೆಳೆಗೆ ಏ.೧೦ರವರೆಗೆ ನೀರು ಹರಿಸುವಂತೆ ರೈತರು ನೀರಾವರಿ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಿದ್ದರು.
ರೈತರ ಒತ್ತಾಯದ ಮೇರೆಗೆ ಯಾದಗಿರಿ ಜಿಲ್ಲೆಯ ಭೀಮರಾಯನಗುಡಿ ಕೆಬಿಎನ್‌ಎಲ್ ಕಚೇರಿಯಲ್ಲಿ ರೈತರು ಒಳಗೊಂಡಂತೆ ಸೋಮವಾರ ಅಧಿಕಾರಿಗಳು ಸಭೆನಡೆಸಿ ಹೆಚ್ಚುವರಿ ನೀರು ಹರಿಸಲು ಮುಂದಾಗಿದ್ದಾರೆ. ಏ.೬ರಿಂದ ೧೦ರವರೆಗೆ ೫ದಿನ ಹೆಚ್ಚುವರಿ ನೀರು ನಾಲೆಗೆ ಹರಿಯಲಿದ್ದು, ಮೆಣಸಿನಕಾಯಿ, ಭತ್ತ, ಶೇಂಗಾ, ಸಜ್ಜೆ ಬೆಳೆದ ರೈತರು ನೆಮ್ಮದಿ ನಿಟ್ಟುಸಿರು ಬಿಡುವಂತಾಗಿದೆ.
ನಿಗಮದ ಲೆಕ್ಕಾಚಾರ
ಎರಡನೇ ಐಸಿಸಿ ಮೀಟಿಂಗ್‌ನಲ್ಲಿ ತೀರ್ಮಾನಕೈಗೊಂಡಂತೆ ಮಾ.೩೦ರವರೆಗೆ ನೀರು ಹರಿಸಿದರೂ ನಾರಾಯಣಪುರ ಹಾಗೂ ಆಲಮಟ್ಟಿ ಜಲಾಶಯದಲ್ಲಿ ಸುಮಾರು ೨೨ಟಿಎಂಸಿ ಅಡಿ ನೀರು ಉಳಿಯಲಿದೆ. ಬೇಸಿಗೆ ೩ತಿಂಗಳು ಕುಡಿವ ನೀರು, ನದಿಗೆ ನೀರು ಹರಿಸಲು ಹಾಗೂ ಭಾಷ್ಪೀಕರಣ ಸೇರಿ ೧೭ಟಿಎಂಸಿ ನೀರು ಉಳಿಸಿಕೊಂಡು ಉಳಿಯುವ ಹೆಚ್ಚುವರಿ ೫ಟಿಎಂಸಿ ಅಡಿ ಐದುದಿನ ಬಿಡಲು ತೀರ್ಮಾನಿಸಿದೆ. ವಾರಬಂಧಿ ಕಟ್ಟುನಿಟ್ಟಾಗಿ ಜಾರಿಗೊಳಿಸಿದ್ದರಿಂದ ೫ಟಿಎಂ ಅಡಿ ನೀರುಉಳಿದಿದೆ.

ಕೋಟ್=====

ರೈತರ ಒತ್ತಾಯದ ಮೇರೆಗೆ ಹೆಚ್ಚುವರಿಯಾಗಿ ಉಳಿಯುವ ೫ಟಿಎಂಸಿ ಅಡಿ ನೀರು ನಾರಾಯಣಪುರ ಬಲದಂಡೆ, ಎಡದಂಡೆ ನಾಲೆಗೆ ಹರಿಸಲಾಗುವುದು. ಮಾ.೩೦ಕ್ಕೆ ಐದುದಿನ ಬಂದ್ ಮಾಡಿ ಏ.೬ರಿಂದ ೧೦ರವರೆಗೆ ಹೆಚ್ಚುವರಿ ನೀರು ಹರಿಸಲಾಗುವುದು.

| ಅನೀಲ್‌ರಾಜ್
ಕೆಬಿಜೆಎನ್‌ಎಲ್ ಇಇ

ಕೋಟ್=====

ಮೆಣಸಿನಕಾಯಿ ಸೇರಿ ಹಿಂಗಾರು ಬೆಳೆಗಳಿಗೆ ಏ.೧೦ವರೆಗೆ ನೀರು ಹರಿಸುವಂತೆ ನೀರಾವರಿ ಇಲಾಖೆ ಅಧಿಕಾರಿಗಳಿಗೆ ಒತ್ತಾಯ ಮಾಡಿದ್ದೇವೆ. ಹೆಚ್ಚುವರಿ ೫ದಿನ ನೀರು ಹರಿಸಲು ತೀರ್ಮಾನ ಕೈಗೊಂಡಿದ್ದು ಸ್ವಾಗರ್ತಾಹ. ಇದರಿಂದ ಭತ್ತ, ಮೆಣಸಿನಕಾಯಿ, ಶೇಂಗಾ, ಸಜ್ಜೆ ರೈತರ ಕೈಸೇರಲಿವೆ.

| ಪ್ರಭಾಕರ ಪಾಟೀಲ್ ಇಂಗಳದಾಳ
ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ

ಪೋಟೋ೧ಡಿವಿಡಿ,-೦೧