ನಾಲಿಗೆ ಆರೋಗ್ಯಕ್ಕೆ ಮನೆ ಮದ್ದು

ನೇಕ ಕಾರಣ ನಾಲಿಗೆಯಲ್ಲಿ ನೋವು, ಉರಿಗೆ ಕಾರಣವಾಗಬಹುದು. ಇದಕ್ಕೆ ಚಿಕಿತ್ಸೆ ನೀಡದಿದ್ದರೆ ಒಂದೆರಡು ದಿನ ನಾಲಿಗೆಗೆ ಸಂವೇದನೆಯೇ ಇರುವುದಿಲ್ಲ. ಯಾವುದೇ ರುಚಿ ಹಿಡಿಸುವುದಿಲ್ಲ, ಖಾರ ತಿನ್ನಲು ಸಾಧ್ಯವಾಗುವುದಿಲ್ಲ, ಮತ್ತೆ ಬಿಸಿ ಪದಾರ್ಥ ತಿನ್ನಲು ಆಗುವುದಿಲ್ಲ ಒಂದೇ, ಎರಡೇ ಸಮಸ್ಯೆಗಳು. ಹಾಗಿದ್ದರೆ ನಾಲಿಗೆ ಸುಟ್ಟ ಸಂದರ್ಭದಲ್ಲಿ ಮನೆಮದ್ದಿನ ಮೂಲಕ ಹೇಗೆ ಶೀಘ್ರ ಗುಣಪಡಿಸಿಕೊಳ್ಳಬಹುದು ಎಂದು ಈ ಕೆಲವು ಸಲಹೆಗಳನ್ನು ನೀಡಲಿದ್ದೇವೆ.
ಸುಟ್ಟ ಕೂಡಲೇ ತಣ್ಣಗಿನ ನೀರು ಕುಡಿಯುವದರಿಂದ ನಾಲಿಗೆ ತಣ್ಣಗಾಗುತ್ತದೆ ಹಾಗೂ ನಾಲಿಗೆಯ ಒಳಪದರಗಳಿಗೆ ಆಗಬಹುದಾದ ಇನ್ನಷ್ಟು ಸಮಸ್ಯೆಯನ್ನು ತಡೆಯುತ್ತದೆ.
ಬಾಯಿ ಸುಟ್ಟುಕೊಂಡರೆ ಒಂಚೂರು ಸಕ್ಕರೆ ಅಥವಾ ಕಲ್ಲು ಸಕ್ಕರೆ ಬಾಯಿಗೆ ಹಾಕಿ ಸ್ವಲ್ಪ ಹೊತ್ತು ಇಟ್ಟುಕೊಳ್ಳಿ
ಪುದೀನಾ ಎಲೆ ಎಂದರೆ ಒಗರು ಒಗರಾಗಿರುತ್ತದೆ. ಆದರೂ ಬಾಯಿ ಸುಟ್ಟಾಗ ಪುದೀನಾ ಎಲೆಗಳನ್ನು ಜಗಿಯಿರಿ, ಕೂಡಲೇ ಸುಟ್ಟ ನೋವು ಶಮನವಾಗುತ್ತದೆ.
ಯಾವುದೇ ಸುಟ್ಟ ಗಾಯಕ್ಕೂ ಜೇನು ತುಪ್ಪ ಒಳ್ಳೆಯ ಮದ್ದು. ಹಾಗೆಯೇ ಬಾಯಿ ಸುಟ್ಟಿದ್ದರೂ ಜೇನು ತುಪ್ಪ ಸೇವಿಸಿದರೆ ನಾಲಿಗೆ ಸುಟ್ಟ ನೋವು ನಿವಾರಣೆಯಾಗುತ್ತದೆ.
ಬಾಯಿ ಸುಟ್ಟುಕೊಂಡ ತಕ್ಷಣ ಮಜ್ಜಿಗೆ ಕುಡಿಯಿರಿ, ನಾಲಿಗೆ ಜತೆಗೆ ದೇಹಕ್ಕೂ ತಂಪೆನಿಸುತ್ತದೆ. ಮೊಸರು, ಹಾಲು ಸಹ ನಾಲಿಗೆಯ ಮೇಲ್ಪದರಕ್ಕೆ ತಾತ್ಕಾಲಿಕ ನೆಮ್ಮದಿ ನೀಡುತ್ತದೆ.
ಅಲೋವೇರಾ ಬಾಯಿ ಉರಿ ಜತೆಗೆ, ಸಂವೇದನೆ ಕಳೆದುಕೊಂಡಿದ್ದರೂ ಅದನ್ನು ಮರಳಿ ಪಡೆಯುವುದಕ್ಕೆ ಪರಿಣಾಮಕಾರಿ ಮದ್ದು.