ನಾಲಾ ಕುಸಿತ

ಹುಬ್ಬಳ್ಳಿ, ಆ 6: ಲೋಡ್ ಲಾರಿಯೊಂದು ನಾಲಾ ಬ್ರಿಜ್ ಬಳಿ ಸಾಗುತ್ತಿದ್ದ ಸಂದರ್ಭದಲ್ಲಿ ನಾಲಾ ಕುಸಿದ ಘಟನೆ ಹುಬ್ಬಳ್ಳಿಯ ಟುಮಕೂರ ಓಣಿ ನಾಲಾ ಬ್ರಿಜ್ ಬಳಿ ನಡೆದಿದೆ.
ಹುಬ್ಬಳ್ಳಿಯ ವಾರ್ಡ್ ನಂ. 65 ರಲ್ಲಿ ಬರುವ ಟುಮಕೂರ ಓಣಿಯಲ್ಲಿ ಲೋಡ್ ಲಾರಿ ಸಂಚರಿಸುತ್ತಿದ್ದ ಸಂದರ್ಭದಲ್ಲಿ ಈ ಅವಘಡ ಸಂಭವಿಸಿದ್ದು, ಕೆಲ ಹೊತ್ತು ಸಂಚಾರ ದಟ್ಟಣೆ ಉಂಟಾಯಿತು.
ಮಹಾನಗರ ಪಾಲಿಕೆಯ ಸದಸ್ಯೆ ಸುನೀತಾ ಬುರಬುರೆ ಹಾಗೂ ಸ್ಥಳೀಯರು ಸಂಬಂಧಿಸಿದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಬಗೆಹರಿಸಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಪ್ರಕಾಶ ಬುರಬುರೆ ಸೇರಿದಂತೆ ಸ್ಥಳೀಯರು ಉಪಸ್ಥಿತರಿದ್ದರು.