ನಾರಿ ಶಕ್ತಿ ಯೋಜನೆಯ ಫಲ ಮರು ಜನ್ಮಪಡೆದ ಬಸ್ ನಿಲ್ದಾಣ

ಕೆಂಭಾವಿ: ಜು.13:ಜೂನ್.11ರಿಂದ ರಾಜ್ಯಾದ್ಯಂತ ರಾಜ್ಯ ಸರಕಾರ ಜಾರಿಗೆ ತಂದಿರುವ ಶಕ್ತಿ ಯೋಜನೆ (ಸರಕಾರಿ ಬಸ್‍ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ) ಯಿಂದಾಗಿ ದಶಕಗಳ ಕಾಲ ಪಾಳುಬಿದ್ದಿದ ಕೆಂಭಾವಿ ಬಸ್ ನಿಲ್ದಾಣ ಇದೀಗ ಕಳೆಗಟ್ಟಿ ಜನಬೀಡಿತ ಪ್ರದೇಶವಾಗಿ ಮಾರ್ಪಟ್ಟಿದೆ.
ಹೌದು, ಕಳೆದ ಎರಡು ಮೂರು ದಶಕಗಳಿಂದ ಬಸ್ ನಿಲ್ದಾಣವಿದ್ದರೂ ಪಟ್ಟಣದಿಂದ ದೂರುವಾಗುತ್ತದೆ ಎಂಬ ಕಾರಣಕ್ಕೆ ಪಟ್ಟಣದ ಬಸ್ ನಿಲ್ದಾಣಕ್ಕೆ ಯಾರು ಹೋಗುತ್ತಿರಲಿಲ್ಲ. ಹೀಗಾಗಿ ಸರಕಾರ ಲಕ್ಷಾಂತರ ರೂ.ವೆಚ್ಚದಲ್ಲಿ ನಿರ್ಮಾಸಿದ ನಿಲ್ದಾಣ ನಿರ್ಜನ ಪ್ರದೇಶವಾಗಿ ಪಾಳುಬಿದ್ದು, ಅನೈತಿಕ ಚಟುವಟಿಕೆಗಳ ತಾಣವಾಗಿತ್ತು. ಅಲ್ಲದೇ ಜನ ಬಾರದೇ ಇರುವ ಕಾರಣ ಬಸ್‍ಗಳನ್ನು ಸಹಿತ ಹಳೆ ಬಸ್ ನಿಲ್ದಾಣದ ರಸ್ತೆ ಮೇಲೆ ಅಡ್ಡಾದಿಡ್ಡಿಯಾಗಿ ನಿಲುವಂತಾಗಿತ್ತು. ಇದ್ದರಿಂದ ಟ್ರಾಫಿಕ್ ಸಮಸ್ಯೆಗೆ ಮೂಲ ಕಾರಣವಾಗಿತ್ತು.

ಆದರೆ, ಇದೀಗ ಶಕ್ತಿ ಯೋಜನೆಯಿಂದ ಮಹಿಳಾ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿರುವ ಮತ್ತು ದಿನದಿಂದ ದಿನಕ್ಕೆ ಪಟ್ಟಣ ವಿಸ್ತರಣೆಗೊಳುತ್ತಿರುª ಕಾರಣವಾಗಿ ಮತ್ತಷ್ಟು ಟ್ರಾಫಿಕ್ ಕಿರಿಕಿರಿಯನ್ನು ಅನುಭವಿಸಬೇಕಾದ ಪರಿಸ್ಥಿತಿ ಉಂಟಾಗಿತ್ತು. ಅಲ್ಲದೇ ಪ್ರಯಾಣಿಕರಿಗೆ ನೈಸರ್ಗಿಕ ಕ್ರಿಯೆಗೆ (ಮೂತ್ರ ವಿಸರ್ಜನೆ) ತೊಂದರೆ ಹಾಗೂ ಮಹಿಳೆಯರಿಗೆ ಬಸ್ ಬರುವವರೆಗೂ ಕಾಯ್ದು ವಿಶ್ರಾಂತಿ ಪಡೆಯಲು ಸರಿಯಾದ ವ್ಯವಸ್ಥೆ ಸೇರಿ ಹೀಗೆ ಹತ್ತ ಹಲವು ಅನುಭವಿಸುತ್ತಿದ್ದ ಸಮಸ್ಯೆಯನ್ನು ಕೆಕೆಆರ್‍ಟಿಸಿ ಅಧಿಕಾರಿಗಳು, ಪೆÇಲೀಸ್ ಇಲಾಖೆ ಗಮನಕ್ಕೆ ತರಲಾಯಿತು. ಇದನ್ನರಿತ ಕೂಡಲೇ ಜಂಟಿಯಾಗಿ ಕಾರ್ಯಪ್ರವೃತ್ತರಾಗಿ ಈ ಸಮಸ್ಯೆಗೆ ಬ್ರೇಕ್ ಹಾಕಲು ಕೆಂಭಾವಿ ಪಟ್ಟಣಕ್ಕೆ ಸಂಚರಿಸುವ ಎಲ್ಲಾ ಬಸ್‍ಗಳನ್ನು ಕಡ್ಡಾಯವಾಗಿ ಬಸ್ ನಿಲ್ದಾಣದಲ್ಲಿಯೇ ನಿಲುಗಡೆ ಮಾಡುವಂತೆ ಆದೇಶ ಹೊರಡಿಸಿಲಾಗಿದೆ. ಇದರಿಂದ ಈ ಮೇಲ್ಕಂಡ ಎಲ್ಲಾ ಸಮಸ್ಯೆಗಳು ಒಂದೇ ಸಲಕ್ಕೆ ಪರಿಹಾರ ನೀಡುವುದರ ಜತೆಗೆ ಬೀದಿ ವ್ಯಾಪಾರಿಗಳ ವಹಿವಾಟಿಗು ಅನುಕೂಲ ಮಾಡುವ ಮೂಲಕ ಒಂದೇ ಪರಿಹಾರಕ್ಕೆ ಹತ್ತು ಸಮಸ್ಯೆಗೆ ಮುಕ್ತಿ ಸಿಕ್ಕಂತಾಗಿದೆ. ಹೀಗಾಗಿ ಇದು ಸಾರ್ವಜನಿಕರ ಪ್ರಶಂಸೆಗೆ ಕಾರಣವಾಗಿದೆ.

5 ರೂ. ಕೊಟ್ಟು ಪಟ್ಟಣದ್ಯಾದಂತ ಸಂಚರಿಸಿ
ನಾಗರೀಕರ ನಾವು ಇಲ್ಲಿನ ಪುರಸಭೆಗೆ ನಗರ ಸಾರಿಗೆ ಕರವೆಂದು ಪಾವತಿ ಮಾಡುತ್ತೇವೆ. ಹೀಗಾಗಿ ಪಟ್ಟಣದಲದಲ್ಲಿ ಸಂಚರಿಸಲು ನಗರ ಸಾರಿಗೆ ಅವಶ್ಯಕವಾಗಿದೆ ಎಂಬ ಬೇಡಿಕೆಗೂ ಕಾಲ ಇದೀಗ ಕೂಡಿಬಂದಿದೆ. ಪಟ್ಟಣದ ಆಶ್ರಯ ಕಾಲೋನಿ, ಸಂಜೀವ ನಗರ, ಸಮುದಾಯ ಆರೋಗ್ಯ ಕೇಂದ್ರ, ಸಾಯಿನಗರ, ಪೆÇಲೀಸ್ ಠಾಣೆ, ಡಾ.ಬಿ.ಆರ್. ಅಂಬೇಡ್ಕರ್ ವೃತ್ತಗಳಲ್ಲಿ ಬಸ್‍ಗಳು ನಿಂತು ಪ್ರಯಾಣಿಕರ ಕೊಂಡಯ್ಯುಲು ಕೇವಲ 5 ರೂ.ಗೆ ಟಿಕೆಟ್ ನೀಡುವ ಸೌಲಭ್ಯ ಒದಗಿಸಲಾಗಿದ್ದು, ಇದರ ಸದುಪಯೋಗವನ್ನು ವಿದ್ಯಾರ್ಥಿಗಳು, ಸಾರ್ವಜನಿಕರು ಪಡೆಯಬಹುದಾಗಿದೆ ಎಂದು ಯಾದಗಿರಯ ವಿಭಾಗೀಯ ನಿಯಂತ್ರಣಾಧಿಕರಿಗಳು ತಿಳಿಸಿದ್ದಾರೆ.