ನಾರಾ ಭರತ್ ರೆಡ್ಡಿ ಗೆಲುವಿಗೆ 101  ತೆಂಗಿನಕಾಯಿ ಸಮರ್ಪಿಸಿದ ಗಂಗೀರೆಡ್ಡಿ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಮೇ.14: ನಗರ ವಿಧಾನಸಭಾ ಕ್ಷೇತ್ರದಿಂದ ನಾರಾ ಭರತ್ ರೆಡ್ಡಿ ಗೆದ್ದ ಕಾರಣ.  ನಗರದ ತಾಳೂರು ರಸ್ತೆಯ ಶ್ರೀನಗರ ಆಂಜಿನೇಯಸ್ವಾಮಿಗೆ ಇಂದು ಪೂಜಾ ಕೈಂಕರ್ಯಗಳನ್ನು ಕೈಗೊಂಡ  ಜನಗಣ ಒಕ್ಕೂಟದ ರಾಷ್ಟ್ರೀಯ ಅಧ್ಯಕ್ಷ, ಮಾಜಿ ನಗರಸಭಾ ಸದಸ್ಯ ಎನ್. ಗಂಗೀರೆಡ್ಡಿ ಅವರು  101 ಸಮರ್ಪಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು. ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಜಯಗಳಿಸಿದ್ದಾರೆ. ಇದರಲ್ಲಿ ಬಳ್ಳಾರಿ ನಗರ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಕಂಡ ನನ್ನ ಮೊಮ್ಮಗನ ಸಮಾನನಾದ, 33 ವರ್ಷದ ಯುವಕ ನಾರಾ ಭರತ್ ರೆಡ್ಡಿ ಜಯಗಳಿಸಿದ್ದಾರೆ. ಭರತ್ ರೆಡ್ಡಿ ನಗರದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಲು ಆತನಿಗೆ ಶ್ರೀ ಆಂಜಿನೇಯಸ್ವಾಮಿ ಎಲ್ಲಾ ರೀತಿಯ ಶಕ್ತಿಯನ್ನು ನೀಡಲಿ ಎಂದು ಪೂಜೆಯನ್ನು ನಡೆಸಿ ನೂರೊಂದು  ತೆಂಗಿನಕಾಯಿಗಳನ್ನು  ಅರ್ಪಿಸಿದ್ದೇನೆ ಎಂದರು.
ಬಳ್ಳಾರಿ ಜಿಲ್ಲೆಯ ವಿಭಜನೆಗೆ ಕಾರಣವಾದ ಬಿ.ಜೆ.ಪಿ ಸರ್ಕಾರವನ್ನು ಅಖಂಡ ಬಳ್ಳಾರಿ ಜಿಲ್ಲೆಯ ಮತದಾರರು ತಿರಸ್ಕರಿಸಿದ್ದಾರೆ. ಇದರಿಂದ ಬಿ.ಜೆ.ಪಿ ಪಕ್ಷವು ಮುಂದಿನ ದಿನಗಳಲ್ಲಿ ಈ ರೀತಿಯ ಒಡೆದು ಆಳುವುದರಿಂದ ಆಗುವ ನಷ್ಟದ ಬಗ್ಗೆ ಪಾಠವನ್ನು ಕಲಿಯಬೇಕಿದೆ ಎಂದು ತಮ್ಮ  ಅಕ್ರೋಶವನ್ನು ಗಂಗೀರೆಡ್ಡಿ ವ್ಯಕ್ತಿಪಡಿಸದರು.
ಗೋಪಾಲರೆಡ್ಡಿ, ಪಿ.ವಿ ಗಿರಿ, ಬಾಲಾಜಿ, ವಿರೂಪಾಕ್ಷಿಗೌಡ, ಕುಂಟನಾಳ್ ವೀರಭದ್ರಗೌಡ ಸೇರಿದಂತೆ ಶ್ರೀನರಗದ ಕಾಂಗ್ರೆಸ್ ಮಖಂಡರು ಈ ಸಂದರ್ಭದಲ್ಲಿ ಇದ್ದರು.