ನಾರಾ ಭರತ್ ರೆಡ್ಡಿಗೆ ಕಾಂಗ್ರೆಸ್ ಟಿಕೆಟ್ ನೀಡಲು
 ವೀರಶೈವ ಮುಖಂಡರಿಂದ ಹೈಕಮಾಂಡಿಗೆ  ಮನವಿ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಮಾ.07: ನಗರ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ನ್ನು ನಾರಾ ಭರತ್ ರೆಡ್ಡಿ ಅವರಿಗೆ ನೀಡಬೇಕೆಂದು ವೀರಶೈವ ಮುಖಂಡರು ಕಾಂಗ್ರೆಸ್ ಹೈ ಕಮಾಂಡಿಗೆ ಮನವಿ ಮಾಡಿದ್ದಾರೆ.
ನಗರದ ಖಾಸಗಿ ಹೊಟೇಲ್ ನಲ್ಲಿ ಇಂದು ಸುದ್ದಿಗೋಷ್ಟಿ ನಡೆಸಿದ. ನಗರದ ವೀರಶೈವ ಮುಖಂಡರಾದ ದಂಡಿನ ಶಿವಾನಂದ, ಸಂಗನಕಲ್ಲು ಬಸವರಾಜ್, ಹೆಚ್.ಎಂ.ಕೊಟ್ರೇಶ್,  ಕೋಳೂರು ಮಲ್ಲಿಕಾರ್ಜುನ ಗೌಡ, ಚಾನಾಳ್ ಶೇಖರ್, ಮಿಂಚೇರಿ ನರೇಂದ್ರಬಾಬು, ಸುಮಂಗಳಮ್ಮ ಬಸವರಾಜ್ ಅವರುಗಳು. ಭರತ್ ರೆಡ್ಡಿ ಅವರು ಈ‌ ಹಿಂದೆ ತಾಲೂಕಿನ ಕೊರ್ಲಗುಂದಿ  ಕ್ಷೇತ್ರದಿಂದ ಜಿಪಂ ಸದಸ್ಯರಾಗಿ, ಟಚ್ ಫಾರ್ ಲೈಪ್ ಪೌಂಡೇಶನ್ ಮೂಲಕ ಸಮಾಜ ಸೇವೆ ಮಾಡುತ್ತಾ ಬಂದಿದ್ದಾರೆ.
ಅಷ್ಟೇ ಅಲ್ಲದೆ ಸಮಾಜದ ಜನತೆಗೆ ಸಂಕಷ್ಟದಲ್ಲಿದ್ದಾಗ ಅನೇಕ ರೀತಿಯಲ್ಲಿ  ಸಹಾಯ, ಸಹಕಾರ ಮಾಡುತ್ತಾ ಬಂದಿದ್ದಾರೆ. ಅದೇರೀತಿ  ವೀರಶೈವ ಸಮಾಜದ ಕಾರ್ಯಗಳಿಗೆ, ಜನತೆಗೂ ಸಾಕಷ್ಟು ಸಹಕಾರಿಯಾಗಿದ್ದಾರೆ.
ಜನರಿಗಷ್ಟೇ ಅಲ್ಲದೆ ದೇವಸ್ಥಾನಗಳಿಗೆ ಭರತ್ ಅವರ ತಂದೆ ಮಾಜಿ ಶಾಸಕ ಸೂರ್ಯನಾರಾಯಾಣ ರೆಡ್ಡಿ ಅವರು ದಾನ, ಧರ್ಮ ಮಾಡಿದ್ದಾರೆ. ಇವರು ನಮ್ಮ‌ಸಮಾಜದ ಶ್ರೇಯೋಭಿಲಾಷಿಗಳಾಗಿದ್ದಾರೆಂದು ದಂಡಿನ ಶಿವಾನಂದ್ ಅವರು ಹೇಳಿ.  ಪಕ್ಷ ಇವರ ಸೇವೆಯನ್ನು ಪರಿಗಣಿಸಿ ಟಿಕೆಟ್ ನೀಡಬೇಕೆಂದು ಹೇಳಿದರು.
ಈಗಾಗಲೇ ಮನೆ ಮನೆಗೂ ಭರತ್ ಎಂಬ ಅಭಿಯಾನದಡಿ, ನಗರ ಕ್ಷೇತ್ರದೆಲ್ಲಡೆ ಸಂಚರಿಸಿ ಎಲ್ಲಾ ಸಮಾಜವನ್ನು ಒಂದುಗೂಡಿಸಿಕೊಂಡು ಹೋಗುವನೋಭಾವದ ಯುವಕರಾಗಿದ್ದು. ಭರತ್ ಅವರಿಗೆ ಟಿಕೆಟ್ ನೀಡುವುದು ಸೂಕ್ತ ಎಂದು ಮಿಂಚೇರಿ ನರೇಂದ್ರ ಬಾಬು ಹೇಳಿದರು.
ಈಗಾಗಲೇ ನಿಮ್ಮ ಸಮಾಜದ  ಅಲ್ಲಂ ಪ್ರಶಾಂತ್, ಅಲ್ಲಂ ವೀರಭದ್ರಪ್ಪ  ಅವರು ಟಿಕೆಟ್ ಗೆ ಅರ್ಜಿ ಸಲ್ಲಿಸಿದ್ದಾರೆ ಎಂಬ ಮಾಧ್ಯಮದವರ ಪ್ರಶ್ನೆಗೆ. ಅಲ್ಲಂ ಪ್ರಶಾಂತ್ ಗೆ ಟಿಕೆಟ್ ಕೊಡಬೇಡ ಎಂದು ಹೇಳುವುದಿಲ್ಲ.  ಅವರು ನಿಂತರೆ   ನಾವು ಬೆಂಬಲ‌ ನೀಡುವ ಬಗ್ಗೆ ನಂತರ ತೀರ್ಮಾನ ಮಾಡುತ್ತೇವೆ. ಅಲ್ಲಂ ಪ್ರಶಾಂತ್ ಅವರಿಗೆ ಟಿಕೆಟ್ ನೀಡಿದರೆ, ಭರತ್ ರೆಡ್ಡಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಾರೆ ಎಂದು ಹೇಳುವುದಿಲ್ಲ ಎಂದು ಚಾನಾಳ್ ಶೇಖರ್ ಹೇಳಿದರೆ.
ಕೋಳೂರು ಮಲ್ಲಿಕಾರ್ಜುನಗೌಡ ಅವರು ಅಲ್ಲಂ ಪ್ರಶಾಂತ್ ಅವರಿಗೆ ಟಿಕೆಟ್ ಕೊಟ್ಟರೂ ಅವರನ್ನು ನಾವು ಬೆಂಬಲಿಸಲಿದೆ ಎಂದು ಹೇಳಿದರು.
ಸುಮಂಗಳಮ್ಮ ಬಸವರಾಜ್ ಅವರು ಮಾತನಾಡಿ ಭರತ್ ರೆಡ್ಡಿ ಅವರು ಸಮಾಜದಲ್ಲಿ  ಸಹಕಾರಿಯಾಗಿ ಕೆಲಸ ಮಾಡಿದ್ದಾರೆ,ಮಾಡುತ್ತಿದ್ದಾರೆ.  ಅದರಲ್ಲೂ ಮಹಿಳೆಯರಿಗೂ ತುಂಬ ಸಹಕಾರ ಮಾಡಿದ್ದಾರೆ. ಹಾಗಾಗಿ ಅವರಿಗೆ ಟಿಕೆಟ್ ನೀಡಬೇಕು ಎಂದರು.
ಸಾಮಾನ್ಯವಾಗಿ ಆಯಾ ಸಮಾಜದವರು, ತಮ್ಮ ಸಮಾಜದ ವ್ಯಕ್ತಿಗೆ ಟಿಕೆಟ್ ನೀಡಿ ಎಂದು ಕೇಳುತ್ತಾರೆ. ಆದರೆ ನೀವು ಬೇರೊಂದು ಸಮಾಜದ ವ್ಯಕ್ತಿಗೆ ಟಿಕೆಟ್ ಕೇಳುವುದು ಎಷ್ಟು ಸಮಂಜಸ ಎಂಬ ಮಾಧ್ಯಮದ ಪ್ರಶ್ನೆಗೆ ಸುದ್ದಿಗೋಷ್ಟಿಯಲ್ಲಿ ಪಾಲ್ಗೊಂಡವರು ಸ್ಪಷ್ಟ ಉತ್ತರ ನೀಡಲು ತಡಕಾಡಿದರು.  ಕೊನೆಗೆ ನಮ್ಮ ಸಮಾಜಕ್ಕೆ ಭರತ್ ರೆಡ್ಡಿ ಅವರಿಂದ ಸಹಕಾರ ಇದೆ ಅದಕ್ಕಾಗಿ ನೀಡಿ ಎಂದು ಕೇಳುತ್ತಿದ್ದೇವೆಂದರು.

One attachment • Scanned by Gmail