ನಾರಾಯಣ ಗುರು ಮಹಾನ್ ಸಮಾಜ ಸುಧಾರಕ:ಗುತ್ತೇದಾರ್

ಚಿತ್ತಾಪುರ:ಸೆ.1: ನಾರಾಯಣ ಗುರುಗಳ ಸಾಮಾಜಿಕ ಮಹಾ ಚಿಂತಕ,ಅಗ್ರಗಣ್ಯರಲ್ಲಿ ಒಬ್ಬರು, ಮಾನವನಿಗೆ ಒಂದೇ ಜಾತಿ, ಒಂದೇ ಧರ್ಮ ಮತ್ತು ಒಬ್ಬನೇ ದೇವರು ಎಂಬ ಮೂರು ಪ್ರಬಲ ಅಸ್ತ್ರಗಳನ್ನು ಬಳಸಿ ಹೊಸ ಸಮಾಜವನ್ನು ಕಟ್ಟಲು ಅವರು ಮಾಡಿದ ಪ್ರಯತ್ನ ಅಪ್ರತಿಮವಾದುದ್ದು ಎಂದು ನಾಗಾವಿ ಸಾಹಿತ್ಯ ಸಂಸ್ಕøತಿಕ ಪರಿಷತ್ತು ಅಧ್ಯಕ್ಷ ಕಾಶಿನಾಥ ಗುತ್ತೆದಾರ ಹೇಳಿದರು.

ಪಟ್ಟಣದ ತಹಸೀಲ್ ಕಚೇರಿಯಲ್ಲಿ ತಾಲೂಕು ಆಡಳಿತ, ತಾಲೂಕು ಆರ್ಯ ಈಡಿಗ ಸಮಾಜ, ರಾಷ್ಟ್ರೀಯ ಈಡಿಗರ ಮಹಾಮಂಡಳಿ ಇವರ ಸಹಯೋಗದಲ್ಲಿ ಗುರುವಾರ ನಡೆದ ಬ್ರಹ್ಮಶ್ರೀ ನಾರಾಯಣ ಗುರುಗಳ 169ನೇ ಜಯಂತೋತ್ಸವ ಕಾರ್ಯಕ್ರಮದಲ್ಲಿ ಉಪನ್ಯಾಸಕರಾಗಿ ಮಾತನಾಡಿದ ಅವರು, 12ನೇ ಶತಮಾನದಲ್ಲಿ ಜಗಜ್ಯೋತಿ ಶ್ರೀ ಬಸವೇಶ್ವರರು ಪ್ರಾರಂಬಿಸಿದ್ದ ಸಾಮಾಜಿಕ ಸುಧಾರಣೆಗಳಿಂದ ಕರ್ನಾಟಕ ರಾಜ್ಯದಲ್ಲಿ ಒಂದು ಸಾಮಾಜಿಕ ಜಾಗೃತಿ ಮೂಡಿತೋ ಅದೇ ರೀತಿ 18ನೇ ಶತಮಾನದಲ್ಲಿ ನಾರಾಯಣ ಗುರುಗಳು, ಕೇರಳ ರಾಜ್ಯದಲ್ಲಿ ಒಂದು ಸಾಮಾಜಿಕ ಜಾಗೃತಿಯನ್ನು ಮೂಡಿಸಿ ಅದನ್ನು ವಿಶ್ವದಾದ್ಯಂತ ಸಂದೇಶ ರೂಪದಲ್ಲಿ ಹಬ್ಬುವಂತೆ ಮಾಡಿದ್ದ ಇವರು, ದೇಶ ಕಂಡ ಅದ್ಬುತ ದಾರ್ಶನಕ, ಚಿಂತಕ, ಮಾನವತಾವಾದಿ, ಮಹಾನ್ ಸಮಾಜ ಸುಧಾರಕರಾಗಿದ್ದಾರೆ ಎಂದು ಹೇಳಿದರು.

ಕೇರಳದ ಬಹುಸಂಖ್ಯಾತ ಈಳವ ಜನಾಂಗದವರನ್ನು ಅಸ್ಪೃಶ್ಯ ವರ್ಗವೆಂದು ಪರಿಗಣಿಸಲಾಗುತ್ತಿತ್ತು, ಹೀಗಾಗಿ ಅವರಿಗೆ ದೇವಾಲಯಗಳಿಗೆ ಪ್ರವೇಶವಿರಲಿಲ್ಲ, ಅವಿದ್ಯೆಯಿಂದಾಗಿ ಸಾಮಾಜಿಕ ಕ್ರೂರ ಶೋಷಣೆಗೆ ಒಳಗಾದ ಕೆಳವರ್ಗದವರಿಗಾಗಿ ನಾರಾಯಣ ಗುರು ಅರವಿಪುರಂನಲ್ಲಿ 1888 ರಲ್ಲಿ ಮೊಟ್ಟ ಮೊದಲು ಶಿವರಾತ್ರಿ ದಿನದಂದು ಶಿವಲಿಂಗ ದೇವಾಲಯ ಪ್ರತಿಷ್ಠಾಪನೆ ಮಾಡಿ ದಲಿತರಿಗೆ, ಪ್ರವೇಶಿಸುವ, ಪೂಜೆ ಮಾಡುವ ವ್ಯವಸ್ಥೆ ಮಾಡಿದ್ದರು ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ನೀಲಗಂಗಾ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಈಡಿಗ ಸಮಾಜದ ಜಿಲ್ಲಾಧ್ಯಕ್ಷ ರಾಜೇಶ ಗುತ್ತೇದಾರ, ಜೆಡಿಎಸ್ ಮುಖಂಡ ಬಾಲರಾಜ ಗುತ್ತೇದಾರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ಸಾಲಿ, ಡಾ.ಸದಾನಂದ ಪೆರ್ಲಾ, ಶಂಕರಗೌಡ ರಾವೂರಕರ್ ಮಾತನಾಡಿದರು.

ಪಿಎಸ್‍ಐ ಶ್ರೀಶೈಲ್ ಅಂಬಾಟಿ, ಮುಖಂಡರಾದ ಸತೀಶ ಗುತ್ತೆದಾರ, ವೆಂಕಟೇಶ ಕಡೇಚೂರ, ಮಹಾದೇವ ಗುತ್ತೆದಾರ, ನಾಗರಾಜ ಬಂಕಲಗಿ, ವಿನೋದ ಗುತ್ತೆದಾರ, ಬಸವರಾಜ ಬೆಣ್ಣೂರಕರ್, ಸುರೇಶ ಗುತ್ತೇದಾರ, ಸುನೀಲ್ ಗುತ್ತೇದಾರ, ಪಂಕಜಗೌಡ್, ಸಂತೋಷ ಗುತ್ತೇದಾರ, ಆನಂದ ರಾವೂರಕರ್, ಚೌರಯ್ಯ ಮುಕ್ತೇದಾರ, ಶ್ರೀಮಂತ ಗುತ್ತೇದಾರ, ಡಿ.ನರಸಯ್ಯಗೌಡ, ಹುಸನಯ್ಯ ಗುತ್ತೇದಾರ, ವಿನಯ ಗುತ್ತೇದಾರ, ಮಹೇಶ ಗುತ್ತೇದಾರ, ಅಂಬಯ್ಯ ಗುತ್ತೆದಾರ, ಶಿವಯ್ಯ ಗುತ್ತೇದಾರ, ರಾಘವೇಂದ್ರ ಗುತ್ತೇದಾರ, ಶರಣಬಸಪ್ಪ ಗುತ್ತೇದಾರ, ಕಾಶಿರಾಯ ಕಲಾಲ್, ಯಲ್ಲಯ್ಯ ಗುತ್ತೇದಾರ, ರಕ್ಷೀತ್ ಗುತ್ತೇದಾರ, ಸ್ವಸ್ತೀಕ್ ಭಂಡಾರಿ, ಉಮೇಶ ಗುತ್ತೇದಾರ, ಶಿವರಾಜ ಗುತ್ತೇದಾರ, ನರಸಯ್ಯ ಗುತ್ತೇದಾರ ಇತರರು ಇದ್ದರು.

ಪತ್ರಕರ್ತರ ಸಂಘದ ಜಿಲ್ಲಾ ಮಟ್ಟದ ಪ್ರಶಸ್ತಿ ಪುರಸ್ಕೃತ ಕಾಶಿನಾಥ ಗುತ್ತೇದಾರ, ಸಮುದಾಯದ ಅಳ್ಳೋಳ್ಳಿ ಗ್ರಾಪಂ ಅಧ್ಯಕ್ಷ ಅಂಜನೇಯ್ಯಾ ಗುತ್ತೇದಾರ, ಕಮರವಾಡಿ ಗ್ರಾಪಂ ಉಪಾಧ್ಯಕ್ಷ ರಾಮು ಗಡ್ಡಿಮನಿ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು, ರೇಣುಕಾ ಮರಗೋಳ ಪ್ರಾರ್ಥಿಸಿದಿರು, ಈಡಿಗ ಸಮಾಜದ ತಾಲೂಕು ಅಧ್ಯಕ್ಷ ನಾಗಯ್ಯ ಗುತ್ತೇದಾರ ಕರದಾಳ ಸ್ವಾಗತಿಸಿದರು, ಶಿಕ್ಷಕ ನರಸಪ್ಪ ಚಿನ್ನಾಕಟ್ಟಿ ನಿರೂಪಿಸಿದರು. ಕಾರ್ಯಕ್ರಮದ ಮುನ್ನ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ಭಾವಚಿತ್ರದ ಭವ್ಯ ಮೆರವಣಿಗೆ ನಡೆಯಿತು.