ನಾರಾಯಣ ಗುರುಗಳ ಜಯಂತಿ ಆಚರಣೆ

ದೇವದುರ್ಗ.ಸೆ.೧೪-ಪಟ್ಟಣದ ಮಿನಿವಿಧಾನಸೌಧ ಸಭಾಂಗಣದಲ್ಲಿ ತಾಲೂಕು ಆಡಳಿತದಿಂದ ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು
ತಹಸೀಲ್ದಾರ್ ಶ್ರೀನಿವಾಸ್ ಚಾಪೇಲ್ ನಾರಾಯಣ ಗುರುಗಳ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಪೂಜೆ ಸಲ್ಲಿಸಿದರು. ನಂತರ ಮಾತನಾಡಿ, ಬ್ರಹ್ಮಶ್ರೀ ನಾರಾಯಣ ಗುರುಗಳು ದೊಡ್ಡ ಸಾಮಾಜಿಕ ಚಿಂತಕರು. ವಿಶೇಷವಾಗಿ ಜಾತಿಭೇದ, ಧಾರ್ಮಿಕ ಭೇದ ಸೇರಿ ಅನಿಷ್ಠ ಪದ್ಧತಿಗಳ ವಿರುದ್ಧ ಹೋರಾಟ ಮಾಡಿದ್ದಾರೆ. ಸಾಮಾಜಿಕ ಸಮಾನತೆ ಹಾಗೂ ಶೈಕ್ಷಣಿಯ ಅಭಿವೃದ್ಧಿ, ಶೋಷಿತರ ಏಳಿಗೆಗಾಗಿ ಶ್ರಮಿಸಿದ್ದಾರೆ ಎಂದು ಹೇಳಿದರು.
ಕಚೇರಿ ಸಿಬ್ಬಂದಿ ಗೋವಿಂದ ನಾಯಕ್, ಶರಣಬಸವ, ಅಮರೇಶ್ ರಾಥೋಡ್, ಮುಖಂಡರಾದ ರಾಜಣ್ಣ ಅಬಕಾರಿ ಗುತ್ತೇದಾರ್, ರಮಾನಂದ್ ಪಾಟೀಲ್ ಅಬಕಾರಿ, ರಂಗನಾಥ್ ಅಬಕಾರಿ, ನಾಗರಾಜ್ ದಿನ್ನಿ, ಅಮರೇಶ್, ಡಾ.ಗಿರೀಶ್, ಕಸಾಪ ಮಾಜಿ ತಾಲೂಕು ಅಧ್ಯಕ್ಷ ಎಚ್.ಶಿವರಾಜ್, ಇಕ್ಬಾಲ್ ಸಾಬ್ ಅರಕೇರಾ, ಶಿವಕುಮಾರ್ ಛಲವಾದಿ ಇತರರಿದ್ದರು.