
ಕಲಬುರಗಿ:ಆ.18: ನಾವೆಲ್ಲರೂ ‘ನಾರಾಯಣ ಎನ್ನಿರೋ’ ಎನ್ನುವ ಹಾಡು ಹಾಡುತ್ತೆವೆ ಇದರ ಅರ್ಥವೇನೆಂದರೆ ನಾರಾಯಣ ಮಂತ್ರವು ಮೂಲ ಮಂತ್ರವಾಗಿದೆ ಶ್ರೀಮದಾಚಾರ್ಯರು ಅನೇಕ ಗ್ರಂಥಗಳಲ್ಲಿ ನಾರಾಯಣ ಶಬ್ದದಿಂದ ಮಂಗಳಚರತ್ವನ್ನು ಮಾಡಿದ್ದಾರೆ ಮಹಾಭಾರತ, ನಾರಾಯಣ ಎನ್ನುವ ಮಂತ್ರದಿಂದ ಆಗುತಿ ಸಂಧ್ಯಾವಂದನೆಯಲ್ಲಿಯೂ ನಾರಾಯಣ ಮಂತ್ರ , ಒಂದು ಗಾಯತ್ರಿಯಲ್ಲಿಯೂ 3 ನಾರಾಯಣ ಮಂತ್ರವಿದೆ ಎಂದು ನಾರಾಯಣ ಮಂತ್ರದ ಮಹತ್ವವನ್ನು ಪಂಡಿತ್ ಶ್ರೀಪ್ರಸನ್ನಾಚಾರ್ಯ ಮಾತನಾಡಿದರು.
ಕಲಬುರಗಿಯ ಕರುಣೆಶ್ವರ ನಗರದ ಜೈವೀರ ಹನುಮಾನ ಮಂದಿರದಲ್ಲಿ ಜೈವೀರ ಹನುಮಾನ್ ಭಜನಾ ಮಂಡಳಿ ಮಾತೆಯರು, ಮಹಿಳೆಯರು ಹಮ್ಮಿಕೊಂಡಿದ್ದ ಅಧಿಕಮಾಸದ ಸಮಾಪ್ತಿ ಹಾಗೂ ಭಜನೆ ಮಂಗಳ ಕಾರ್ಯಕ್ರಮದಲ್ಲಿ ಪ್ರವಚನ ನೀಡಿದ ಅವರು ಭಾಗವತದಲ್ಲಿ ಬರುವ ಅಜಮೇಳ ಹಾಗೂ ಗಜೇಂದ್ರ ಇವರೆಲ್ಲರಿಗೂ ಮೋಕ್ಷ ವಾದದ್ದು ಕೊನೆಗೆ ನಾರಾಯಣ ಎನ್ನುವ ನಾಮಸ್ಮರಣೆಯಿಂದ,
ಹಾಗಾಗಿ ಪುರಂದರದಾಸರು ನಾರಾಯಣ ಎನ್ನಿರೋ ಎನ್ನುವ ಹಾಡನ್ನು ನಮ್ಮೆಲ್ಲರಿಗಾಗಿ ಸಾಧನೆ ಮಾಡಲು ಮಾಡಿಕೊಟ್ಟಿದ್ದಾರೆ,ನಾರಾಯಣ ಮಂತ್ರವೇ ಪ್ರಧಾನವಾಗಿದೆ ಎಂದರು.
ಜೈ ವೀರ ಹನುಮಾನ್ ಭಜನಾ ಮಂಡಳಿಯ ಸದಸ್ಯರು ಇಂದು ಬೆಳಿಗ್ಗೆ ಬಡಾವಣೆಯ ಪ್ರಮುಖ ಬೀದಿಗಳಲ್ಲಿ ಕೋಲಾಟದ ಆಡುವುದರ ಮೂಲಕ ದೇವಸ್ಥಾನ ಪ್ರವೇಶ ಮಾಡಿದರು. ದೇವಸ್ಥಾನದಲ್ಲಿ ಲಕ್ಷ್ಮಿ ಸ್ಥಾಪನೆ ಮಾಡಿ ವಿವಿಧ ಹೂವು ಹಣ್ಣುಗಳಿಂದ ಅಲಂಕಾರ ಮಾಡಿದ್ದರು. ಭಜನೆ, ಹಾಡು, ಪ್ರವಚನ, ಆರತಿ ಮಾಡುವುದರ ಮೂಲಕ ಭಜನೆಯನ್ನು ಸಮರ್ಪಣೆ ಮಾಡಿದರು. ಅಧಿಕಮಾಸದಲ್ಲಿ ಕಳೆದ 33 ದಿನಗಳಿಂದ ಪ್ರತಿದಿನ ಭಜನಾ ಮಂಡಳಿಯ ಸದಸ್ಯರು ಶ್ರೀ ಪುರಂದರ ವಿಠಲ ಅಂಕಿತ ಬರುವ ಹಾಡುಗಳನ್ನು ತಾರತಮ್ಯ ರೀತಿಯಲ್ಲಿ ಹಾಡುತ್ತಿದ್ದರು, ಪ್ರತಿದಿನ ಭಜನಾ ಮಂಡಳಿಯ ಸದಸ್ಯರೆಲ್ಲರಿಗೂ ವಿವಿಧ ಆಹಾರ ಪದಾರ್ಥಗಳು, ವಸ್ತ್ರಗಳನ್ನು ಒಬ್ಬೊಬ್ಬರು ದಾನ, ದಕ್ಷಿಣೆ ರೂಪದಲ್ಲಿ ಕೊಡಲಾಗುತ್ತಿತ್ತು. ಕಿಶನರಾವ್ ಮಟಮಾರಿ ದಂಪತಿಗಳು ಪಂಡಿತರಿಗೆ, ಆಚಾರ್ಯರಿಗೆ ವಸ್ತ್ರದಾನ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜೈವೀರ ಭಜನಾ ಮಂಡಳಿಯ ಅಧ್ಯಕ್ಷೆ ಶ್ರೀಮತಿ ಪದ್ಮಜಾ ಜಮಖಂಡಿ ಮಾತನಾಡಿ ಅಧಿಕಮಾಸದಲ್ಲಿ ಪ್ರತಿದಿನ ನಿರಂತರವಾಗಿ ಭಜನೆ ಮಾಡುವುದರ ಮೂಲಕ ನಮ್ಮೆಲ್ಲರಲ್ಲಿಯೂ ಧಾರ್ಮಿಕ ಮನೋಭಾವನೆ ಹೆಚ್ಚಾಗಿದ್ದು ಬಡಾವಣೆ ಮಹಿಳೆಯರಲ್ಲೂ ಧಾರ್ಮಿಕ ಪ್ರಜ್ಞೆ ಮೂಡಿ ನಾವೆಲ್ಲರೂ ಸಂಘಟಿತರಾಗಿ ಹಿಂದೆಂದಿಗಿಂತಲೂ ಹೆಚ್ಚು ಒಗ್ಗಟ್ಟಾಗಿದ್ದೇವೆ ಎಂದರು. ಶ್ರಾವಣ ಮಾಸದಲ್ಲಿಯೂ ಕೂಡ ಭಜನಾ ಮಂಡಳಿಯಿಂದ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಭಜನಾ ಮಂಡಳಿಯ ಪ್ರಮುಖರಾದ ವಂದನಾ ಜಾಗೀರ್ದಾರ್, ಹೇಮಾ ಚೌಡಾಪೂರಕರ್, ಮಾಲಿನಿ ಕೆ ಮಟಮಾರಿ, ರಜನಿ ಸೂಗೂರು, ಗಿರಿಜಾ ಸಿಂದಗಿ, ಅಶ್ವಿನಿ ಕುಲಕರ್ಣಿ, ಸವಿತಾ ಕುಲಕರ್ಣಿ, ತರುಣಾ ಕುಲಕರ್ಣಿ, ಪರಿಮಳ ಕುಲಕರ್ಣಿ, ದೀಪಾ ಹಾಗೂ
ಜೈವೀರ ಹನುಮಾನ್ ದೇವಸ್ಥಾನದ ಅಧ್ಯಕ್ಷ ಅವಿನಾಶ್ ಕುಲಕರ್ಣಿ ರೇವೂರ್, ಕಿಶನರಾವ್ ಮಟಮಾರಿ, ಗಿರೀಶ್ ಕುಲಕರ್ಣಿ, ವಿನುತ ಜೋಶಿ, ಅರ್ಚಕರಾದ ಪ್ರದ್ಯುಮ್ನಾಚಾರ್ಯ ಜೋಶಿ, ರಾಮಚಂದ್ರ ಸೂಗೂರು, ವಿಜಯಕುಮಾರ್ ಕುಲಕರ್ಣಿ, ಗುಂಡು ಕುಲಕರ್ಣಿ, ಹೃಷಿಕೇಶ್ ಚೌಡಾಪುರ್ ಸಮೀರ್ ಕುಲಕರ್ಣಿ, ವಿಶ್ವಾಸ್ ಮೊಘೇಕರ್ ಸೇರಿದಂತೆ ಭಜನಾ ಮಂಡಳಿಯ ಅನೇಕರು ಉಪಸ್ಥಿತರಿದ್ದರು.