ನಾರಾಯಣಗೌಡ ಬಂಧನ ಖಂಡಿಸಿ ಕರವೇ ಪ್ರತಿಭಟನೆಬಿಡುಗಡೆಗೆ ಆಗ್ರಹಿಸಿ ಸಿಎಂಗೆ ಮನವಿ ಸಲ್ಲಿಕೆ

ವಿಜಯಪುರ,ಡಿ.29:ಕನ್ನಡ ನಾಮ ಫಲಕ ಹೋರಾಟದಲ್ಲಿ ಪಾಲ್ಗೊಂಡ ಕರವೇ ರಾಜ್ಯಾಧ್ಯಕÀ ಟಿ.ಎ. ನಾರಾಯಣಗೌಡ ಆವರÀನ್ನು ಹಾಗೂ ಕಾರ್ಯಕರ್ತರನ್ನು ಬಂಧಿಸಿರುವುದನ್ನು ಖಂಡಿಸಿ ಹಾಗೂ ಬಂಧಿತರನ್ನು ಕೂಡಲೇ ಬಿಡುಗಡೆಗೊಳಿಸಬೇಕೆಂದು ಒತ್ತಾಯಿಸಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.

ವಿಜಯಪುರ ನಗರ ಗಾಂಧಿ ವೃತ್ತದಲ್ಲಿ ಜಮಾಯಿಸಿದ ಕರವೇ ಪದಾಧಿಕಾರಿಗಳು ನಿನ್ನೆ ರಾಜ್ಯದ ರಾಜ್ಯಧಾನಿ ಬೆಂಗಳೂರಿನಲ್ಲಿ ಕನ್ನಡ ನಾಮ ಫಲಕ ಕಡ್ಡಾಯವಾಗಿ ಅಳವಡಿಸುವಂತೆ ಶಾಂತಿಯುತ ಹೋರಾಟ ಕೈಕೊಂಡ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡ ಅವರನ್ನು ಸೇರಿದಂತೆ ಹಲವು ಕಾರ್ಯಕರ್ತರನ್ನು ಹಾಗೂ ವಿಜಯಪುರ ಜಿಲ್ಲಾಧ್ಯಕ್ಷ ಎಂ.ಸಿ. ಮುಲ್ಲಾ ಅವರನ್ನು ಬಂಧಿಸಿರುವ ಸರ್ಕಾರದ ಧೋರಣೆಯನ್ನು ತೀವ್ರವಾಗಿ ಖಂಡಿಸಿದರು.

ಈ ಪ್ರತಿಭಟನೆಯನ್ನುದ್ದೇಶಿಸಿ ನಗರ ಅಧ್ಯಕ್ಷ ಫಯಾಜ್ ಕಲಾದಗಿ ಅವರು ಮಾತನಾಡಿ, ಸರ್ಕಾರದ ಕನ್ನಡ ವಿರೋಧಿ ನೀತಿ ನಾವು ಸಹಿಸಲು ಸಾಧ್ಯವಿಲ.್ಲ ಕನ್ನಡಿಗರನ್ನು ಕೆಣಕಿದ ರಾಜ್ಯ ಸರ್ಕಾರದ ಹುನ್ನಾರ ಸಲ್ಲದು. ಕೂಡಲೇ ಸರ್ಕಾರ ಎಚ್ಚೆತ್ತುಕೊಂಡು ಬಂಧಿತರನ್ನು ಬಿಡುಗಡೆಗೊಳಿಸಬೇಕೆಂದು ಒತ್ತಾಯಿಸಿದರು.

ಮುಖ್ಯಮಂತ್ರಿಗಳು ಇದನ್ನು ಅರ್ಥೈಸಿಕೊಂಡು ಕೂಡಲೇ ಬಂಧಿತರನ್ನು ಬಿಡುಗಡೆಗೊಳಿಸಬೇಕು. ಇಲ್ಲದಿದ್ದರೆ ಉಗ್ರಹೋರಾಟ ಕೈಗೊಳ್ಳಲಾಗುವುದೆಂದು ಎಚ್ಚರಿಸಿದರು.

ಜಿಲ್ಲಾ ಪ್ರಧಾನ ಕಾರ್ಯದಾರ್ಶಿ ಸುರೇಶ ಬಿಜಾಪೂg ಮಾತನಾಡಿದರು.

ಕರವೇ ಜಿಲ್ಲಾ ಸಾಮಾಜಿಕ ಜಾಲತಾಣ ಸಂಚಾಲಕÀ ದಸ್ತಗೀರ ಸಾಲೋಟಗಿ ಮಾತನಾಡಿ, ಸರ್ಕಾರದ ಕರವೇ ವಿರುದ್ಧ ನಡೆದುಕೊಳ್ಳುತ್ತಿರುವ, ರೀತಿ ನೀತಿ, ಸರಿ ಕಂಡು ಬರುತ್ತಿಲ.್ಲ ಕರವೇಯಲ್ಲಿ ಪಕ್ಷಾತೀತ ಎಲ್ಲ ಧರ್ಮಿಯರು ಇರುವುದನ್ನು ಸರ್ಕಾರ ಗಮನಿಸಬೇಕು ಎಂದರು.

ಪ್ರತಿಭಟನೆಯಲ್ಲಿ ಅಶೋಕ ನಾವಿ, ಬಸವರಾಜ ಚಪ್ರೆ, ದಯಾನಂದ ಸಾವಳಗಿ, ರವಿ ಮುರಗೋಡ, ಮನೋಹರ ತಾಜವ, ಬಸವರಾಜ ಬಿ.ಕೆ, ರಜಾಕ ಕಾಖಂಡಕಿ, ಆಸೀಫ ಪೀರವಾಲೆ, ತಾಜುದ್ದೀನ ಖಲಿಪಾ, ಸಂತೋಷ ಮುಧೋಳ, ಡಿ.ಎಸ್.ಪೀರಜಾಧೆ, ಕೆ.ಕೆ.ಬನಹಟ್ಟಿ ಸೇರಿದಂತೆ ಹಲವರು ಉಪಸ್ಥಿತರಿದ್ದರು,