ನಾರಾಯಣಗೌಡ ಕಾಂಗ್ರೆಸ್ ಸೇರ್ಪಡೆ ವಿರುದ್ದ ಆಕ್ರೋಶ

ಕೆ.ಆರ್.ಪೇಟೆ: ಮಾ.07:- ಸಚಿವ ನಾರಾಯಣಗೌಡ ಕಾಂಗ್ರೆಸ್ ಸೇರ್ಪಡೆ ವಿಚಾರಕ್ಕೆ ಸಂಬಂಧಿಸಿದಂತೆ ಸ್ವಪಕ್ಷದ ನಾಯಕರುಗಳ ವಿರುದ್ಧ ರೊಚ್ಚಿಗೆದ್ದ ಕಾಂಗ್ರೆಸ್ ಕಾರ್ಯಕರ್ತರು ಜಿಲ್ಲಾ ಡಿಸಿಸಿ ಅಧ್ಯಕ್ಷ ಹಾಗೂ ಟಿಕೆಟ್ ಆಕಾಂಕ್ಷಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದ ಕಾಂಗ್ರೆಸ್ ಕಛೇರಿಯಲ್ಲಿ ಏರ್ಪಡಿಸಿದ್ದ ಪ್ರಜಾದ್ವನಿ ಪೂರ್ವಭಾವಿ ಸಭೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ನಾಯಕರುಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.
ಬಳೆ ತೊಟ್ಟು ಮನೆಯಲ್ಲಿರಿ.
ಕಾಂಗ್ರೆಸ್ ಜಿಲ್ಲಾಧ್ಯಕ್ಷನಿಗೆ ಬಳೆ ಕೊಟ್ಟ ಕಾರ್ಯಕರ್ತರು ನಿಮಗೆ ಆರುಜನರ ಪೈಕಿ ಒಬ್ಬರಿಒಗೆ ಟಿಕೆಟ್ ಕೊಡಿಸಲು ಆಗಲಿಲ್ಲ ಎಂದರೆ ಬಳೆತೊಟ್ಟಿಕೊಂಡು ಮನೆಯಲ್ಲಿ ಇರಿ. ನಿಮಗೆ ಏಕೆ ಬೇಕು ರಾಜಕೀಯ ಎಂದು ಆಕ್ರೋಶಭರಿತ ಮಾತನಾಡಿದರು. ಗೆದ್ದಲು ಕಟ್ಟಿದ ಹುತ್ತಕ್ಕೆ ಹಾವು ಸೇರುವಂತೆ ನಾರಾಯಣಗೌಡ ಮೊದಲು ಬಿಎಸ್‍ಪಿ, ಜೆಡಿಎಸ್, ಅನಂತರ ಬಿಜೆಪಿ ಸೇರಿ ಆ ಪಕ್ಷಗಳನ್ನು ಹಾಳುಗೆಡವಿ ಇದೀಗ ಕಾಂಗ್ರೆಸ್ ಪಕ್ಷದ ಬಾಗಿಲು ತಟ್ಟುತ್ತಿದ್ದಾರೆ ಇದು ನಿಮಗೆ ಅರ್ಥವಾಗುತ್ತಿಲ್ಲವೇ
ನಿಯತ್ತಿಲ್ಲದ ಮನುಷ್ಯ.
ಎರಡು ಅವಧಿಗೆ ತಮ್ಮನ್ನು ಶಾಸಕರನ್ನಾಗಿ ಮಾಡಿ ರಾಜಕೀಯ ಶಕ್ತಿ ನೀಡಿದ ಜೆಡಿಎಸ್ ಪಕ್ಷವನ್ನೆ ಕಾಲಿನಿಂದ ಒದ್ದವನು, ಪಕ್ಷಕ್ಕೆ ಕರೆತಂದು ಮಂತ್ರಿಯನ್ನಾಗಿ ಮಾಡಿದ ಬಿಜೆಪಿ ಪಕ್ಷವನ್ನೇ ಒದ್ದು ಕಾಂಗ್ರೆಸ್ ಪಕ್ಷಕ್ಕೆ ಬರುತ್ತಿರುವ ನಾರಾಯಣಗೌಡರಿಂದ ಕ್ರೇತದಲ್ಲಿ ಕಾಂಗ್ರೆಸ್ ಪಕ್ಷ ಕಟ್ಟಲು ಸಾಧ್ಯವಿಲ್ಲ. ಅಧಿಕಾರಕ್ಕಾಗಿ ಪಕ್ಷಕ್ಕೆ ಬರುತ್ತಿರುವ ಕೆ.ಸಿ.ನಾರಾಯಣಗೌಡ ನಾಳೆ ಕಾಂಗ್ರೆಸ್ ನಾಯಕತ್ವಕ್ಕೂ ಸೆಡ್ಡು ಹೊಡೆಯುತ್ತಾರೆ.
ಕೆ.ಆರ್.ಪೇಟೆ ಕಾಂಗ್ರೆಸ್‍ನಲ್ಲಿ ಹೈಡ್ರಾಮ.
ನಾರಾಯಣಗೌಡ ಕಾಂಗ್ರೆಸ್‍ಗೆ ಬರ್ತೀನಿ ಅಂತಾ ತಾಲ್ಲೂಕಿನಾದ್ಯಂತ ಹೇಳ್ತಾ ಇದ್ದಾರೆ. ನೀವುಗಳು ಇಲ್ಲಿ ಯಾಕೆ ಯಾತ್ರೆ ಅಂತಾ ಸಭೆ ಮಾಡ್ತಾ ಇದೀರಾ. ನಾರಾಯಣಗೌಡ ಟಿಕೆಟ್ ತಗೊಂಡರೆ ನೀವು ಗಂಡಸರಾಗಿರೋದಿಲ್ಲ ಹೆಂಗಸರಾಗಿ ಹೋಗಿ ಕೈಗೆ ಬಳೆ ತೊಟ್ಟುಕೊಳ್ಳಿ ಎಂದು ಕಾಂಗ್ರೆಸ್ ನಾಯಕರಿಗೆ ಬಳೆ ಕೊಟ್ಟ ಕಾರ್ಯಕರ್ತರು. ನಾರಾಯಣಗೌಡ ಕಾಂಗ್ರೆಸ್‍ಗೆ ಬಂದ್ರೆ ಪ್ರಜಾಧ್ವನಿ ಯಾತ್ರೆಗೆ ಕಲ್ಲು ಹೊಡೆಯುತ್ತೇವೆ. ಯಾವುದೇ ಕಾರಣಕ್ಕೂ ನಾರಾಯಣಗೌಡ ಕಾಂಗ್ರೆಸ್‍ಗೆ ಬರಬಾರದು ಎಂದು ಕಾಂಗ್ರೆಸ್ ನಾಯಕರಿಗೆ ಹಿಗ್ಗಾಮುಗ್ಗ ತರಾಟೆ ತೆಗೆದುಕೊಂಡರು.
ಕಾಂಗ್ರೆಸ್ ಫ್ಲೆಕ್ಸ್, ಬ್ಯಾನರ್ಸ್‍ಗೆ ಬೆಂಕಿ.
ನಾರಾಯಣಗೌಡನ ವಿರುದ್ಧ ಇಷ್ಟು ವರ್ಷ ನಾವು ಹೋರಾಡಿದ್ದೇವೆ. ನಮ್ಮ ಕಾರ್ಯಕರ್ತರು ಅವನಿಂದಾಗಿ ಜೈಲಿಗೆ ಹೋಗಿದ್ದಾರೆ. ದ್ವೇಷದ ರಾಜಕಾರಣ ಮಾಡಿ ಸಾವಿರಾರು ಕಾರ್ಯಕರ್ತರಿಗೆ ನೋವುಂಟುಮಾಡಿರುವ ನಾರಾಯಣಗೌಡ ಈಗ ಪಕ್ಷಕ್ಕೆ ಬಂದ್ರೆ ಹೇಗೆ ಸೇರಿಸಿಕೊಳ್ಳುತ್ತೀರಾ. ಕಾಂಗ್ರೆಸ್ ಪ್ರಜಾದ್ವನಿ ಕಾರ್ಯಕ್ರಮ ಹೇಗೆ ಮಾಡ್ತೀರಾ ಮಾಡಿ ನೋಡೋಣ. ನಾರಾಯಣಗೌಡ ದುಡ್ಡು ಕೊಡ್ತಾನೆ ಅಂತಾ ಪಕ್ಷಕ್ಕೆ ಸೇರಿಸಿಕೊಳ್ಳುತ್ತೀರಾ.? ನೀವೇಲ್ಲಾ ಗಂಡಸರಾ, ಬಳೆ ತೊಟ್ಟುಕೊಳ್ಳಿ. ಅವನನ್ನು ಸೇರಿಸಿಕೊಂಡರೆ ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ಸೇರಿದಂತೆ ಯಾರೆ ಬಂದರೂ ಕಲ್ಲಲ್ಲಿ ಹೊಡೆಯುತ್ತೇವೆ. ಎಂದು ಆಕ್ರೋಶ ವ್ಯಕ್ತಪಡಿಸಿ ರಸ್ತೆಯಲ್ಲಿ ಕಾಂಗ್ರೆಸ್ ಪಕ್ಷದ ಫ್ಲೆಕ್ಸ್, ಬ್ಯಾನರ್ಸ್ ಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು. ಸಭೆಯನ್ನು ಮುಗಿಸಿ ಹೊರಟಿದ್ದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಗಂಗಾಧರ್ ಕಾರಿಗೆ ಕಾಂಗ್ರೆಸ್ ಕಾರ್ಯಕರ್ತರು ಮೊಟ್ಟೆಗಳನ್ನು ಎಸೆದು ಆಕ್ರೋಶ ವ್ಯಕ್ತಪಡಿಸಿದರು.