ನಾರಾಯಣಗೌಡರಿಗೆ ಮತದಾರರು ತಕ್ಕ ಪಾಠ ಕಲಿಸಿ: ಹೆಚ್.ಟಿ.ಮಂಜು

ಕೆ.ಆರ್.ಪೇಟೆ.ಮಾ.08:- ಯಾವುದೇ ಪಕ್ಷದಲ್ಲಿಯೂ ಒಂದು ವಾರ ಅಥವಾ ಹದಿನೈದು ದಿನವೂ ಸಂಘಟನೆ ಮಾಡದೇ ಸುಲಭವಾಗಿ ಅಧಿಕಾರ ಅನುಭವಿಸುತ್ತಾ ಬಂದಿದ್ದು ಈಗಲೂ ಅದೇ ಕನಸು ಕಾಣುತ್ತಿರುವ ಸಚಿವ ನಾರಾಯಣಗೌಡರಿಗೆ ಮತದಾರರು ತಕ್ಕ ಪಾಠ ಕಲಿಸಿ ಎಂದು ಜೆಡಿಎಸ್ ಅಭ್ಯರ್ಥಿ ಹೆಚ್.ಟಿ.ಮಂಜು ತಿಳಿಸಿದರು.
ಅವರು ತಾಲ್ಲೂಕಿನ ಶೀಳನೆರೆ ಹೋಬಳಿಯ ತೆಂಡೇಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪಂಚರತ್ನ ಕಾರ್ಯಕ್ರಮದ ಪ್ರಯುಕ್ತ ಕರ್ನಾಟಕಕ್ಕೆ ಕುಮಾರಣ್ಣ ಕೆ.ಆರ್.ಪೇಟೆಗೆ ಮಂಜಣ್ಣ ಕಾರ್ಯಕ್ರಮದಲ್ಲಿ ಮಾತನಾಡಿ.
ಹಣದ ಮದ, ಅಧಿಕಾರದ ಮದ ಇವುಗಳು ಸಚಿವರಿಗೆ ತಲೆಗೇರಿದ್ದು ಹಣದಿಂದ ಎಲ್ಲರನ್ನೂ ಕೊಂಡುಕೊಳ್ಳಬಹುದು ಎನ್ನುವ ಭ್ರಮೆಯಲ್ಲಿ ಇರುವ ಸಚಿವರಿಗೆ ತಾಲ್ಲೂಕಿನಾದ್ಯಂತ ನಮ್ಮ ಕಾರ್ಯಕರ್ತರು ಸೂಚಿಸುತ್ತಿರುವ ಬೆಂಬಲ ನೋಡಿ ಕಂಗಾಲಾಗಿದ್ದು. ಏನಾದರೂ ಮಾಡಿ ಜೆಡಿಎಸ್ ಹಣಿಯಬೇಕೆಂಬ ಉದ್ದೇಶದಿಂದ ಎಲ್ಲಾ ಹೋಬಳಿಯ ಕೇಂದ್ರಗಳಲ್ಲಿಯೂ ಊಟ ಹಾಕಿಸಿ ಮರುಳುಮಾಡುವ ತಂತ್ರಕ್ಕೆ ಮೊರೆಹೋಗಿದ್ದಾರೆ. ಏನಾದರೂ ಮಾಡಿ ಗೆಲ್ಲಬೇಕು ಎನ್ನುವ ಉದ್ದೇಶದಿಂದ ಪಕ್ಷ ಬದಲಾಯಿಸುತ್ತಿದ್ದು, ಮಾಜಿ ಸ್ಪೀಕರ್ ಕೃಷ್ಣರವರ ಹೆಸರನ್ನು ಹೇಳಲು ಯಾವುದೇ ನೈತಿಕತೆ ಇಲ್ಲ. ದಿ.ಕೃಷ್ಣರವರ ಹೆಸರಲ್ಲಿ ರಾಜಕಾರಣ ಮಾಡುತ್ತಿರುವ ಇವರಿಗೆ ದಿ.ಕೃಷ್ಣರವರ ಹೆಸರೇಳಲು ಯೋಗ್ಯತೆಯೇ ಇಲ್ಲ. ಮತದಾರರು ತಕ್ಕ ಪಾಠ ಕಲಿಸಬೇಕು. ಇಡೀ ತಾಲ್ಲೂಕಿನಾದ್ಯಂತ ನಾರಾಯಣಗೌಡರಿಗೆ ಛೀ, ಥೂ ಎನ್ನುತ್ತಿದ್ದಾರೆ.
ತಾಲ್ಲೂಕಿನಾದ್ಯಂತ ಬಿಜೆಪಿ. ಕಾಂಗ್ರೆಸ್, ಜೆಡಿಎಸ್ ಪಕ್ಷದಲ್ಲಿರುವ ಗುತ್ತಿಗೆದಾರರಿಗೂ ಯಾವುದೇ ರೀತಿಯ ಅನುಕೂಲ ಮಾಡಿಕೊಡದೇ ತಮಗೆ ಬೇಕಾದವರಿಗೆ 40% ಹಣ ಪಡೆದು ರಸ್ತೆ ಕಾಮಗಾರಿ ನಡೆಸಿದರೆ ರಸ್ತೆಗಳ ಗುಣಮಟ್ಟವನ್ನು ನಿರೀಕ್ಷಿಸಲು ಹೇಗೆ ಸಾಧ್ಯ. ಹಣ ಪಡೆಯದೇ ಕೆಲಸ ನಿರೀಕ್ಷಿಸಿ ಆಗ ಜನರು ನಿಮ್ಮನ್ನು ಮೆಚ್ಚುತ್ತಾರೆ. ಹಣ ಬರುವವರೆಗೂ ಗುದ್ದಲಿಪೂಜೆಗೆ ಹೋಗದೇ ಗುತ್ತಿಗೆದಾರರನ್ನು ಸತಾಯಿಸುವ ಇವರಿಂದ ಅಭಿವೃದ್ದಿಯನ್ನು ಹೇಗೆ ತಾನೆ ನಿರೀಕ್ಷಿಸಲು ಸಾಧ್ಯ..? ನೀವು ಯಾವ ಪಕ್ಷಕ್ಕೆ ಹೋದರೂ ಅಭಿವೃದ್ದಿ ಸಾಧ್ಯವಿಲ್ಲ. ಸುಳ್ಳು ಹೇಳಿ ಜನರನ್ನು ಯಾಮಾರಿಸಬೇಡಿ.
ಇನ್ನೂ ತಾಲ್ಲೂಕಿನ ಅಭಿವೃದ್ದಿ ಮಾಡಬೇಕಿದೆ, ಮೆಡಿಕಲ್ ಕಾಲೇಜು ತರಬೇಕಿದೆ. ಅಂತೆಲ್ಲಾ ಹೇಳಿ ಆರುಖಾತೆಗಳನ್ನು ಅನುಭವಿಸಿ ಯಾವುದೇ ಅಭಿವೃದ್ದಿಯನ್ನೂ ಮಾಡದೆ ಜನರನ್ನು ಯಾಮಾರಿಸುತ್ತಿರುವ ನಿಮ್ಮ ನಿಜ ಬಣ್ಣ ಮುಂದಿನ ದಿನಗಳಲ್ಲಿ ಬಯಲಾಗಲಿದೆ. ಪದೇಪದೇ ಪಕ್ಷಬದಲಾಯಿಸುವ ನಿಮ್ಮ ಕುತಂತ್ರ ಇನ್ನು ಹೆಚ್ಚುದಿನ ನಡೆಯುವುದಿಲ್ಲ ಎಂದರು.
ಶೀಳನೆರೆ ಹೋಬಳಿ ನನ್ನನ್ನು ರಾಜಕೀಯವಾಗಿ ಮೇಲೆ ಬೆಳೆಸಿದ ಹೋಬಳಿಯಾಗಿದ್ದು ನನ್ನನ್ನು ನಂಬಿ ಮತ ನೀಡಿದ ಮತದಾರರಿಗೆ ಎಂದಿಗೂ ಮೋಸಮಾಡಿಲ್ಲ. ಜಿ.ಪಂ ಸದಸ್ಯನಾಗಿ ಎಲ್ಲಾ ಗ್ರಾಮಗಳಿಗೂ ಅನುದಾನ ಹಂಚಿ ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸಿದ್ದೇನೆ ಎಂದರು.
ಕಾರ್ಯಕ್ರಮದಲ್ಲಿ ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಜಾನಕೀರಾಮು, ಎಂಡಿಸಿಸಿ ಬ್ಯಾಂಕ್ ಉಪಾದ್ಯಕ್ಷ ಹೆಚ್.ಕೆ.ಅಶೋಕ್, ಟಿಎಪಿಸಿಎಂಎಸ್ ನಿರ್ದೇಶಕ ಬಲದೇವ್, ಶೀಳನೆರೆ ಹೋಬಳಿ ಘಟಕದ ಅಧ್ಯಕ್ಷ ಸ್ವಾಮೀಗೌಡ, ತಾಪಂ ಮಾಜಿ ಸದಸ್ಯ ಮೋಹನ್, ಶೀಳನೆರೆ ಗ್ರಾಪಂ ಸದಸ್ಯ ಸಿದ್ದೇಶ್, ಜೆಡಿಎಸ್ ಮುಖಂಡರಾದ ಪಾಪೇಗೌಡ, ಮರೀಗೌಡ, ಕೃಷ್ಣ, ನವೀನ್, ಸೇರಿದಂತೆ ಹಲವರಿದ್ದರು.