
ಬೀದರ : ಸೆ.1:ಪ್ರತಿ ವರ್ಷದಂತೆ ಈ ವರ್ಷವೂ ಸಹ ನೂಲು ಹುಣ್ಣಿಮೆ ಪ್ರಯುಕ್ತ ನಗರದ ವಿದ್ಯಾನಗರ ಕಾಲೋನಿಯ ಶ್ರೀ ಮಾರ್ಕಂಡೇಶ್ವರ ಮಂದಿರದಲ್ಲಿ ಪದ್ಮಶಾಲಿ ಸಮಾಜದ ವತಿಯಿಂದ ದಿನಾಂಕ 30-8-2023 ರಂದು ಬುಧವಾರ ಬೆಳಿಗ್ಗೆ ಅಭಿಷೇಕ ಮತ್ತು ಹೋಮ ಹವನ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಆಯೋಜಿಸಲಾಯಿತು. ನಂತರ ಸಂಜೆ ಶ್ರೀ ಮಾರ್ಕಂಡೇಶ್ವರ 38ನೇ ಪಲ್ಲಕ್ಕಿ ಮಹೋತ್ಸವ ಕಾರ್ಯಕ್ರಮ ನಡೆಸಲಾಯಿತು.
ಸಂಗೀತ ಭಜನೆ ಕಾರ್ಯಕ್ರಮದೊಂದಿಗೆ ಶ್ರೀ ಮಾರ್ಕಂಡೇಶ್ವರ ಮಂದಿರದಿಂದ ಪಲ್ಲಕ್ಕಿ ಮೆರವಣಿಗೆಯು ಹನುಮಾನ ಚೌಕ್, ರಾಮಚೌಕ್ ಮಾರ್ಗವಾಗಿ ಗಾಂಧಿಗಂಜ್‍ನ ಬಸವೇಶ್ವರ ಮಂದಿರಕ್ಕೆ ತಲುಪಿ, ದರ್ಶನ ಮುಗಿಸಿಕೊಂಡು ಪುನಃ ಶ್ರೀ ಮಾರ್ಕಂಡೇಶ್ವರ ಮಂದಿರಕ್ಕೆ ತೆರಳಲಾಯಿತು. ನಂತರ ರಾತ್ರಿ ದೈಹಂಡಿ (ಮೊಸರು ಗಡಿಗೆ) ಒಡೆಯುವ ಮೂಲಕ ಆಚರಿಸಲಾಯಿತು ಹಾಗೂ ದೇವರ ಶಾಲು ಹರಾಜು ಮಾಡುವ ಮುಖಾಂತರ ಕಾರ್ಯಕ್ರಮವನ್ನು ಸಮಾರೋಪಗೊಳಿಸಲಾಗುವುದು.
ಈ ಸಂದರ್ಭದಲ್ಲಿ ಪದ್ಮಶಾಲಿ ಸಮಾಜದ ಅಧ್ಯಕ್ಷ ರಾಜೇಂದ್ರ ಅಂಬಟೆ, ಉಪಾಧ್ಯಕ್ಷ ಪಂಡರಿನಾಥ ಗಡ್ಡಮ್, ಪ್ರಭಾಕರ ಜಟ್ಲಾ, ಶ್ರೀನಿವಾಸ ಗದ್ದೆ, ಸದಸ್ಯರಾದ ಮಲ್ಲಯ್ಯಾ ಗಾಜುಲ್, ದತ್ತಾತ್ರೇಯ ಮಾದಾಸ, ಸಂಗಮೇಶ್ವರ ಜಟ್ಲಾ, ನರಸಿಮುಲು ಕೋಟಾ, ಮೋಹನ ಕೋಚನ, ರಾಜು ಕೊಮಟಿ ಸೇರಿದಂತೆ ಸಮಾಜದ ನೂರಾರು ಭಕ್ತಾದಿಗಳು ಉಪಸ್ಥಿತರಿದ್ದರು.