ನಾರಂಜಾ ಸಕ್ಕರೆ ಕಾರ್ಖಾನೆಯಲ್ಲಿ ಕಬ್ಬು ನುರಿಸುವ ಕಾರ್ಯಕ್ಕೆ ಚಾಲನೆ

ಬೀದರ್,ನ.11-ಜಿಲ್ಲೆಯ ನಾರಂಜಾ ಸಹಕಾರ ಸಕ್ಕರೆ ಕಾರ್ಖಾನೆಯ ಪ್ರಸಕ್ತ ಸಾಲಿನ (2020-21 ನೇ ಹಂಗಾಮಿನ) ಕಬ್ಬು ನುರಿಸುವಿಕೆಯ ಕಾರ್ಯಕ್ಕೆ ಮಂಗಳವಾರ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ಭಾಲ್ಕಿಯ ಪೂಜ್ಯ ಬಸವಲಿಂಗ ಪಟ್ಟದ್ದೇವರು, ಭಾತಂಬ್ರಾದ ಪೂಜ್ಯ ಶಿವಯೋಗೇಶ್ವರ ಮಹಾಸ್ವಾಮಿಗಳು, ಹುಲಸೂರಿನ ಪೂಜ್ಯ ಶಿವಾನಂದ ಮಹಾಸ್ವಾಮಿಗಳು, ಮೇಹಕರ ರಾಜೇಶ್ವರದ ಪೂಜ್ಯ ರಾಜೇಶ್ವರ ಶಿವಾಚಾರ್ಯರು, ಸಾಯಗಾಂವದ ಪೂಜ್ಯ ಶ್ರೀಗಳು, ವಿಧಾನ ಪರಿಷತ್ತಿನ ಸದಸ್ಯ ರಘುನಾಥರಾವ ಮಲ್ಕಾಪೂರೆ, ಡಿ.ಸಿ.ಸಿ. ಬ್ಯಾಂಕಿನ ಅಧ್ಯಕ್ಷರು ಮಾರ್ಗದರ್ಶಕರು ಆದ ಉಮಾಕಾಂತ ನಾಗಮಾರಪಳ್ಳಿಯವರು ಉಪಸ್ಥಿತರಿದ್ದರು.
ಕಾರ್ಖಾನೆಯ ಅಧ್ಯಕ್ಷ ಡಿ.ಕೆ. ಸಿದ್ರಾಮ ಅವರು ಪೂಜೆ ನೆರವೇರಿಸಿ ಮಾತನಾಡಿ ಗುರುಪಾದಪ್ಪಾ ನಾಗಮಾರಪಳ್ಳಿ ಯವರು ಸ್ಥಾಪಿಸಿದಂಥ ನಾರಂಜಾ ಸಹಕಾರ ಸಕ್ಕರೆ ಕಾರ್ಖಾನೆ ಬೀದರ್ ಜಿಲ್ಲೆಯಲ್ಲಿ ನಂ. 1 ಕಾರ್ಖಾನೆಯಾಗಿದ್ದು, ಈ ಕಾರ್ಖಾನೆ ಪ್ರಸಕ್ತ ಸಾಲಿನಲ್ಲಿಯೂ ಉತ್ತಮ ರೀತಿಯಿಂದ ಕಾರ್ಯನಿರ್ವಹಿಸಿ ರೈತರಿಗೆ ಉತ್ತಮ ಬೆಲೆ ನೀಡುವ ಉದ್ದೇಶ ಹೊಂದಿದೆ. ರೈತರು ತಮ್ಮ ಕಬ್ಬನ್ನು ನಾರಂಜಾ ಸಹಕಾರ ಸಕ್ಕರೆ ಕಾರ್ಖಾನೆಗೆ ಸಾಗಿಸಬೇಕೆಂದು ಮನವಿ ಮಾಡಿದರು. ರೈತರ ಕಬ್ಬಿನ ಬೆಲೆಯನ್ನು ನಿಗದಿತ ಅವಧಿಯೊಳಗೆ ಪಾವತಿ ಮಾಡಲಾಗುವುದೆಂದು ಈ ಸಂದರ್ಭದಲ್ಲಿ ತಿಳಿಸಿದರು. ಉಪಾಧ್ಯಕ್ಷರಾದ ಬಾಲಾಜಿ ಚವ್ಹಾಣ, ನಿರ್ದೇಶಕರಾದ ಝರೆಪ್ಪಾ ಮಮದಾಪೂರೆ, ಚಂದ್ರಕಾಂತ ಪಾಟೀಲ, ರಾಜಕುಮಾರ ಕರಂಜಿ, ಶಂಕರೆಪ್ಪ ಪಾಟೀಲ, ಶಿವಬಸಪ್ಪಾ ಚನ್ನಮಲ್ಲೆ, ಸಿದ್ರಾಮ ವಾಗಮಾರೆ, ವಿಜಯಕುಮಾರ ಪಿ. ಪಾಟೀಲ, ಸಿತಾರಾಮ ಖೇಮಾ, ಶೋಭಾವತಿ ಪಾಟೀಲ, ಮಲ್ಲಮ್ಮಾ ಪಾಟೀಲ, ಶಶಿಕುಮಾರ ಪಾಟೀಲ, ವೀರಶೆಟ್ಟಿ ಪಟ್ನೆ, ನಾಗರೆಡ್ಡಿ ಯಾಚೆ, ವ್ಯವಸ್ಥಾಪಕ ನಿರ್ದೇಶಕ ಬಿ.ಎಸ್. ಅಪರಂಜಿ, ಗಣ್ಯ ಮಾನ್ಯರು, ಸುತ್ತ ಮುತ್ತಲ ಗ್ರಾಮದ ರೈತಬಾಂಧವರು ಹಾಗೂ ಕಾರ್ಖಾನೆಯ ಇಲಾಖಾ ಮುಖ್ಯಸ್ಥರು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.