ನಾಯಿ ವಿಚಾರಕ್ಕೆ ಯುವಕನ ಕೊಲೆ


 ಚಿತ್ರದುರ್ಗ,ನ.17: ನಾಯಿ  ವಿಚಾರವಾದಲ್ಲಿ ಎರಡು ಕುಟುಂಬಗಳ‌ ನಡುವೆ ಜಗಳ ನಡೆದು, ಜಗಳ ಓರ್ವನ ಕೊಲೆಯಲ್ಲಿ ಅಂತ್ಯಗೊಂಡಿರುವ ಘಟನೆ ಚಿತ್ರದುರ್ಗ ತಾಲೂಕಿನ ಜಾಲಿಕಟ್ಟೆ ಗ್ರಾಮದಲ್ಲಿ ನಿನ್ನೆ ರಾತ್ರಿ ನಡೆದಿದೆ.ಚಿತ್ರದುರ್ಗ ತಾಲೂಕಿನ ಜಾಲಿಕಟ್ಟೆ ಗ್ರಾಮದ ಮಹಂತೇಶ್ (23) ಕೊಲೆಯಾದ ವ್ಯಕ್ತಿ.ಇದೇ ಗ್ರಾಮದ ಸ್ವಾಮಿ ಎಂಬಾತ ಪ್ರತಿದಿನ ತನ್ನ ನಾಯಿಯನ್ನು ಕರೆದುಕೊಂಡು ಹೋಗಿ ಮಹಂತೇಶ್ ನ ಮನೆ ಮುಂದೆ ಬಹಿರ್ದೆಸೆ ಮಾಡಿಸುತ್ತಿದ್ದ. ಇದನ್ನು ಗಮನಿಸುತ್ತಿದ್ದ ಮಹಂತೇಶ ನಿನ್ನೆ ರಾತ್ರಿ ಇಲ್ಲಿ ಏಕೆ ಗಲೀಜು ಮಾಡಿಸುತ್ತಿಯಾ ಎಂದು ಕೇಳಿ, ಇದರಿಂದ ಮನೆಯ ಪರಿಸರ ಆಳಾಗುತ್ತದೆ. ನಾಯಿಯನ್ನು ಮುಂದೆ ಕರೆದುಕೊಂಡು ಹೋಗು ಎಂದು ಹೇಳಿದ್ದಾನೆ.ಇದೊಂದು ವಿಚಾರವಾಗಿ ಸ್ವಾಮಿ ಮತ್ತು ಕಮಲಮ್ಮ ಕುಟುಂಬ ಹಾಗೂ ಕೊಲೆಯಾಗಿರುವ ಮಹಂತೇಶ್ ಅವರ ಕುಟುಂಬದ ನಡುವೆ ಜಗಳ ನಡೆದಿದೆ.  ಮಹಂತೇಶ್ ಎನ್ನುವ ಯುವಕ ಮಾತಿನ ಚಕಮಕಿಯಲ್ಲಿ ಇದ್ದ ವೇಳೆ ಸ್ವಾಮಿ ಎಂಬಾತ ದೊಣ್ಣೆಯಿಂದ ಮಹಂತೇಶ್ ನ ತಲೆಗೆ ಬಲವಾಗಿ ಹೊಡೆದಿದ್ದಾನೆ‌. ಆಗ ತೀವ್ರ ರಕ್ತಸ್ರಾವವಾಗಿ ಗಾಯಗೊಂಡು ಕೆಳಗಡೆ ಬಿದ್ದ   ಮಹಂತೇಶ್ ನನ್ನು ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಯಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಹಂತೇಶ್  ಸಾವನ್ನಪ್ಪಿದ್ದಾನೆ.ಮಹಂತೇಶನ ಸಾವಿಗೆ ಕಾರಣವಾದ ಸ್ವಾಮಿ ಹಾಗೂ ಆತನ ಪತ್ನಿ ಕಮಲಮ್ಮನನ್ನು  ಗ್ರಾಮಾಂತರ ಠಾಣೆ ಪೋಲಿಸರು ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಿದ್ದಾರೆ.